ದೊಡ್ಡಬಳ್ಳಾಪುರ : ನಗರದ APMC ಅವರಣದಲ್ಲಿ ಕಳಪೆ ಕಾಮಾಗಾರಿ ನಡೆಯುತ್ತಿದೆ, ಓವರ್ ಹೆಡ್ ಟ್ಯಾಂಕ್ ಪೈಪ್ ಲೈನ್ ನನ್ನು ಮೇಲ್ಭಾಗದಲ್ಲಿ ಹಾಕಲಾಗುತ್ತಿದೆ, ವರ್ತಕರು ಪ್ರಶ್ನೆ ಮಾಡಿದ್ರೆ ಗುತ್ತಿದಾರ ಉಡಾಫೆಯ ಉತ್ತರ ನೀಡಿದಲ್ಲದೆ ಧಮ್ಕಿ ಹಾಕಿದ್ದಾನೆಂದು ಸ್ಥಳೀಯ ವರ್ತಕ ಅಶ್ವಥ್ ರೆಡ್ಡಿ ಆರೋಪಿಸಿದ್ದಾರೆ.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿದಿನ ಸಾವಿರಾರು ಗ್ರಾಹಕರು ವರ್ತಕರು ಸೇರಿದಂತೆ ಸಾರ್ವಜನಿಕರು ಬಂದು ಹೋಗುತ್ತಾರೆ, ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ವ್ಯಾಪಾರ ವಾಹಿವಾಟು ನಡೆಯುತ್ತದೆ. APMC ಮಾರುಕಟ್ಟೆಗೆ ಬಂದು ಹೋಗುವ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ನೀಡುವುದು APMC ಕರ್ತವ್ಯವಾಗಿದೆ.

ಆದರೆ, ಇಲ್ಲಿನ APMC ಅಧಿಕಾರಿಗಳಿಗೆ ಕಳಪೆ ಕಾಮಾಗಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಜವಬ್ದಾರಿಯೇ ಇಲ್ಲ, ಸಾರ್ವಜನಿಕರ ಅನಕೂಲಕ್ಕಾಗಿ ನಿರ್ಮಾಣವಾದ ಶುದ್ಧನೀರಿನ ಘಟಕ ನಿರ್ಮಾಣವಾಗಿ ವರ್ಷಗಳೇ ಕಳೆದ್ರು ಜನರ ಉಪಯೋಗಕ್ಕೆ ಬಂದಿಲ್ಲ. ಕಳಪೆ ಕಾಮಾಗಾರಿ ವಿರುದ್ಧ ಪ್ರಶ್ನೆ ಮಾಡಿದ್ರೆ ಗುತ್ತಿಗೆದಾರ ವರ್ತಕರಿಗೆ ಧಮ್ಕಿ ಹಾಕುತ್ತಾನೆ, ಗುತ್ತಿಗೆದಾರನ ದರ್ಪ ಮತ್ತು ಅಧಿಕಾರಿಗಳ ಅಸಡ್ಡೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ವರ್ತಕರು APMC ಕಛೇರಿ ಮುಂದೆಯೇ ಕೂತು ಪ್ರತಿಭಟನೆ ಮಾಡಿದರು.

ಇದೇ ವೇಳೆ ಮಾತನಾಡಿದ ವರ್ತಕಾರದ ಅಶ್ವಥ್ ರೆಡ್ಡಿ, ಕಳೆಪ ಕಾಮಾಗಾರಿ ಬಗ್ಗೆ ಗುತ್ತಿಗೆದಾರನ ಕೇಳಿದ್ರೆ, ಗುತ್ತಿಗೆದಾರ ವರ್ತಕರಿಗೆ ಯಾವುದೇ ಬೆಲೆ ಕೊಡದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ, ಅಧಿಕಾರಿಗಳಿಗೆ ಹೇಳ್ತಿಯಾ ಹೇಳಿಕೋ ಹೋಗು ಎಂಬ ಉಡಾಫೆ ಉತ್ತರವನ್ನು ನೀಡುತ್ತಿದ್ದಾನೆ. ಪ್ರಶ್ನೆ ಮಾಡಿದ ವರ್ತಕರ ಮೇಲೆ ಹಲ್ಲೆ ಮಾಡಲು ಮುಂದಾಗಿ ದೌರ್ಜನ್ಯ ಮಾಡುತ್ತಿದ್ದಾರೆ, ಈ ಕಾಮಗಾರಿಯ ಕುರಿತು ಸಂಪೂರ್ಣ ಮಾಹಿತಿಯನ್ನು ವರ್ತಕರಿಗೆ ಒದಗಿಸಬೇಕು ಇಲ್ಲವೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಅಗ್ರಹಿಸಿದರು.
ಈ ಕಾಮಗಾರಿಯಲ್ಲಿ ಬಳಸಲಾಗುತ್ತಿರುವ ವಸ್ತುಗಳು ಕಳಪೆ ಮಟ್ಟದ್ದಾಗಿದ್ದು ಪ್ರತಿನಿತ್ಯ ಮಾರುಕಟ್ಟೆಯಲ್ಲಿ 40 ಟನ್ ಗಳ ಭಾರ ಹೊಂದಿರುವ ವಾಹನಗಳು ಸಂಚಾರಿಸುತ್ತವೆ, ರಸ್ತೆಯ ಮೇಲ್ಭಾಗದಲ್ಲಿಯೇ ಪೈಪ್ ಲೈನ್ ಅಳವಡಿಸಲಾಗಿದೆ, ಒಂದು ಅಡಿ ಮೇಲಕ್ಕೆ ಹಾಕಲಾಗಿದ್ದು ವಾಹನಗಳ ಓಡಾಟದಿಂದ ಪೈಪ್ ಗಳು ಹಾಳಾಗುತ್ತದೆ, ಜನರ ತೆರಿಗೆ ದುಡ್ಡನ್ನು ವಿನಾ ಕಾರಣ ಪೋಲು ಮಾಡುತ್ತಿದ್ದಾರೆ. ಈ ಕುರಿತು ಎಪಿಎಂಸಿ ಮಾರುಕಟ್ಟೆಯ ಅಧಿಕಾರಿಗಳು ಗಮನ ಹರಿಸಬೇಕು ಗುಣಮಟ್ಟದ ಕಾಮಗಾರಿ ಮಾಡುವಂತೆ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿದರು.
ಈ ವೇಳೆ ವರ್ತಕರಾದ ಹನುಮಂತರಾಜು ಟಿ ಕೆ,ಶಿವಕುಮಾರ್, ಅರುಣ್,ಕೆಂಪೇಗೌಡ ಸೇರಿದಂತೆ ಹಲವು ಹಾಜರಿದ್ದರು.
