ದೊಡ್ಡಬಳ್ಳಾಪುರ : ಸಚಿವ ಸಂಪುಟ ಪುನರ್ ರಚನೆಯಾಗುತ್ತಿರುವ ಸಮಯದಲ್ಲಿ ಮಾದಿಗ ಸಮುದಾಯದ ಪ್ರಮುಖ ನಾಯಕರಾದ ಕೆ ಎಚ್ ಮುನಿಯಪ್ಪಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಶೋಷಿತರ ಪರ ನಿಲುವು ಕೈಗೊಳ್ಳಬೇಕು ಎಂದು ಮಾದರ ಮಹಾಸಭಾ ಮುಖಂಡ ರಾಮಕೃಷ್ಣ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದ ಅತಿ ದೊಡ್ಡ ಸಮುದಾಯವಾದ ಮಾದಿಗ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಇನ್ನಷ್ಟು ಬಲಿಷ್ಠ ಹಾಗೂ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕು ಕೆ . ಹೆಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು.ಆರ್.ಬಿ.ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ಹಾಗೂ ಹೆಚ್. ಆಂಜನೇಯ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ರಾಜ್ಯ ರಾಜಕೀಯದಲ್ಲಿ ದಲಿತರ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಪುರುಷೋತ್ತಮ್ ಮಾತನಾಡಿ ಮಾದಿಗ ಜನಾಂಗ ರಾಜ್ಯದಲ್ಲಿ ಅತಿ ದೊಡ್ಡ ದಲಿತ ಸಮುದಾಯವಾಗಿದ್ದು, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆದ ಸಾಮಾಜಿಕ ನ್ಯಾಯ ಒಳಗೊಂಡಂತೆ ಹಲವು ಪ್ರಗತಿಪರ, ಜನಪರ ಹೋರಾಟಗಳಲ್ಲಿ ನಿರಂತರವಾಗಿ ದಲಿತ ಸಮುದಾಯ ಪ್ರಮುಖ ಪಾತ್ರವಹಿಸುವ ಮೂಲಕ ಶಕ್ತಿ ತುಂಬುವ ಕಾರ್ಯ ಮಾಡಿದೆ.ಆದಾಗ್ಯೂ, ಸಮುದಾಯಕ್ಕೆ ಸರ್ಕಾರದಲ್ಲಿ ತಕ್ಕ ಮಟ್ಟಿನ ರಾಜಕೀಯ ಸ್ಥಾನಮಾನ ಸಿಗೆದಿರುವುದು ಬೇಸರದ ಸಂಗತಿಯಾಗಿದೆ ಈ ಸಮಯ ಸಚಿವ ಸಂಪುಟ ಪುನರ್ ರಚನೆಯಾಗುತ್ತಿದ್ದು ನಮ್ಮ ಮಾದಿಗ ಸಮುದಾಯದ ನಾಯಕರಾದ ಕೆ ಎಚ್ ಮುನಿಯಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜಕೀಯ ಸ್ಥಾನಮಾನದ ಕೊರತೆ ನೀಗಿಸಬೇಕು ಎಂದರು.

ಮಾದರ ಮಹಾಸಭಾ ತಾಲ್ಲೂಕು ಅಧ್ಯಕ್ಷ ತಾಳಗವಾರ ನಾಗರಾಜ್ ಮಾತನಾಡಿ ರಾಜ್ಯದ ಅತಿ ದೊಡ್ಡ ದಲಿತ ಸಮುದಾಯದ ಜನಸಂಖ್ಯೆ, ಕೊಡುಗೆಯನ್ನು ಪರಿಗಣಿಸಿದರೆ ಸಮರ್ಪಕ ಪ್ರಾತಿನಿಧ್ಯೆ ದೊರೆತಿಲ್ಲ. ನಮ್ಮ ಸಮುದಾಯದ ಪ್ರಮುಖ ನಾಯಕರಾದ ಕೆ ಎಚ್ ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜಕೀಯ ಶಕ್ತಿ ಹಾಗೂ ಸಾಮಾಜಿಕ ಪಾಲುದಾರಿಕೆಯ ಸಮುದಾಯದ ಭಾವನೆಗಳನ್ನು ಗೌರವಿಸಿ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ರಾಜ್ಯದ ಎಲ್ಲಾ ಮಾದಿಗ ಸಂಘಟನೆಗಳು, ಮಠಾಧೀಶರು, ಬುದ್ದಿಜೀವಿಗಳು, ಯುವ ಸಂಘಟನೆಗಳು, ನಿವೃತ್ತ ಅಧಿಕಾರಿಗಳು ಹಾಗೂ ಪ್ರಗತಿಪರ ಶಕ್ತಿಗಳು ಒಂದೇ ವೇದಿಕೆಯಲ್ಲಿ ನಿಂತು ಈ ನ್ಯಾಯಯುತ ಪ್ರಾತಿನಿಧ್ಯದ ಬೇಡಿಕೆಗೆ ಬೆಂಬಲ ನೀಡಬೇಕೆಂದು ಮುಖಂಡರು ಮನವಿ ಮಾಡಿದರು.
ಈ ವೇಳೆ ಮುಖಂಡರಾದ ರಾಮಕೃಷ್ಣಪ್ಪ ದೊಡ್ಡ ತುಮಕೂರು, ಅಪಕಾರನಹಳ್ಳಿ ಹನುಮಯ್ಯ, ಮಾದರ ಸಭಾ ತಾಲ್ಲೂಕು ಅಧ್ಯಕ್ಷ ತಳವಾರ್ ನಾಗರಾಜು,ವೆಂಕಟೇಶ್ ದೊಡ್ಡ ತುಮಕೂರು, ಗಂಗರಾಜು, ವೆಂಕಟೇಶ್ ಸಂಜಯನಗರ, ಕೆ ವಿ ಮುನಿಯಪ್ಪ ಕಾಡಲಪನ ಹಳ್ಳಿ,ಹನುಮಂತಯ್ಯ ಹಳೆಕೋಟೆ. ಲಕ್ಕಪ್ಪ ಕಾಡನೂರು. ಆರ್ ವಿ ಮಹೇಶ್, ಆರ್ ವಿ, ಶಿವಕುಮಾರ್, ಆರ್ ವಿ ಮನು, ಶ್ರೀ ರಾಮ್ ಮಲ್ಲೋಹಳ್ಳಿ. ರಾಜಘಟ್ಟ ಕಾಂತರಾಜು ವಕೀಲರು, ಖಾನೆಹೊಸಳ್ಳಿ ಮಂಜುನಾಥ್ ವಕೀಲರು. ಬಿಳಿಕೆರೆ ಮುನಿರಾಜು ವಕೀಲರು, ಕಲ್ಕೋಟೆ ನಾಗರಾಜು. ಚಿಕ್ಕನರಸಪ್ಪರವರು. ಕುರುವಿಗೆರೆ ಮುನಿರಾಜು, ಟಿ ಡಿ ಮುನಿಯಪ್ಪ,ಹಾಗೂ ಮಾಧಾರ ಮಹಾಸಭಾ ಸದಸ್ಯರು, ಹಲವು ಪ್ರಮುಖರು ಹಾಜರಿದ್ದರು.
