ದೊಡ್ಡಬಳ್ಳಾಪುರ : ಸಾವಿರಾರು ದಿನಗಳಿಂದ ನಿರ್ಗತಿಕ ಕಡುಬಡವರಿಗೆ ವಯೋವೃದ್ಧರಿಗೆ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ನಿರಂತರ ಅನ್ನದಾಸೋಹ ನಡೆಸುತ್ತಿರುವ ಮಲ್ಲೇಶ್ ರವರ ಹುಟ್ಟುಹಬ್ಬವನ್ನು ಇಂದು ಸಂಭ್ರಮಿಸಲಾಗುತ್ತಿದೆ ಅವರ ಹುಟ್ಟು ಹಬ್ಬದ ಅಂಗವಾಗಿ ಅನ್ನದಾಸೋಹ ಮಾಡಲಾಗುತ್ತಿದೆ ಎಂದು ಖ್ಯಾತ ವಕೀಲರು ಹಾಗೂ ಚಿರಋಣಿ ಕನ್ನಡ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ರವಿ ಮಾವಿನಕುಂಟೆ ತಿಳಿಸಿದರು.

ನಗರದ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2259 ದಿನಗಳಿಂದ ಪ್ರತಿನಿತ್ಯ ನಡೆಯುತ್ತಿರುವ ನಿರಂತರ ಅನ್ನದಾಸೋಹ ಸಮಿತಿಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಅನ್ನದಾಸೋಹ ಮಾಡುವುದು ಅಷ್ಟು ಸುಲಭದ ಕಾರ್ಯವಲ್ಲ ಅದರಲ್ಲೂ ದಾನಿಗಳಿಂದ ನಡೆಯುವ ಇಂತಹ ದಾಸೋಹ ಕಾರ್ಯಕ್ರಮಗಳಿಗಂತೂ ಅಡ್ಡಿ ಆತಂಕಗಳೇ ಹೆಚ್ಚು ಅಂತಹದರಲ್ಲಿ ಮಲ್ಲೇಶ್ ರವರು ನಿರಂತರ 2,259 ದಿನಗಳಿಂದ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಎಂದೂ ನಿಲ್ಲಿಸದೆ ನಿರಂತರವಾಗಿ ಹಸಿದವರಿಗೆ ಆಹಾರ ವಿತರಣೆ ಮಾಡುತ್ತಾ ಬರುತ್ತಿದ್ದಾರೆ. ಈ ಕಾರ್ಯಕ್ರಮವು ಕೇವಲ ಆಹಾರ ವಿತರಣೆಗೆ ಸೀಮಿತವಾಗದೆ ತರಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕಲಿಗಳನ್ನು ವಿತರಿಸುವ ವಯೋವೃದ್ದರಿಗೆ ಹೊದಿಕೆ ಬಟ್ಟೆಗಳು ವಿತರಿಸುವ, ಕಲಾ ಸೇವೆ ಮಾಡುವ ಕಲಾವಿದರಿಗೆ ತಮ್ಮ ಕಲೆ ಪ್ರದರ್ಶನ ಮಾಡಲು, ನೀಡಲು ಇಚ್ಛೆ ಉಳ್ಳ ದಾನಿಗಳಿಗೆ ತಮ್ಮ ವಿಶೇಷ ದಿನಗಳನ್ನು ಆಚರಿಸಿಕೊಳ್ಳುವ ಉತ್ತಮ ವೇದಿಕೆಯಾಗಿದೆ. ಇಷ್ಟೆಲ್ಲ ಉತ್ತಮ ಕಾರ್ಯಗಳಿಗೆ ಒಬ್ಬರೇ ಸಾರಥಿ ಅದು ಮಲ್ಲೇಶ್ ರವರು ಇಂದು ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಹಿತೈಷಿಗಳು ಅಭಿಮಾನಿಗಳು ಹಾಗೂ ಸಂಗಡಿಗರಿಂದ ಅವರ ಹುಟ್ಟು ಹಬ್ಬದ ಆಚರಣೆ ಮಾಡಲಾಗುತ್ತಿದೆ ಎಂದರು.

ಮಲ್ಲೇಶ್ ಒಬ್ಬ ಕಲಾವಿದರಾಗಿದ್ದು ಗಾಯನ ಮಾಡುವ ಮೂಲಕ ಜೀವನ ಸಾಗಿಸುತ್ತಾರೆ. ಕೊರೋನಾ ಸಂದರ್ಭದಲ್ಲಿ ಸ್ಥಳೀಯರ ಕೆಲ ನಿರ್ಗತಿಕ ಕಡುಬಡವರು ಹಾಗೂ ವಯೋವೃದ್ಧರ ಹಸಿವು ನೋಡಲಾಗದೆ ಪ್ರಾರಂಭವಾದ ಈ ಅನ್ನದಾಸೋಹ ಕಾರ್ಯಕ್ರಮವು ಎಲ್ಲೂ ನಿಲ್ಲದೆ ಪ್ರತಿನಿತ್ಯ ದಾನಿಗಳ ನೆರವಿನಿಂದ ಇಲ್ಲವೇ ಸ್ವತಹ ಮಲ್ಲೇಶ್ ರವರು ತಮ್ಮ ದುಡಿಮೆಯಿಂದ ಈ ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮವು ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ನೀಡುತ್ತದೆ ಕಲಿಯಲು ಬಯಸುವ ಮಕ್ಕಳಿಗೆ ಕಲಿಕಾ ಪರಿಕರಗಳನ್ನು ನೀಡುತ್ತದೆ ಒಟ್ಟಾರೆ ಬಯಸಿ ಬಂದವರಿಗೆ ಆಸರೆಯಾಗುತ್ತದೆ ಎಂದರು.

ಮಲ್ಲೇಶ್ ರವರು ಯಾವುದೇ ಸ್ವಾರ್ಥ ಇಟ್ಟುಕೊಳ್ಳದೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಅವರಿಗೆ ಸಮಾಜದಲ್ಲಿ ಉತ್ತಮ ಗೌರವ ಲಭಿಸುವಂತಾಗಲಿ ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಉನ್ನತ ಮಟ್ಟಕ್ಕೆ ಏರುವ ಮೂಲಕ ಸಮಾಜಕ್ಕೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.
