ದೊಡ್ಡಬಳ್ಳಾಪುರ : ಸಮಾಜದಲ್ಲಿ ನಿತ್ಯ ನಿರಂತರ ಹೆಚ್ಚು ಶೋಷಣೆಗೆ ಒಳಗಾದ ಸಮುದಾಯ ನಮ್ಮದು ಸಮಾಜದಲ್ಲಿ ಶೋಷಣೆಯಿಂದ ಹೊರಬರಲು ವಿದ್ಯೆಯಿಂದ ಮಾತ್ರ ಸಾಧ್ಯ ಹಾಗಾಗಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಮಾದರ ಮಹಾಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಬ್ಬಣ್ಣ ತಿಳಿಸಿದರು.
ಕರ್ನಾಟಕ ಮಾದರ ಮಹಾಸಭಾ ತಾಲ್ಲೂಕು ಘಟಕ ಹಾಗೂ ವಿಶ್ವಜ್ಞಾನಿ ಸೇವಾ ಟ್ರಸ್ಟ್ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾದಿಗ ಸಮುದಾಯಕ್ಕೆ ದೊರೆತ ಪುರಸ್ಕಾರಗಳಿಗಿಂತ ಅವಮಾನಗಳೇ ಹೆಚ್ಚು, ಸಂವಿಧಾನವೇ ನಮ್ಮ ಸಮುದಾಯಗಳ ಅಭಿವೃದ್ಧಿಗೆ ಮುಖ್ಯ ಕಾರಣ, ಬಡತನದಿಂದ ಶೋಷಣೆಯಿಂದ ಹೊರಬರಲು ಶಿಕ್ಷಣದಿಂದ ಮಾತ್ರ ಸಾಧ್ಯ, ಸಮುದಾಯದ ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯಲಿ ಎಂಬ ಉತ್ತಮ ಉದ್ದೇಶದಿಂದ ಈ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಸಮುದಾಯ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಮುದಾಯದ ಎಲ್ಲ ಪ್ರಮುಖರ ಸಹಾಯದಿಂದ ಇಂದು 150ಕ್ಕೂ ಅಧಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಗುತ್ತಿದೆ ಮುಂದೆ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಮಾದರ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ಈ ವೇಳೆ ಮುಖಂಡರಾದ ರಾಮಕೃಷ್ಣಪ್ಪ ದೊಡ್ಡ ತುಮಕೂರು, ಅಪಕಾರನಹಳ್ಳಿ ಹನುಮಯ್ಯ,ಪುರುಷೋತ್ತಮ್, ಮಾದರ ಸಭಾ ತಾಲ್ಲೂಕು ಅಧ್ಯಕ್ಷ ತಳವಾರ್ ನಾಗರಾಜು,ವೆಂಕಟೇಶ್ ದೊಡ್ಡ ತುಮಕೂರು, ಗಂಗರಾಜು, ವೆಂಕಟೇಶ್ ಸಂಜಯನಗರ, ಕೆ ವಿ ಮುನಿಯಪ್ಪ ಕಾಡಲಪನ ಹಳ್ಳಿ,ಹನುಮಂತಯ್ಯ ಹಳೆಕೋಟೆ. ಲಕ್ಕಪ್ಪ ಕಾಡನೂರು. ಆರ್ ವಿ ಮಹೇಶ್, ಆರ್ ವಿ, ಶಿವಕುಮಾರ್, ಆರ್ ವಿ ಮನು, ಶ್ರೀ ರಾಮ್ ಮಲ್ಲೋಹಳ್ಳಿ. ರಾಜಘಟ್ಟ ಕಾಂತರಾಜು ವಕೀಲರು, ಖಾನೆಹೊಸಳ್ಳಿ ಮಂಜುನಾಥ್ ವಕೀಲರು. ಬಿಳಿಕೆರೆ ಮುನಿರಾಜು ವಕೀಲರು, ಕಲ್ಕೋಟೆ ನಾಗರಾಜು. ಚಿಕ್ಕನರಸಪ್ಪರವರು. ಕುರುವಿಗೆರೆ ಮುನಿರಾಜು, ಟಿ ಡಿ ಮುನಿಯಪ್ಪ,ಹಾಗೂ ಮಾಧಾರ ಮಹಾಸಭಾ ಸದಸ್ಯರು, ಹಲವು ಪ್ರಮುಖರು ಹಾಜರಿದ್ದರು.
