ದೊಡ್ಡಬಳ್ಳಾಪುರ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜು. 14ರ ಭಾನುವಾರದಂದು ಮಹಿಳಾ ಸಮಾಜ ಕಸ್ತೂರಿಬಾ ಶಿಶುವಿಹಾರದ ಆವರಣದಲ್ಲಿ ತಾಲ್ಲೂಕಿನ ಗೃಹಿಣಿಯರು, ಹೆಣ್ಣು ಮಕ್ಕಳು ತಯಾರಿಸಿದ ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಜೊತೆಗೆ ವಿವಿಧ ಬಗೆಯ ತಿನಿಸುಗಳನ್ನು ಒಳಗೊಂಡ ಆಹಾರ ಮೇಳ ಆಯೋಜನೆ ಮಾಡಲಾಗಿದೆ ಎಂದು ಮಹಿಳಾ ಸಮಾಜ ಕಸ್ತೂರಿಬಾ ಶಿಶುವಿಹಾರ (ರಿ.)ದ ಅಧ್ಯಕ್ಷರಾದ ವತ್ಸಲಾ ತಿಳಿಸಿದರು.
ಮಹಿಳಾ ಸಮಾಜ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸ್ಥಳೀಯ ಮಹಿಳೆಯರಿಗೆ ತಮ್ಮ ಕಲೆ ಪ್ರದರ್ಶಿಸಲು ಮಹಿಳಾ ಸಮಾಜದ ವತಿಯಿಂದ ಉತ್ತಮ ವೇದಿಕೆ ಕಲ್ಪಿಸಲಾಗಿದೆ. ಬೆಳಿಗ್ಗೆ 11-00 ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರ ಗೀತೆಗಳ ಗಾಯನ ಆಯೋಜನೆ ಮಾಡಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಬಗೆಯ ಚಿತ್ರಾನ್ನಗಳು ಅಲ್ಲದೆ ಸಾವಯವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಸಾರ್ವಜನಿಕರಿಗೆ ಕಸ ವಿಂಗಡಣೆ ಕುರಿತು ಭಾರತೀಯ ಮಾನವ ವಸಾಹತುಗಳ ಸಂಸ್ಥೆಯ ಪ್ರತಿನಿಧಿ ಎಸ್ ವಿ ಪುಷ್ಕರ್ ಹಾಗೂ ಡಿ ಎ ಕಿರಣ್ ಮಾಹಿತಿ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾದ್ಯಾಯರಾದ ಜಯರಾಮಯ್ಯ, ಕಲಾವಿದರಾದ ಹಾಡೋನಹಳ್ಳಿ ಗೋವಿಂದರಾಜು,ಪರಿವರ್ತನಾ ಕಲಾಸಂಸ್ಥೆಯ ದೇವರಾಜು, ನೆಮ್ಮದಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ರಾಮು ಜೋಗಿಹಳ್ಳಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷರಾದ ಎಂ.ಕೆ. ವತ್ಸಲ, ಉಪಾಧ್ಯಕ್ಷರಾದ ನಿರ್ಮಲ, ಕಾರ್ಯದರ್ಶಿ ಬಿ.ಎ.ಗಿರಿಜಾ, ಸಹ ಕಾರ್ಯದರ್ಶಿ ಎಸ್. ವೀಣಾ, ಖಜಾಂಚಿ ಬಿ.ಸಿ. ಕವಿತಾ, ನಿರ್ದೇಶಕರಾದ ದೇವಕಿ, ಕವಿತ. ಕೆ.ಜೆ., ಎಂ. ಉಮಾದೇವಿ, ಮಮತ. ಕೆ.ಎಲ್, ವನಿತ. ಕೆ. ರೇವತಿ, ಕವಿತ. ಆರ್ ಸೇರಿದಂತೆ ಹಲವರು ಹಾಜರಿದ್ದರು.
