ದೊಡ್ಡಬಳ್ಳಾಪುರ : ಕನಕದಾಸ ನಗರದ ಎಲ್ಲಾ ಯುವಕರು ಒಟ್ಟಾಗಿ ಸುಮಾರು 19 ಅಂಶಗಳ ಸೇವಾಕಾರ್ಯಗಳನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ಸ್ಥಳೀಯ ನಿವಾಸಿಗಳಿಗೆ ಸೇವೆ ಕಲ್ಪಿಸುವ ನಿಟ್ಟಿನಲ್ಲಿ 12ನೇ ವಾರ್ಡ್ ಯೂತ್ ಬ್ರಿಗೇಡ್ ಅಸೊಸಿಯೇಶನ್ ಎಂಬ ಹೊಸ ತಂಡ ಕಟ್ಟಿದ್ದಾರೆ. ಇದು ಕೇವಲ ಒಂದು ವಾರ್ಡ್ ಗೆ ಸೀಮಿತವಾಗದೆ ನಗರದ ಎಲ್ಲಾ ವಾರ್ಡ್ ತಾಲ್ಲೂಕಿನ ಎಲ್ಲಾ ಪಂಚಾಯತಿಯಲ್ಲಿ ಸೇವೆ ಸಲ್ಲಿಸುವಂತಗಲಿ ಎಂದು ಮಾಜಿ ಶಾಸಕ ಟಿ ವೆಂಕಟರಮಣಯ್ಯ ತಿಳಿಸಿದರು.

ಕನಕದಾಸ ನಗರದ ಲಕ್ಷ್ಮಿ ದೇವಾಲಯದ ಆವರಣದಲ್ಲಿ ನಡೆದ ನೂತನ 12ನೇ ವಾರ್ಡ್ ಯೂತ್ ಬ್ರಿಗೇಡ್ ಅಸೊಸಿಯೇಶನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು ವಿದ್ಯಾವಂತ ಯುವಕರು ರಾಜಕೀಯವಾಗಿ ಮುಂದೆ ಬರಬೇಕು, ಸಮಾಜ ಸೇವೆ ವ್ಯಾಪಾರವಲ್ಲ ಜನಸೇವೆ ಮಾಡುವುದು ಭಾಗ್ಯವೇ ಸರಿ, ಇಂತಹ ಮಹತ್ಕಾರ್ಯವನ್ನು ಯುವಕರು ಯಾವುದೇ ಸ್ವಾರ್ಥ ವಿಲ್ಲದೆ ನಿಸ್ವಾರ್ಥ ಭಾವನೆಯಿಂದ ಪ್ರತಿ ಮನೆಮನೆಗೆ ಅಗತ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಯುವ ವಕೀಲರಾದ ನಾಗೇಂದ್ರ ಚಕ್ರವರ್ತಿ ಅವರ ನೇತೃತ್ವದಲ್ಲಿ ಯೂತ್ ಬ್ರಿಗೇಡ್ ಪ್ರಾರಂಭಿಸಿದ್ದಾರೆ. ಅವರೊಟ್ಟಿಗೆ ನಾವು ಸದಾ ಇದ್ದೇವೆ ಅವರ ಸೇವಾ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.

12ನೇ ವಾರ್ಡ್ ಯೂತ್ ಬ್ರಿಗೇಡ್ ಅಸೊಸಿಯೇಶನ್ ನ ಸಂಸ್ಥಾಪಕ ಅಧ್ಯಕ್ಷ ಹೆಚ್.ನಾಗೇಂದ್ರ ಚಕ್ರವರ್ತಿ ಮಾತನಾಡಿ ಯುವಕರು ಮನಸ್ಸು ಮಾಡಿದರೆ ಏನಾದರು ಸಾಧಿಸಬಹುದು ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ನಮ್ಮ ಕನಕದಾಸ ನಗರ(12ನೇ ವಾರ್ಡ್) ನ ಜನಸಾಮಾನ್ಯರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಸಲುವಾಗಿ ಈ ಹೊಸ ತಂಡವನ್ನು ರೂಪಿಸಿದ್ದು ನಮ್ಮ ವಾರ್ಡ್ ನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದರು.
ಈ ಅಸೊಸಿಯೇಶನ್ ಯಾವುದೇ ಜಾತಿ-ಧರ್ಮ ಕ್ಕೆ ಸೀಮಿತವಾಗಿಲ್ಲ ಸ್ಥಳೀಯ ನಿವಾಸಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಮಹದಾಸೆಯಿಂದಾಗಿ ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು ಎಲ್ಲರ ಸಹಕಾರ ಬಯಸುತ್ತೇವೆ ಎಂದರು.
ಪ್ರಮುಖ ಉದ್ದೇಶಗಳು :-
*ನಮ್ಮ ವಾರ್ಡ್ನಲ್ಲಿ ಯುವಕ / ಯುವತಿಯರಿಗೆ ಉದ್ಯೋಗ ಮೇಳಗಳ ಕಲ್ಪಿಸುವುದು
*ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರ ಅರೋಗ್ಯ ಕಾಪಾಡುವುದು. *ಸ್ಥಳೀಯ ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ, ವಿಧವಾ ವೇತನ ಹಾಗೂ ವಿಶೇಷ ಚೇತನರಿಗೆ ವೇತನ ಮಾಡಿಸುವುದು
*ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಯಿಂದ ಸಂಬಂದಪಟ್ಟ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದು.
*ಗ್ರಂಥಾಲಯದಲ್ಲಿ ಮಕ್ಕಳಿಗೆ ಉಚಿತವಾಗಿ ಸಂಜೆ ಪಾಠ ಮಾಡಿಸುವುದು.
*ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಬಗ್ಗೆ ಅರಿವು ಮತ್ತು ಸಂಬಂಧ ಪಟ್ಟ ಇಲಾಖೆಯೊಂದಿಗೆ ಸಂವಹನ ನಡೆಸುವುದು.
*ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೋಟ್ ಬುಕ್ಸ್ ವಿತರಣೆ ಕಾರ್ಯಕ್ರಮ
*ವಾರ್ಡ್ನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕುಂದು ಕೊರತೆ ಸಭೆ ನಡೆಸುವುದು
* ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಕಾನೂನು ಅರಿವು ಕಾರ್ಯಕ್ರಮ
*ಸ್ವಯಂ ಉದ್ಯೋಗದ ಬಗ್ಗೆ ತರಭೇತಿ ಕೊಡಿಸುವುದು.
*12ನೇ ವಾರ್ಡ್ನಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಬಗ್ಗೆ ನಗರಸಭೆಯ ಅಧಿಕಾರಿಗಳೊಂದಿಗೆ ಸಂವಹನ ನಡೆಸುವುದು.
*ವಾರ್ಡ್ ನಲ್ಲಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮ
*ವಾರ್ಡ್ನಲ್ಲಿ ದಾರ್ಶನಿಕರು ಮತ್ತು ಮಹಾ ಪುರುಷರಬಗ್ಗೆ ಅರಿವು ಮೂಡಿಸಿ ಅವರ ಜಯಂತಿ ಆಚರಣೆ ಮಾಡುವುದು
*ನಗರಸಭೆಯಲ್ಲಿ ಸಿಗುವ ಸೌಲಭ್ಯಗಳು ಎಸ್.ಸಿ.ಎಸ್.ಟಿ. ಒಬಿಸಿ ಅದರಬಗ್ಗೆ ಅರಿವು ಮೂಡಿಸುವುದು.
*ವಾರ್ಡ್ನಲ್ಲಿ ಪರಿಸರ ಜಾಗೃತಿ ಹಾಗೂ ಇನ್ನು ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು..
*ಯುವಕರಿಗೆ ಕಂಪ್ಯೂಟರ್ ತರಭೇತಿ ನೀಡುವುದು.
*ಮಹಿಳೆಯರಿಗೆ ಟೈಲರಿಂಗ್ ತರಭೇತಿ ನೀಡುವುದು.
*ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವುದು ಹಾಗೂ ಮಹಿಳೆಯರಿಗೆ ಸಿಗುವ ಸರ್ಕಾರಿ ಸೌಲಭ್ಯದಬಗ್ಗೆ ಅರಿವು ಮೂಡಿಸುವುದು.
*ವಾರ್ಡ್ ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕರ ಸಲಹೆಗಳನ್ನು ಸಂಗ್ರಹಿಸಿ ಅನುಷ್ಠಾನಗೊಳಿಸಲು ಪ್ರಯತ್ನಿಸುವುದು.

ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರಿಗೆ 12ನೇ ವಾರ್ಡ್ ಯೂತ್ ಬ್ರಿಗೇಡ್ ಅಸೊಸಿಯೇಶನ್ ವತಿಯಿಂದ ಆಯೋಜನೆ ಮಾಡಿದ್ದ ಕಂಬಳಿ ವಿತರಣೆ ಮಾಡಲಾಯಿತು.

ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು, 12ನೇ ವಾರ್ಡ್ ಯೂತ್ ಬ್ರಿಗೇಡ್ ಅಸೊಸಿಯೇಶನ್ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಹಾಜರಿದ್ದರು.
