ದೊಡ್ಡಬಳ್ಳಾಪುರ: ಅಲ್ಯೂಮಿನಿಯಂ ವಿದ್ಯುತ್ ಕೇಬಲ್ ಕಳ್ಳತನ ಪ್ರಕರಣಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಬೇಧಿಸಿದ್ದಾರೆ , ಅಂತರ್ ರಾಜ್ಯ ಕೇಬಲ್ ಕಳ್ಳರ ಜಾಲವನ್ನು ಭೇದಿಸಿರುವ ದೊಡ್ಡಬಳ್ಳಾಪುರ ಪೊಲೀಸ್ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ 11ರಂದು 600 ಮೀಟರ್ ಗಳಷ್ಟು ಅಲ್ಯೂಮಿನಿಯಂ ವೈರ್ ಹಾಗೂ ಜುಲೈ 14ರಂದು 6000 ಮೀಟರ್ ಗಳಷ್ಟು ಅಲ್ಯೂಮಿನಿಯಂ ವೈರ್ ಕಳ್ಳತನವಾಗಿತ್ತು ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು ಎರಡುಪ್ರತ್ಯೇಕ ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣಗಳ ಎಫ್ಐಆರ್ಗಳ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ತನಿಖೆ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ಪ್ರಸನ್ನ, ಲಕ್ಷ್ಮಿನಾರಾಯಣ ಹಾಗೂ ಡಿವೈಎಸ್ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ನೇತೃತ್ವದ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಬಂಧಿತರಿಂದ ₹10,00,000 ಮೌಲ್ಯದ ಅಲ್ಯೂಮಿನಿಯಮ್ ಪೀಸ್ ಗಳು ಹಾಗೂ ಸುಮಾರು 5,00,000 ಮೌಲ್ಯದ ಅಶೋಕ ಲೈಲಾಂಡ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹15,00,000 ಮೌಲ್ಯದ ಕಳವು ಮಾಲನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಾ. ನವೀನ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪಿ.ಎಸ್.ಐ ನಾರಾಯಣಸ್ವಾಮಿ, ಪ್ರೊ.ಪಿ.ಎಸ್.ಐ ವಿನಾಯಕ ಪಾಟೀಲ್, ಪ್ರೋ ಪಿ.ಎಸ್.ಐ ನಾಗರಾಜು. ರಾಧಾಕೃಷ್ಣ ಎ.ಎಸ್.ಐ. ಹೆಚ್.ಸಿ. ರಂಗನಾಥ್, ಹೆಚ್.ಸಿ. ಸುನಿಲ್ ಭಾಸಗಿ, ಹೆಚ್.ಸಿ ಮಂಜುನಾಥ, ಹೆಚ್.ಸಿ ಚಂದ್ರಶೇಖರ್, ಎ.ಹೆಚ್.ಸಿ ನಟರಾಜು ಪಿ.ಸಿ. ಸಚಿನ್ ಉಪ್ಪಾರ, ಪಿಸಿ ಪ್ರವೀಣ್ ಹಾಗೂ ತಾಂತ್ರಿಕ ಸಿಬ್ಬಂದಿಯವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಚಂದ್ರಕಾಂತ್ ಎಂ.ವಿ.,ಅಪರ ಪೊಲೀಸ್ ಅಧೀಕ್ಷಕರಾದ ಡಾ.ವೆಂಕಟೇಶ್ ಪ್ರಸನ್ನ,ಅಪರ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ ಎ.ವಿ., ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪಾಂಡುರಂಗ ಅಭಿನಂದಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿಗಳು ಅಂತರರಾಜ್ಯ ಮಟ್ಟದಲ್ಲಿ ಕೇಬಲ್ ಕಳ್ಳತನ ನಡೆಸುತ್ತಿದ್ದ ಜಾಲದ ಆರೋಪಿಗಳಾಗಿದ್ದು, ಇವರ ವಿರುದ್ದ ಇನ್ನಷ್ಟು ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ತಿಳಿಸಿದ್ದಾರೆ.
