ದೊಡ್ಡಬಳ್ಳಾಪುರ : ಪುಟಾಣಿ ಮಕ್ಕಳೇ ದೇಶದ ಆಸ್ತಿ, ಉತ್ತಮ ಸಮಾಜದ ನಿರ್ಮಾಣ ವಿದ್ಯಾವಂತ ಮಕ್ಕಳಿಂದ ಮಾತ್ರ ಸಾಧ್ಯ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ. ಮುಂದೆಯೂ ಸಹ ಶಾಲೆಯ ಅಭಿವೃದ್ಧಿಗೆ ಹಾಗೂ ಮಕ್ಕಳ ಕಲಿಕೆಗೆ ಅಗತ್ಯ ಸಹಾಯವನ್ನು ಮಾಡಲು ಸಿದ್ದರಿದ್ದೇವೆ ಎಂದು ಅನ್ವಿತ್ ಎಂಟರ್ಪ್ರೈಸಸ್ ನ ಮಾಲೀಕರು ಹಾಗೂ ರಾಜಘಟ್ಟ ಗ್ರಾಮ ಪಂಚಾಯತಿ ಸದಸ್ಯ ಎ ಶಿವಕುಮಾರ್ ತಿಳಿಸಿದರು.

ತಾಲ್ಲೂಕಿನ ರಾಜಘಟ್ಟ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅನ್ವಿತ್ ಎಂಟರ್ಪ್ರೈಸಸ್ ನ ಮಾಲೀಕರು ಹಾಗೂ ರಾಜಘಟ್ಟ ಗ್ರಾಮ ಪಂಚಾಯತಿ ಸದಸ್ಯ ಎ ಶಿವಕುಮಾರ್ ಹಾಗೂ ಸ್ಥಳೀಯ ಮುಖಂಡ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ತರಬೇತಿ ಉಡುಪು (track suit) ವಿತರಣೆ ಮಾಡಲಾಯಿತು.ರಾಜಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳು ದೇಶದ ಇತಿಹಾಸ ತಿಳಿಯುವುದು ಅಗತ್ಯ ಜೊತೆಗೆ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುವುದರ ಮಹತ್ವ ತಿಳಿಯುವುದು ಅನಿವಾರ್ಯವಾಗಿದೆ. ಬ್ರಿಟಿಷರಿಂದ ನಮಗೆ ಸುಲಭವಾಗಿ ಸ್ವಾತಂತ್ರ್ಯ ದೊರೆತಿಲ್ಲ ನಾವು ಈ ದಿನವನ್ನು ಅತ್ಯಂತ ಸಂತೋಷದಿಂದ ಆಚರಿಸುತ್ತಿದ್ದೇವೆ ಎಂದರೆ ಇದರ ಹಿಂದೆ ಲಕ್ಷಾಂತರ ವೀರ ದೇಶ ಭಕ್ತರ ಬಲಿದಾನ,ತ್ಯಾಗವಿದೆ.ಇಂದಿನ ಸ್ವಾತಂತ್ರ್ಯ ನಮ್ಮ ಹಿರಿಯರು ನಮ್ಮಗೆ ಕೊಟ್ಟ ಉಡುಗೊರೆ ನಾವು ಈ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಬಳಸಬೇಕು ಎಂದರು.
ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಕಣ್ಮನ ಸೆಳೆಯಿತು.
ಈ ವೇಳೆ ಸ್ಥಳೀಯ ಮುಖಂಡರಾದ ರವೀಶ್, ಶಿವಕುಮಾರ್ ಆರ್ ಸಿ, ಗ್ರಾಮ ಪಂಚಾಯತಿ ಸದಸ್ಯರಾದ ಆರ್ ಎ, ಶಿವಕುಮಾರ್, ಯುವ ಮುಖಂಡ ಆರ್ ಎ ಸುನಿಲ್, ವಿನೋದ್, ಮಾಜಿ ಅಧ್ಯಕ್ಷ ರು ಆರ್ ಜಿ ಮುನಿರಾಜು, ಆಂಜನೇಯ, ಕಾಂತಮ್ಮ, ಪ್ರಭ, ಆಶಾ, ವೀಣಾ, ಪದ್ಮ, ಶ್ಯಾಮಲಾ, ಎಸ್ ಡಿ ಎಂ ಸಿ ಸದಸ್ಯರಾದ ನರಸಿಂಹ ರಾಜು, ಶಾಲೆಯ ಮುಖ್ಯಪಾಧ್ಯಾಯರು, ಭೋದಕ ಹಾಗೂ ಬೋಧಕೇತರ ಸಿಬ್ಬಂದಿವರ್ಗ ಹಾಜರಿದ್ದರು.
