ದೊಡ್ಡಬಳ್ಳಾಪುರ : ತಾಲ್ಲೂಕಿನ ಗೂಳ್ಯ ವ್ಯಾಪ್ತಿಯ ನಂದಗುಂದ ಗ್ರಾಮದ ಸರ್ವೆ ನಂಬರ್ 28 ಹಾಗೂ ಸರ್ವೆ ನಂಬರ್ 30 ಸರ್ಕಾರಿ ಗೋಮಾಳ ಜಮೀನಿನ ವಿಚಾರದಲ್ಲಿ ಪ್ರತಿಭಟನಾಕಾರರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಎಲ್ಲಾ ಆರೋಪಗಳಿಗೆ ನ್ಯಾಯಾಲಯ ಮೂಲಕ ಉತ್ತರಿಸಲಿದ್ದೇವೆ ಎಂದು ಪ್ರಬುದ್ಧ ಕರ್ನಾಟಕ ಭೀಮಸೇನೆ ರಾಜ್ಯಾಧ್ಯಕ್ಷ ಯು.ಮುನಿರಾಜು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಜಮೀನಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗೆ ಸುಮಾರು ಎಂಟು ತಿಂಗಳ ಹಿಂದೆ ದೂರು ದಾಖಲು ಮಾಡಿದ್ದೇವೆ ,ಆದರೆ ಇಲ್ಲಿಯವರೆಗೂ ಕ್ರಮಕೈಗೊಳ್ಳುವುದುದಿರಲಿ ಕನಿಷ್ಠ ಪಕ್ಷ ಮಾಹಿತಿ ಸಹ ನೀಡಿಲ್ಲ ಅಲ್ಲದೆ ಇತ್ತೀಚಿನ ದಿನಗಳಲ್ಲೂ ಸಹ ಸ್ಥಳೀಯ ಅಧಿಕಾರಿಗಳಿಗೆ ದೂರು ದಾಖಲು ಮಾಡಿದ್ದು ,ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಸ್ಥಳೀಯ ತಹಸಿಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದರು.
ನಾವು ಎಷ್ಟೇ ದೂರು ದಾಖಲಿಸಿದರು, ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು ಇಲ್ಲಿಯವರೆಗೂ ತಪ್ಪಿತಸ್ಥರ ವಿರುದ್ಧ ಎಫ್ ಐ ಆರ್ ದಾಖಲಾಗಿಲ್ಲ.ಈ ಕುರಿತು ಎಫ್ ಐ ಆರ್ ದಾಖಲು ಮಾಡುವಂತೆ, ಕ್ರಮ ಕೈಗೊಳ್ಳುವಂತೆ ಬೃಹತ್ ಪ್ರತಿಭಟನೆ ಧರಣಿ ಮಾಡಿದ ಪ್ರಬುದ್ಧ ಕರ್ನಾಟಕ ಭೀಮಸೇನೆ ಹಾಗೂ ಕರ್ನಾಟಕ ದಲಿತ ಸಂರಕ್ಷಣಾ ಸೇನೆ ಹೋರಾಟಗಾರರ ಮೇಲೆ ಕೆಲ ವ್ಯಕ್ತಿಗಳು ಸುಳ್ಳು ಆರೋಪಗಳನ್ನ ಮಾಡಿ ಅವಮಾನ ಹಾಗೂ ತೇಜೋವದೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಅವರಿಗೆ ಮುಂದಿನ ದಿನಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಾಲಯದ ಮುಖಾಂತರ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಸರ್ವೆ ನಂಬರ್ 28ರಲ್ಲಿ 8 ಎಕರೆ 14 ಗುಂಟೆ ಸರ್ವೆ ನಂಬರ್ 30ರಲ್ಲಿ 4 ಎಕರೆ 30ಗುಂಟೆ ಸರ್ಕಾರಿ ಗೋಮಾಳ ಜಮೀನನ್ನ ಅಕ್ರಮವಾಗಿ ಅತಿಕ್ರಮಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಲಪಟಾಯಿಸಿ ಉದ್ದೇಶ ಪೂರಕವಾಗಿ ಪ್ರತಿಭಟನಾಕಾರರ ಮೇಲೆ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೊಟ್ಟಿರುವ ಅಧಿಕಾರಿಗಳ ಮೇಲೆಯೂ ಸಹ ಎಫ್ಐಆರ್ ದಾಖಲಿಸಬೇಕು ಇಲ್ಲದಿದ್ದರೆ ಸ್ಥಳದಲ್ಲಿಯೇ ಅನಿರ್ದಿಷ್ಟಾವಧಿ ಧರಣಿಯನ್ನ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕರ್ನಾಟಕ ದಲಿತ ಸಂರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ರಾವಣ್ ಮಾತನಾಡಿ ಸರ್ಕಾರಿ ಭೂ ಕಬಳಿಕೆ ಮಾಡಲು ಹೊರಟಿರುವ ಪ್ರಭಾವಿಗಳ ವಿರುದ್ಧ ಧ್ವನಿಯಾಗಿ ನ್ಯಾಯ ಕೇಳಿದ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಹೋರಾಟ ಎಂದರೆ ನ್ಯಾಯದ ಪರ ನಿಲ್ಲುವುದು ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಗೂಳ್ಯ ನಂದಗುಂದ ಗ್ರಾಮದ ಸರ್ವೆ ನಂಬರ್ 28 ಹಾಗೂ ಸರ್ವೆ ನಂಬರ್ 30 ಸರ್ಕಾರಿ ಗೋಮಾಳ ಜಮೀನಲ್ಲೆ ಹೋರಾಟ ನಡೆಸಲಾಗುವುದು. ಸುಕ್ತ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟು ಸರ್ಕಾರಿ ಭೂಮಿ ವಶಕ್ಕೆ ಪಡೆಯುವಂತೆ ಆಗ್ರಹಿಸಲಾಗುವುದು ಎಂದರು.
ನಾವು ಯಾರ ಬಳಿಯೂ ಯಾವುದೇ ಬೇಡಿಕೆ ಇಟ್ಟಿಲ್ಲ, ಯಾರಿಗೂ ಬೆದರಿಕೆ ಕೂಡ ಹಾಕಿಲ್ಲ ಹಾಗೇನಾದರೂ ಇದ್ದಲ್ಲಿ ಸಾಬೀತುಪಡಿಸಲಿ ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸೂಕ್ತವಲ್ಲ ನಮ್ಮ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳಿಗೆ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೂಲಕ ಉತ್ತರಿಸಲಾಗುವುದು ಎಂದರು.

ಈ ವೇಳೆ ಪ್ರಬುದ್ಧ ಕರ್ನಾಟಕ ಭೀಮಸೇನೆಯ ರಾಜ್ಯಾಧ್ಯಕ್ಷ ಯು.ಮುನಿರಾಜು. ಹಾಗೂ ಕರ್ನಾಟಕ ದಲಿತ ಸಂರಕ್ಷಣ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ , ಸಂಘಟನೆಯ ಮುಖಂಡರಾದ ವಸಂತ್ ಕುಮಾರ್, ರಘುಕುಮಾರ್, ಮಂಜುನಾಥ್, ಮತ್ತು ಭರತ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
