
ದೊಡ್ಡಬಳ್ಳಾಪುರ : ಈಗಾಗಲೇ ರಾಜ್ಯ ಸರ್ಕಾರ ನಾಮಫಲಕಗಳ ವಿಚಾರವಾಗಿ ಆದೇಶ ಹೊರಡಿಸಿದ್ದರೂ ನಿಯಮ ಉಲ್ಲಂಘನೆ ಮಾಡಿ ವಾಣಿಜ್ಯ ಸ್ಥಳಗಳಲ್ಲಿ ಕನ್ನಡೇತರ ನಾಮಫಲಕ ಹಾಕಲಾಗಿದೆ ಇಂತಹ ಕನ್ನಡೇತರ ನಾಮಫಲಕ ಕೂಡಲೇ ತೆರವುಗೊಳಿಸಬೇಕು ಎಂದು ಕನ್ನಡಪರ ಹೋರಾಟಗಾರ ಡಿ ಪಿ ಆಂಜನೇಯ ತಿಳಿಸಿದರು

ಕನ್ನಡ, ರೈತ, ಕಾರ್ಮಿಕ, ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟ (ದೊಡ್ಡಬಳ್ಳಾಪುರ )ತಾಲ್ಲೂಕು ವತಿಯಿಂದ ಆಯೋಜನೆ ಮಾಡಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕನ್ನಡೇತರ ನಾಮಫಲಕ ತೆರವು ಮಾಡುವ ಸಂದರ್ಭದಲ್ಲಿ ಘರ್ಷಣೆ ಸಾಮಾನ್ಯವಾಗಿದೆ. ಅಧಿಕಾರಿಗಳ ಸಹಯೋಗದೊಂದಿಗೆ ಕನ್ನಡೇತರ ನಾಮಫಲಕಗಳಿಗೆ ಮಸಿ ಬಳಿಯುವುದು, ಬಣ್ಣ ಬಳಿಯುವುದು ಮಾಡಬಹುದು ಎಲ್ಲರ ಅಭಿಪ್ರಾಯದೊಂದಿಗೆ ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದರು.
ಹಮಾಮ್ ವೆಂಕಟೇಶ್ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ನೂರಾರು ಕನ್ನಡಪರ ಸಂಘಟನೆಗಳಿವೆ ಆದರೆ ಇಂತಹ ಸಭೆಗಳಿಗೆ ಮಾತ್ರ ಬೆರಳೆಣಿಕೆಯಷ್ಟು ಬೇಸರ, ಪ್ರತಿ ಬಾರಿ ನಮ್ಮ ಕನ್ನಡೇತರ ನಾಮಫಲಕ ತೆರವುಗೊಳಿಸುವ ಹೋರಾಟಕ್ಕೆ ಮುಂದಾದಾಗ ಪೊಲೀಸ್ ಮತ್ತು ನಮ್ಮ ವಿರುದ್ಧ ಘರ್ಷಣೆ ಉಂಟಾಗುತ್ತದೆ ಇದನ್ನು ತಪ್ಪಿಸಬೇಕು ನಮ್ಮ ಹೋರಾಟ ಕನ್ನಡದ ಉಳಿವಿಗಾಗಿ ಬೇರೆ ಯಾರ ವಿರುದ್ಧವು ಅಲ್ಲ ಎಂಬುದನ್ನು ತಿಳಿಸಬೇಕಿದೆ ಎಂದರು.
ಅಗ್ನಿ ವೆಂಕಟೇಶ್ ಮಾತನಾಡಿ ಕನ್ನಡ ನಾಮಫಲಕ ವಿಚಾರವಾಗಿ ನಗರಸಭೆ ಪ್ರಮುಖ ಪಾತ್ರವಹಿಸುತ್ತದೆ. ಕನ್ನಡೇತರ ನಾಮಫಲಕಗಳ ತೆರವು ವಿಚಾರವಾಗಿ ಕರಪತ್ರ ಹೊರಡಿಸಿ, ನಗರಸಭಾ ಅಧಿಕಾರಗಳ ಜೊತೆಗೂಡಿ ಪತ್ರಿಕಾಗೋಷ್ಠಿ ಮುಖೇನಾ ಎಲ್ಲರಿಗೂ ಮಾಹಿತಿ ಕೊಟ್ಟು ಅಂತಿಮ ಗಡುವು ನೀಡಿ, ಅಧಿಕಾರಿಗಳ ಜೊತೆಗೂಡಿ ಕನ್ನಡೇತರ ನಾಮಫಲಕ ತೆರವುಗೊಳಿಸುವುದು ಉತ್ತಮ ಎಂದು ತಿಳಿಸಿದರು.

ಪ್ರತಿ ಮುಂಜಾನೆ ಸಾರ್ವಜನಿಕರ ಮನೆಬಾಗಿಲಿಗೆ ಹೋಗುವ ನಗರಸಭೆ ಕಸದ ಗಾಡಿಗಳ ಮೂಲಕ, ಇತರೆ ಮಾಧ್ಯಮಗಳನ್ನು ಬಳಸಿ ಕೊಂಡು ಕನ್ನಡೇತರ ನಾಮಫಲಕ ತೆರವು ಮಾಡುವಂತೆ ಮಾಹಿತಿ ರವಾನೆ ಮಾಡಿ ಅಂತಹ ನಾಮಫಲಕಗಳನ್ನು ತೆರವುಗೊಳಿಸಲು ಅಂತಿಮ ದಿನಾಂಕ ನಿಗದಿ ಮಾಡಿ ಅಧಿಕಾರಿಗಳ ಸಹಯೋಗದಲ್ಲಿ ಈ ಕಾರ್ಯಕ್ಕೆ ಮುಂದಾಗುವುದು ಉತ್ತಮ ಎಂದು ಕನ್ನಡಪರ ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಮುಖಂಡರಾದ ಸಂಜೀವ್ ನಾಯಕ್, ರಾಜಘಟ್ಟ ರವಿ, ರಾಜಘಟ್ಟ ರವಿ,ಜಿ. ಸುರೇಶ್, ಗೋವಿಂದರಾಜು, ಡಿ ಪಿ ಆಂಜನೇಯ, ಜೋಗಹಳ್ಳಿ ಅಮ್ಮು, ಜೆ. ಶಿವಕುಮಾರ್, ಅಗ್ನಿ ವೆಂಕಟೇಶ್,ಅನ್ನದಾಸೋಹಿ ಮಲ್ಲೇಶ್,ಮುನಿಯಪ್ಪ, ಹಮಾಮ್ ವೆಂಕಟೇಶ್, ವೇಣು, ರಮೇಶ್, ವೆಂಕಟೇಶ್, ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಹಾಜರಿದ್ದರು.




