
ದೊಡ್ಡಬಳ್ಳಾಪುರ, ನ.19: ರಾಷ್ಟ್ರೀಯ ಅಪಸ್ಮಾರ ದಿನದ ಅಂಗವಾಗಿ ದೊಡ್ಡಬಳ್ಳಾಪುರ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ Team KaBHI ಸಹಯೋಗದಲ್ಲಿ ಅಪಸ್ಮಾರ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅಪಸ್ಮಾರದ ಕುರಿತು ಇರುವ ತಪ್ಪು ಕಲ್ಪನೆಗಳು ಹಾಗೂ ಕಳಂಕವನ್ನು ನಿವಾರಿಸುವುದು, ರೋಗದ ಲಕ್ಷಣಗಳು, ಪ್ರಥಮ ಚಿಕಿತ್ಸೆ ಮತ್ತು ಚಿಕಿತ್ಸಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಮೂಳೆ ತಜ್ಞ ಡಾ. ಮಂಜುನಾಥ್ ಅವರು ಮಾತನಾಡಿ ಅಪಸ್ಮಾರವು ಚಿಕಿತ್ಸೆಗೆ ಒಳಪಡಬಹುದಾದ ನರಮಂಡಲದ ಕಾಯಿಲೆಯಾಗಿದೆ, ಇದಕ್ಕೆ ಪ್ರಮುಖ ಕಾರಣ ನಮ್ಮ ದೈನಂದಿಕ ಜೀವನ ಶೈಲಿ ಎಂದರೆ ತಪ್ಪಾಗಲಾರದು,ಇದು ಸಾಂಕ್ರಾಮಿಕವಲ್ಲ . ಆರಂಭಿಕ ರೋಗನಿರ್ಣಯ ಮತ್ತು ನಿಯಮಿತ ಔಷಧ ಸೇವನೆಯಿಂದ ನಾವು ಈ ಸಮಸ್ಯೆಯಿಂದ ಪಾರಾಗಬಹುದು ಎಂದರು.
ಆಯುಷ್ ವೈದ್ಯಾಧಿಕಾರಿ ಡಾ. ಹರಿಣಿ ಅವರು ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ಶೈಲಿ ನಮ್ಮ ಅರೋಗ್ಯವನ್ನು ಹಾಳು ಮಾಡುತ್ತಿದೆ,ಆರೋಗ್ಯಕರ ಜೀವನಶೈಲಿಯಿಂದ ನಮ್ಮ ಅರೋಗ್ಯ ಉತ್ತಮಗೊಳಿಸಿಕೊಳ್ಳಬಹುದಾಗಿದೆ , ಪ್ರಸ್ತುತ ಸಮಾಜದಲ್ಲಿ ಎಲ್ಲರೂ ಹಲವು ರೀತಿಯ ಒತ್ತಡಗಳಿಂದ ಬಳಲುತ್ತಿದ್ದೇವೆ ಎಂದರೆ ತಪ್ಪಾಗಲಾರದು ಯೋಗ, ಧ್ಯಾನ,ಆರೋಗ್ಯಕರ ವ್ಯಾಯಾಮ, ಉತ್ತಮ ಆಹಾರ ದಿಂದ ಒತ್ತಡ ನಿರ್ವಹಣೆ ಮಾಡಬಹುದಾಗಿದೆ ಎಂದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ Team KaBHI ಹಾಗೂ ಹರ್ಷಾ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ಅಪಸ್ಮಾರದ ಸಂದರ್ಭದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ ಮತ್ತು ತಪ್ಪು ಕಲ್ಪನೆಗಳ ಕುರಿತು ಜಾಗೃತಿ ನಾಟಕ ಪ್ರದರ್ಶಿಸಿದರು. ನಾಟಕವು ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಈ ವೇಳೆ ಆಡಳಿತ ವೈದ್ಯಧಿಕಾರಿ ಡಾ. ವಿಜಯಾ, ವೈದ್ಯರಾದ ಡಾ. ರಾಧಾ, ಡಾ. ಪರಮೇಶ್ವರ್, ಡಾ. ಹರಿಣಿ, ನರ್ಸಿಂಗ್ ಸೂಪರಿಂಟೆಂಡೆಂಟ್ ವಂದನಾ, Team KaBHI ಸದಸ್ಯರು ಹಾಗೂ ಹರ್ಷಾ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.




