ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯ ಎಷ್ಟು ಪ್ರಸಿದ್ದಿ ಪಡೆದಿದೆಯೋ ಅದಕ್ಕಿಂತಲೂ ಹೆಚ್ಚು ಇಲ್ಲಿನ ದ ಕಣಿವೆ ಮಾರಮ್ಮ ದೇವಿ ದೇವಾಲಯ ಪ್ರಸಿದ್ದಿ ಪಡೆದಿದೆ.
ಹೌದು ಕಣಿವೆ ಮಾರಮ್ಮ ದೇವಿ ವಾಣಿ ವಿಲಾಸ ಜಲಾಶಯ ಅಣೆಕಟ್ಟೆ ರಕ್ಷಕಿ ಎಂಬ ನಂಬಿಕೆ ಇದೆ. ಎರಡು ಗುಡ್ಡಗಳ ನಡುವೆ ವಾಣಿ ವಿಲಾಸ ಜಲಾಶಯ ಅಣೆಕಟ್ಟೆಯನ್ನು ನಿರ್ಮಿಸಿದ್ದು, ಎರಡು ಗುಡ್ಡಗಳ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲ ಇರುವ ಕಾರಣ ಕಣಿವೆ ಮಾರಮ್ಮ ಎಂಬ ಹೆಸರು ಬಂದಿದೆ.

ಇಲ್ಲಿನ ಭಕ್ತಾದಿಗಳು ಹೇಳುವ ಪ್ರಕಾರ ಕಣಿವೆ ಮಾರಮ್ಮನ ದೇವಸ್ಥಾನವು 14-15 ನೇ ಶತಮಾನದಲ್ಲಿ ಸ್ಥಾಪಿಸಿವಾಗಿತ್ತು ತದ ನಂತರ ಮೈಸೂರು ಅರಸರು ಡ್ಯಾಂ ಕಟ್ಟಿದ ಬಳಿಕ ಇದನ್ನು ಪುನರ್ ಸ್ಥಾಪಿಸಿದರು ಎನ್ನುತ್ತಾರೆ.
ಪ್ರತಿ ಮಂಗಳವಾರ ಶುಕ್ರವಾರ ತಾಯಿಗೆ ವಿಶೇಷ ಪೂಜೆ ಅಲಂಕಾರ ನೈವೇದ್ಯ ಸಮರ್ಪಣೆ ನಡೆಯುತ್ತದೆ. ಈ ದೇಗುಲಕ್ಕೆ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಮತ್ತಿತರರ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.

ಸಾಮಾನ್ಯವಾಗಿ ನಾವು ಎಲ್ಲಾ ದೇವಾಲಯಗಳಲ್ಲಿ ದೇವರ ಮುಂಭಾಗಕ್ಕೆ ಸಲ್ಲಿಸುತ್ತೇವೆ ಆದರೆ ಈ ದೇವಾಲಯದಲ್ಲಿ ದೇವಿಯ ಬೆನ್ನಿಗೆ ಪೂಜೆ ಸಲ್ಲಿಸುವುದು ವಿಶೇಷ ಈ ಕುರಿತು ಮಾಹಿತಿ ಪಡೆದರೆ ವಾಣಿ ವಿಲಾಸ ಜಲಾಶಯವನ್ನು ದೇವಿ ತನ್ನ ಹೆಬ್ಬೆರಳಿನಿಂದ ಒತ್ತಿ ಹಿಡಿದಿದ್ದು, ಜಲಾಶಯಕ್ಕೆ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಕಾಪಾಡುತ್ತಿದ್ದಾರೆ ಎನ್ನುವ ನಂಬಿಕೆ ಭಕ್ತರದ್ದು.ತಾಯಿಯ ಬೆನ್ನಿನ ಬದಿಯ ಭಾಗಕ್ಕೆ ಅಲಂಕಾರ ಮಾಡಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ.ಅಲ್ಲದೆ ಯಾವುದೇ ಕೆಲಸ ಪ್ರಾರಂಬಿಸುವ ಮೊದಲು ದೇವಿಯಲ್ಲಿ ಹೂವಿನ ಪ್ರಸಾದ ಕೇಳುವುದು ಇಲ್ಲಿನ ಜನರ ವಾಡಿಕೆ.
ಆಣೆಕಟ್ಟಿಗೆ ತಾಗಿಕೊಂಡೇ ಈ ದೇವಾಲಯವಿದ್ದು ಮಾರಿ ಕಣಿವೆ ಡ್ಯಾಂ ಎಂದು ಕರಿಸಿಕೊಳ್ಳುವ ವಾಣಿವಿಲಾಸ ಆಣೆಕಟ್ಟಿನ ಬಳಿಯಿರುವ ಮಾರಿಕಾಂಬ ಅಥವಾ ಕಣಿವೆ ಮಾರಮ್ಮ ದೇವಾಲಯಇರುವ ಕಾರಣ ಈ ದೇವಾಲಯವನ್ನು ಕಣಿವೆ ಮಾರಮ್ಮ ದೇವಾಲಯ ಎಂದು ಕರೆಯುತ್ತಾರೆ.
ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ದೇವಿಯ ಪೂಜೆಯಲ್ಲಿ ಪಾಲ್ಗೊಂಡು ದರ್ಶನ ಪಡೆಯುತ್ತಾರೆ. ಅದರಲ್ಲೂ ಮಂಗಳವಾರ ಹಾಗೂ ಶುಕ್ರವಾರ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ತಾಯಿಗೆ ವಿಶೇಷವಾಗಿ ರಥೋತ್ಸವ,ಗಾವು, ಸಿಡಿ,ದೊಡ್ಡ ಎಡೆ ಈ ರೀತಿ ಹಲವು ವಿಶೇಷ ಸೇವೆಗಳನ್ನು ಸಲ್ಲಿಸುವ ಪದ್ಧತಿ ಇದೆ.
