ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಕೆ.ಎಚ್. ಮುನಿಯಪ್ಪ ಅವರಿಗೆ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ನೀಡಿ ಮಾದಿಗ ಸಮುದಾಯಕ್ಕೆ ಬೇಸವನ್ನುಂಟು ಮಾಡಿದ್ದಾರೆ, ಅವರ ಹಿರಿತನಕ್ಕೆ ಸಮಾಜ ಕಲ್ಯಾಣ ಅಥವಾ ಗೃಹ ಖಾತೆಯನ್ನು ನೀಡುವಂತೆ ದೊಡ್ಡಬಳ್ಳಾಪುರ ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮನು.ಆರ್.ವಿ. ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಸಚಿವರಾದ ಕೆ.ಎಚ್.ಮುನಿಯಪ್ಪರವರು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿ ಅನುಭವಿಗಳಾಗರುವ ಇವರಿಗೆ ರಾಜ್ಯದಲ್ಲಿ ಉನ್ನತ ಮಂತ್ರಿ ಸ್ಥಾನ ನೀಡುವ ಮೂಲಕ ಮಾದಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಪರಿಶಿಷ್ಟ ಜಾತಿ ಎಸ್ಸಿ (ಎಡ) ಸಮುದಾಯದ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹಿರಿಯ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರಿಗೆ ಮನವಿ ಸಲ್ಲಿಸಿಲಾಗಿತ್ತು ಅದರಂತೆ ಕೆ ಹೆಚ್.ಮುನಿಯಪ್ಪ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುಬಹುದು ಎಂಬುದು ಸಮುದಾಯ ಆಶಾಯವಾಗಿತ್ತು ,ಉಪಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ ಆದರೆ ಆಹಾರ ಖಾತೆಯನ್ನು ಮುಂದುವರೆಸುವ ಬದಲು, ಸಮಾಜ ಕಲ್ಯಾಣ ಇಲಾಖೆ ಅಥವಾ ಗೃಹ ಖಾತೆಯನ್ನು ಕೆ.ಹೆಚ್.ಮುನಿಯಪ್ಪನವರಿಗೆ ನೀಡಬೇಕಿತ್ತು ಎಂದರು.
ನಮ್ಮ ಸಮಾಜದ ಮುಖ್ಯಸ್ಥರಾಗಿರುವ ಕೆ.ಹೆಚ್.ಮುನಿಯಪ್ಪ ರವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ, ಕೇಂದ್ರ ಸರ್ಕಾರದಲ್ಲಿ 7 ಬಾರಿ ಸಂಸದರಾಗಿ, ರೈಲ್ವೆ ಖಾತೆ ಸಚಿವರಾಗಿದ್ದವರು, ಕೆ.ಹೆಚ್.ಎಂ.ರವರಿಗೆ ಉತ್ತಮ ಸ್ಥಾನ ನೀಡದೆ ಇರುವುದು ಸಮುದಾಯಕ್ಕೆ ಅನ್ಯಾಯಮಾಡಲಾಗಿದೆ ಎಂದರು.
