ಬೆಂಗಳೂರು ಗ್ರಾಮಾಂತರ : ನೀವು ಆಧಾರ್ ಅಪ್ಡೇಟ್ ಮಾಡಿಸಬೇಕಾ ಅಥವಾ ಹೊಸದಾಗಿ ನೋಂದಣಿ ಮಾಡಿಸಬೇಕಾ ದಯವಿಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಆಧಾರ್ ನೋಂದಣಿ ಕೇಂದ್ರಕ್ಕೆ ಮಾತ್ರ ಬರಬೇಡಿ ಯಾಕಂದ್ರೆ ಇಲ್ಲಿ ಸರ್ವರ್ ಸಮಸ್ಯೆ ಜಾಸ್ತಿ… ಬೆಳ್ಳಗಿನಿಂದ ಹಲವಾರು ಮಂದಿ ತಮ್ಮ ಪುಟ್ಟ ಮಕ್ಕಳನ್ನು ಹಿಡಿದು ಕಾದು ಕುಳಿತರು ಅಧಿಕಾರಿಗಳಿಗೇನು ಬೇಸರವಿಲ್ಲ ಯಾಕಂದ್ರೆ ನಮ್ಮಲ್ಲಿ ಸರ್ವರ್ ಪ್ರಾಬ್ಲಮ್ ಇದೆ….

ಎಂದು ಬಾರದ ನಾನು ಇದು ಏನೋ ಆಧಾರ್ ಅಪ್ಡೇಟ್ ಮಾಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಆಧಾರ್ ಸರ್ವಿಸ್ ಸೆಂಟರ್ ಗೆ ಬಂದೇ ಆದರೆ ಮದ್ಯಾಹ್ನ ಊಟದ ಸಮಯವದರೂ ಒಬ್ಬರ ಆಧಾರ್ ಕೂಡ ಅಪ್ಡೇಟ್ ಆಗ್ಲಿಲ್ಲ ಯಾಕೋ ಏನೋ ಗೊತ್ತಿಲ್ಲ…. ಆಮೇಲೆ ಗೊತ್ತಾಗಿದ್ದು ನೋ ಸರ್ವರ್ ಅಂತ

ಅಧಿಕಾರಿಗಳು ಮಾತ್ರ ಲ್ಯಾಪ್ಟಾಪ್ ನಲ್ಲಿ ಅದೇನೋ ಹುಡುಕ್ತಾ ಬ್ಯುಸಿ ಮಾತ್ರ ಇದ್ರೂ ಜನ ನಿಂತು ನಿಂತು ಅವರ ಲ್ಯಾಪ್ಟಾಪ್ ನೋಡಿ ನೋಡಿ ಸುಸ್ತಾದ್ರೂ ಬಿಟ್ರೆ ಅಧಿಕಾರಿ ಮಾತ್ರ ಯಾರನ್ನು ಕ್ಯಾರೇ ಅನ್ಲಿಲ್ಲ… ಇದೇನು ಸರ್ವಿಸ್ ಸೆಂಟರಾ ಅಥವಾ ಸ್ಟ್ಯಾಂಡಿಂಗ್ ಸೆಂಟರಾ ನಂಗೆ ಗೊತ್ತಾಗ್ಲಿಲ್ಲ ಒಟ್ನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೂಪರ್ ಸ್ಟ್ಯಾಂಡಿಂಗ್ ಮಾಡೋ ಆಸೆ ಇದ್ರೆ ನೀವು ಬನ್ನಿ ಎಂಜಾಯ್ ಮಾಡಿ
