ದೊಡ್ಡಬಳ್ಳಾಪುರ : ವಿಶ್ವ ಪರಿಸರ ದಿನದ ಅಂಗವಾಗಿ ನಿವೇದಿತಾ ಇಂಗ್ಲೀಷ್ ಶಾಲೆಯ ಮಕ್ಕಳು ನಾಗರಕೆರೆ ವಿಕ್ಷಣೆ ಮಾಡಿದರು, ಕೆರೆ ಏರಿ ಮೇಲಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮಾಡಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರು, ಕೆರೆ ಏರಿ ಮೇಲೆ ಕುಳಿತ ಮಕ್ಕಳು ಶಿಕ್ಷಕರಿಂದ ಪರಿಸರದ ಪಾಠ ಕೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ನಿವೇದಿತಾ ಇಂಗ್ಲೀಷ ಶಾಲೆ (ರಾಜ್ಯ ಪಠ್ಯ ಕ್ರಮ) ಮಕ್ಕಳು ವಿಶೇಷವಾಗಿ ಆಚರಣೆ ಮಾಡಿದರು. ದೊಡ್ಡಬಳ್ಳಾಪುರದ ಪ್ರಮುಖವಾದ ನಾಗರಕೆರೆಗೆ ಭೇಟಿ ನೀಡಿದ ಮಕ್ಕಳು ಕೆರೆ ಏರಿ ಮೇಲೆ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.
ಶಿಕ್ಷಕರ ಜೊತೆ ಕೆರೆಯ ವೀಕ್ಷಣೆ ಮಾಡಿದ ಮಕ್ಕಳು, ಕೆರೆಯ ಏರಿ, ಕೊಡಿ, ಕೆರೆಗೆ ಹರಿದು ಬರುವ ನೀರಿನ ಮೂಲ, ಕೆರೆ ಮತ್ತು ನೀರಿನ ಮಹತ್ವ ಈ ಕುರಿತ ಮಾಹಿತಿಯನ್ನ ವಿಜ್ಞಾನ ಶಿಕ್ಷಕರಿಂದ ಅಲಿಸಿದರು.
ನೀರಿನ ಪ್ರಮುಖ ಅಕರವಾದ ಕೆರೆ ನೀರು ಇವತ್ತು ನಗರೀಕರಣ ಮತ್ತು ಕೈಗಾರಿಕರಣದಿಂದ ಕಲುಷಿತವಾಗುತ್ತಿದೆ. ಕಲುಷಿತ ನೀರಿನಿಂದಾಗಿ ಕೆರೆಯಲ್ಲಿನ ಜಲಚರ ಜೀವಿಗಳ ಪ್ರಾಣಕ್ಕೆ ಕಂಠಕವಾಗಿದೆ, ಅಂತರ್ಜಲ ಸಹ ಕಲುಷಿತವಾಗುತ್ತಿರುವುದರಿಂದ ಕುಡಿಯುವ ನೀರು ವಿಷವಾಗುತ್ತಿದೆ, ಉತ್ತಮ ಆರೋಗ್ಯ ಮತ್ತು ಸ್ವಚ್ಛ ಪರಿಸರಕ್ಕಾಗಿ ನಾವು ಕೆರೆಗಳ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ ಮತ್ತು ಕೆರೆ ನೀರು ಮಾಲಿನ್ಯವಾಗದಂತೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳ ಬೇಕಿದೆ ಎಂದು ಶಿಕ್ಷಕರು ಮಕ್ಕಳಿಗೆ ಪರಿಸರದ ಪಾಠ ಮಾಡಿದರು.
ಈ ವೇಳೆ ಶಾಲಾ ಕಾರ್ಯದರ್ಶಿ ಜಿ.ರಾಜಣ್ಣ, ಪ್ರಾಂಶುಪಾಲರಾದ ಸಂತೋಷ್, ಉಪ ಪ್ರಾಂಶುಪಾಲರಾದ ಆಶಾ ಸಂತೋಷ್ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.
