ದೊಡ್ಡಬಳ್ಳಾಪುರ : ಗಂಟಿಗಾನಹಳ್ಳಿ ವಿವಿದೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಪಿ.ರಾಮಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
ತಾಲೂಕಿನ ತೂಬಗೆರೆ ಹೋಬಳಿ ಗಂಟಿಗಾನಹಳ್ಳಿ ವಿವಿದೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಂಘದ ಕಚೇರಿಯಲ್ಲಿ ಇಂದು ನಡೆದ ಚುನಾವಣಾಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ರಾಮಕೃಷ್ಣಪ್ಪ, ಬಿ.ಎನ್. ಶ್ರೀನಿವಾಸ್ ಮೂರ್ತಿ ಎಂಬುವರು ನಾಮಪತ್ರ ಸಲ್ಲಿಸಿದ್ದರು. ಪಿ ರಾಮಕೃಷ್ಣಪ್ಪ ನವರಿಗೆ 8 ಮತಗಳು ಪಡೆದಿದ್ದು ಶ್ರೀನಿವಾಸ್ ಮೂರ್ತಿ ಅವರಿಗೆ ಒಂದು ಮತ ಪಡೆದಿದ್ದಾರೆ. ಚುನಾವಣೆ ನಂತರ ಚುನಾಣಾಧಿಕಾರಿ ಜಿ.ಎ.ದೇವರಾಜು ಅವರು ಪಿ.ರಾಮಕೃಷ್ಣಪ್ಪನವರನ್ನು ನೂತನ ಅಧ್ಯಕ್ಷರಾಗಿ ಘೋಷಣೆ ಮಾಡಿದರು.
ಗಂಟಿಗಾನಹಳ್ಳಿ ವಿವಿದೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 13 ನಿರ್ದೇಶಕರಿದ್ದು, ಅಧ್ಯಕ್ಷರ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆ ಮಾಡಲಾಗಿತ್ತು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ.ರಾಮಕೃಷ್ಣಪ್ಪ ಮಾತನಾಡಿ,ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ, ಇನ್ನು ಸಂಘವು ರೈತರ ಸ್ನೇಹಯಾಗಿ ಕೆಲಸ ಮಾಡುತ್ತಿದ್ದು ಪಕ್ಷಾತೀತವಾಗಿ ರೈತರ ಸೇವೆ ಮಾಡುವ ಮೂಲಕ ಮಾದರಿ ಸಂಘವನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಪಡೆದು ಕೆಲಸ ಮಾಡಲಾಗುವುದು ಎಂದು ಹೇಳಿದರು,
ತೆಂಗು ನಾರು ಮಂಡಳಿಯ ಮಾಜಿ ಅಧ್ಯಕ್ಷ ವೆಂಕಟೇಶ್ ಬಾಬು ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಾಗಿರುವ ಪಿ.ರಾಮಕೃಷ್ಣಪ್ಪನವರನ್ನು ಪುಷ್ಪ ಹಾರ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿ , 20 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ರಾಮಕೃಷ್ಣಪ್ಪನವರು ಇಂದಿಗೂ ರೈತರ ಸೇವೆ ಮಾಡುತ್ತಾ ಬಂದಿದ್ದಾರೆ ಅದಕ್ಕಾಗಿಯೇ ಮತ್ತೆ ಇಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು,
ಕಾರ್ಯಕ್ರಮದಲ್ಲಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎ. ನಾಗರಾಜ್, ನಿರ್ದೇಶಕರಾದ ಸುಮಿತ್ರ, ಎಂ.ಎಸ್.ನಂದೀಶ್, ಗೌರೀಶ್, ವಿಜಯ್ ಕುಮಾರ್, ಯಶ್ವಂತ್, ಹಾಗೂ ಸಂಘದ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.
