ದೊಡ್ಡಬಳ್ಳಾಪುರ : ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿ ಗುರುತ್ವ ಅಕಾಡೆಮಿ ಪ್ರಾರಂಭಿಸಿದ್ದು ಈ ಬಾರಿ ವಿಶೇಷ ಸೌಲಭ್ಯಗಳೊಂದಿಗೆ ನವೋದಯ ತರಬೇತಿ ಪ್ರಾರಂಭಿಸಲಾಗಿದೆ ತಾಲೂಕಿನ ಜನತೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಗುರುತ್ವ ಅಕಾಡೆಮಿ ಮುಖ್ಯಸ್ಥ ಶ್ರೀನಿವಾಸ್ ತಿಳಿಸಿದರು
ಈ ಕುರಿತು ಮಾತನಾಡಿದವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಗುರುತ್ವ ಅಕಾಡೆಮಿ ಸದಾ ವಿಶೇಷ ವಿಭಿನ್ನ ಪ್ರಯತ್ನಗಳನ್ನು ಕೈಗೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ನವೋದಯ ತರಬೇತಿ ಪ್ರಾರಂಭಿಸಿದ್ದು 5ನೇ ತರಗತಿ ಮಕ್ಕಳಿಗೆ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು. ನವೋದಯ ಪರೀಕ್ಷೆಗೆ ಎದುರಿಸಲು ನುರಿತ ಅನುಭವಿ ಶಿಕ್ಷಕರಿಂದ ಮಕ್ಕಳಿಗೆ ತರಬೇತಿ ಕಲ್ಪಿಸಲಾಗಿದೆ ಎಂದರು.
ರಿಯಾಯಿತಿ ದರದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು. ಇದೇ ಆಗಸ್ಟ್ ತಿಂಗಳಿನಲ್ಲಿ ನವೋದಯ ಶಾಲೆಗೆ ಪ್ರವೇಶ ಅರ್ಜಿಗಳನ್ನು ಆಹ್ವಾನಿಸಲಿದ್ದು. ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಪರೀಕ್ಷೆಗಳು ನಡೆಯುವ ಸಂಭವವಿದೆ. ಈಗಾಗಲೇ ನಮ್ಮ ಗುರುತ್ವ ಅಕಾಡೆಮಿಯಲ್ಲಿ ಕಳೆದ ಮೇ 21ರಿಂದ ನವೋದಯ ತರಬೇತಿ ತರಗತಿಗಳು ನಡೆಯುತ್ತಿದ್ದು ಜನರಿಂದ ಉತ್ತಮ ಸ್ಪಂದನೆ ದೊರೆತಿದೆ.ನಮ್ಮಲ್ಲಿ ಪ್ರೀಮಿಯಂ ಹಾಗೂ ಸ್ಟ್ಯಾಂಡರ್ಡ್ ರೀತಿಯ ಎರಡು ರೀತಿಯ ಪ್ಯಾಕೇಜ್ ಗಳು ಲಭ್ಯವಿದೆ ಎಂದರು.
ಪ್ರೀಮಿಯಂ ಹಾಗೂ ಸ್ಟ್ಯಾಂಡರ್ಡ್ ಪ್ಯಾಕೇಜ್ ನಲ್ಲಿ ಸಿಗುವ ಸೌಲಭ್ಯವೇನು..??
ನವೋದಯ ತರಬೇತಿಯಲ್ಲಿ ಪ್ರೀಮಿಯಂ ಹಾಗೂ ಸ್ಟ್ಯಾಂಡರ್ಡ್ ಎಂಬ ಎರಡು ಬಗೆಯ ಪ್ಯಾಕೇಜ್ ಗಳನ್ನು ನೀಡಿದ್ದು ಪ್ರಮುಖವಾಗಿ ಪ್ರೀಮಿಯಂ ಪ್ಯಾಕೇಜ್ ನಲ್ಲಿ ನವೋದಯ, ಸೈನಿಕ್, ಮುರಾರ್ಜಿ ದೇಸಾಯಿ, ಸತ್ಯ ಸಾಯಿ ಸೇರಿದಂತೆ ವಿವಿಧ ರೆಸಿಡೆನ್ಷಿಯಲ್ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಅಗತ್ಯ ತರಬೇತಿ ನೀಡಲಾಗುವುದು. ನವೋದಯ ಸ್ಟ್ಯಾಂಡರ್ಡ್ ಪ್ಯಾಕೇಜ್ ನಲ್ಲಿ ನವೋದಯ ಪರೀಕ್ಷೆಗೆ ಸಂಬಂಧಪಟ್ಟಂತೆ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ನವೋದಯ ಕೋಚಿಂಗ್ ತರಬೇತಿಯು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪಾಳಿಯಲ್ಲಿ ತರಗತಿಗಳು ನಡೆಯಲಿದ್ದು ವಾರಕ್ಕೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ ತರಬೇತಿಯಲ್ಲಿ ಪ್ರತಿ ಮಗುವಿನ ಪ್ರಗತಿ ಕುರಿತು ಪ್ರತ್ಯೇಕ ಫೈಲ್ ನಿರ್ವಹಣೆ ಮಾಡಲಾಗುವುದು ಮಗುವಿನ ಪ್ರಗತಿಯನ್ನು ಪೋಷಕರ ಸಭೆಯಲ್ಲಿ ಚರ್ಚಿಸಲು ಇದು ಸಹಕಾರಿಯಾಗಲಿದೆ. ಮಗು ಪ್ರತಿದಿನ ಮನೆಯಲ್ಲಿ ಓದುವ ಸಮಯ ತನ್ನ ಅಭ್ಯಾಸ ಕುರಿತು ಸಂಸ್ಥೆಯ ಪ್ರತ್ಯೇಕ ವಾಟ್ಸಪ್ ಗ್ರೂಪ್ ನಲ್ಲಿ ಫೋಟೋ ಹಾಗೂ ವಿಡಿಯೋ ತುಣುಕು ಹಚ್ಚಿಕೊಳ್ಳುವ ಮೂಲಕ ತನ್ನ ಶಿಕ್ಷಕರೊಂದಿಗೆ ಸಂಪರ್ಕ ಬೆಸೆಯಬಹುದಾಗಿದೆ. ಅಲ್ಲದೆ ಪೋಷಕರ ಹೊರೆ ತಪ್ಪಿಸುವ ನಿಟ್ಟಿನಲ್ಲಿ ನವೋದಯ ಪರೀಕ್ಷೆಗೆ ಪ್ರತಿ ಮಗುವಿನ ನೋಂದಣಿಯನ್ನು ಸಂಸ್ಥೆಯೇ ಮಾಡಲಿದೆ ಎಂದು ತಿಳಿಸಿದರು.
