ದೊಡ್ಡಬಳ್ಳಾಪುರ : ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವು ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಬಳಿಯ ಸಮುದಾಯ ಭವನದಲ್ಲಿ ನಡೆಯಿತು.

ಜೂನ್ 15ರಿಂದ ಪ್ರಾರಂಭವಾದ ತರಬೇತಿ ಕಾರ್ಯಕ್ರಮದಲ್ಲಿ ಪಿ ಯು ಸಿ ಉತ್ತಿರ್ಣರಾದ ಯುವಕ/ಯುವತಿಯರಿಗೆ ಉಚಿತವಾಗಿ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಅಗತ್ಯ ತರಬೇತಿ ಒದಗಿಸಲಾಗಿದೆ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿದ ಎಲ್ಲಾ ಸಂಪನ್ಮೂಲ ಶಿಕ್ಷಕರಿಗೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ದಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಾರ್ಯಾಗಾರದ ಆಯೋಜಕ ಅನ್ನದಾಸೋಹಿ ಎಲ್.ಮಲ್ಲೇಶ್ ತಿಳಿಸಿದ್ದಾರೆ.

ಸ್ಪರ್ಧಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಲುಭವಾಗಿ ಅತಿಹೆಚ್ಚು ಅಂಕಗಳನ್ನು ಗಳಿಸುವ ಸರಳ ಮಾರ್ಗವನ್ನು ಅರಿತಿದ್ದಾರೆ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಜೊತೆಗೆ ಸ್ಪರ್ಧಾರ್ಥಿಗಳು ಮಾದರಿ ಪರೀಕ್ಷೆಗಳಿಂದ ಹೆಚ್ಚಿನ ಅಂಕಗಳಿಸುವ ತಂತ್ರ ತಿಳಿದಿದ್ದಾರೆ ಎಂದರು.

ಈ ಕಾರ್ಯಾಗಾರದಲ್ಲಿ ಅನುಭವಿ ವಿಷಯ ಉಪನ್ಯಾಸಕರಿಂದ ವಿಷಯವಾರು ತರಬೇತಿಯನ್ನು ಕಲ್ಪಿಸಲಾಗಿದ್ದು ಈ ಕಾರ್ಯಾಗಾರದಲ್ಲಿ ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ಅಗತ್ಯವಿರುವ ದೈಹಿಕ ಅಭ್ಯಾಸ ಮತ್ತು ಕ್ರೀಡಾ ತರಬೇತಿಯನ್ನು ಸಹ ನೀಡಲಾಗಿದೆ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್, ಗ್ರಾಮಪಂಚಾಯತಿ ಸದಸ್ಯ ಜೆ.ವೈ ಮಲ್ಲಪ್ಪ, ಸುಬ್ರಹ್ಮಣ್ಯ (ನಮ್ಮ ಕರ್ನಾಟಕ ಸೇನೆ),ಸುರೇಶ್ ಸಿಂಗಂ( ಸಮಾಜ ಸೇವಕರು),ಸಂಪನ್ಮೂಲ ಶಿಕ್ಷಕರಾದ ಜಿ ಸುರೇಶ್ ( ಕೋಶಾಧ್ಯಕ್ಷ ರು.ಕನ್ನಡ ಸಾಹಿತ್ಯ ಪರಿಷತ್),ನಾಗರಾಜ್ ( ಗ್ರಾಮಾಂತರ ಪೊಲೀಸ್ ಠಾಣೆ),ಗಣಪತಿ ಆವಟಿ( ಆರಕ್ಷಕರು), ಚನ್ನಕೇಶವ ಮೂರ್ತಿ,ರಾಮು, ರವಿಕಿರಣ್. ಎ., ಸಮೀರ್ಬಿ.ಟಿ.ತಿಮ್ಮಯ್ಯ, ಮಧು, ದೈಹಿಕ ತರಬೇತುದಾರ ಶ್ರೀನಿವಾಸ್, ವೈದ್ಯಕೀಯ ತರಬೇತುದಾರ ಡಾ. ಚಂದನ, ಹಾಗೂ ಕೆ.ಶ್ರೀನಿವಾಸ್ ( ಪೋಲೀಸ್ ಇಲಾಖೆ) ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
