ದೊಡ್ಡಬಳ್ಳಾಪುರ: ತಾಲ್ಲೂಕಿನ ರಾಜಘಟ್ಟ ಗ್ರಾಮದ ಹೊರವಲಯದ ಕಂಬದರಾಯಸ್ವಾಮಿ ಬಾಗಿಲು ಹೊಡೆದು ಒಳ ನುಗ್ಗಿರುವ ಕಳ್ಳರು ದೇವರ ಬೆಳ್ಳಿ ಕೀರಿಟ ಮತ್ತು ಬೆಳ್ಳಿ ವಿಗ್ರಹ ಕದ್ದೊಯ್ದಿರುವ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಕಂಬದರಾಯಸ್ವಾಮಿ ದೇವಸ್ಥಾನದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ , ಇಂದು ಬೆಳಗ್ಗೆ ದೇವಸ್ಥಾನದ ಆರ್ಚಕ ಶ್ರೀನಿವಾಸ್ ದೇವಸ್ಥಾನಕ್ಕೆ ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಸ್ಥಳೀಯ ಯುವ ಮುಖಂಡ ರಾಜಘಟ್ಟ ಗಣೇಶ್ ಮಾತನಾಡಿ , ದೇವಸ್ಥಾನ ಗ್ರಾಮದಿಂದ ಹೊರವಲಯದಲ್ಲಿದ್ದು ದೇವಾಲಯದ ಸುತ್ತಮುತ್ತ ಯಾವುದೇ ಮನೆಗಳಿಲ್ಲ, ಇದರಿಂದ ದೇವಸ್ಥಾನ ಗಾಂಜಾ ವ್ಯಾಸನಿಗಳ ತಾಣವಾಗಿದೆ, ದೇವಸ್ಥಾನದ ಬಳಿ ಬರುವುದಕ್ಕೂ ಜನ ಹೆದರುವಂಥ ಪರಿಸ್ಥಿತಿ ಇದೆ, ಈ ಅವಕಾಶ ಬಳಸಿಕೊಂಡ ಕಳ್ಳರು ದೇವಸ್ಥಾನದ ಮುಖ್ಯದ್ವಾರ ಮತ್ತು ಗರ್ಭಗುಡಿಯ ಬಾಗಿಲ ಬೀಗ ಹೊಡೆದು ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ ಬೆಳ್ಳಿ ಕೀರಿಟ ಮತ್ತು ವಿಗ್ರಹ ಕದ್ದೊಯ್ದಿದ್ದಾರೆ, ಆರ್ಚಕರಾದ ಶ್ರೀನಿವಾಸ್ ರವರಿಗೆ ಕಿವಿ ಕೇಳಿಸುವುದಿಲ್ಲ ಮತ್ತು ಮಾತು ಸಹ ಬರುವುದಿಲ್ಲ ದೇವರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ, ಪೊಲೀಸರು ಕಳ್ಳರನ್ನ ಬಂಧಿಸುವ ಮೂಲಕ ಕಳ್ಳರಿಗೆ ತಕ್ಕ ಶಿಕ್ಷೆ ನೀಡಬೇಂಕೆದು ಆಗ್ರಹಿಸಿದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
