ದೊಡ್ಡಬಳ್ಳಾಪುರ : ಮಹಿಳಾ ಸಬಲೀಕರಣಕ್ಕೆ ಭಾರತ ಸಶಕ್ತವಾಗಿದೆ ಈ ಅವಕಾಶವನ್ನು ಮಹಿಳೆಯರು ಸದ್ಬಳಕೆ ಮಾಡಿಕೊಂಡು ಸಮಾಜದ ಉತ್ತುಂಗ ಸ್ಥಾನಗಳನ್ನು ತಲುಪಬೇಕು, ಮಹಿಳೆಯರಿಗೆ ಸರ್ವ ಸ್ವಾತಂತ್ರ್ಯತಮ್ಮನ್ನು ತಾವು ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಮಾದರಿಯಾಗಬೇಕು ಎಂದು ದೊಡ್ಡಬಳ್ಳಾಪುರ ನಗರಸಭಾ ಅಧ್ಯಕ್ಷರಾದ ಪ್ರಭಾ ನಾಗರಾಜ್ ತಿಳಿಸಿದರು.

ನಗರದ ಖಾಸಗಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ [SKDRDP ] ವತಿಯಿಂದ ಆಯೋಜನೆ ಮಾಡಲಾಗಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಅವಕಾಶಗಳಿದ್ದು, ಕರಕುಶಲತೆ ಹಾಗೂ ತಾಂತ್ರಿಕತೆಯ ಬಗ್ಗೆ ಅರಿವು ಮೂಡಿಸಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಸಾಕಷ್ಟು ತರಬೇತಿಗಳನ್ನು ನೀಡಲಾಗುತ್ತದೆ ಅಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರೂಪಶ್ರೀ ವಿಶ್ವನಾಥ್ ಮಾತನಾಡಿದ ನಮ್ಮ ರಾಜ್ಯದಲ್ಲಿ ಸಾಧನೆಗೈದ ಮಹನೀಯರ ಪೈಕಿ ಮಹಿಳೆಯರೇ ಹೆಚ್ಚು,ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದು,ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕುಟುಂಬದ ನಿರ್ವಹಣೆ ಸಹ ಮಾಡುತ್ತಾ ಬಂದಿದ್ದಾರೆ ಕಾನೂನು ವ್ಯವಸ್ಥೆ ಬಗ್ಗೆ ತರಬೇತಿ ನೀಡಿ ಮಹಿಳೆಯರಿಗೆ ಸಮಾಜದ ನಿಲುವಿನ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ವಹಿಸುತ್ತಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕ ಉಮಾರಬ್ಬ ಪ್ರಾಸ್ತಾವಿಕ ಮಾಹಿತಿ ನೀಡಿತ್ತಾ ರಾಜ್ಯದಾದ್ಯಂತ 16,000 ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗಿದೆ, ರಾಜ್ಯಾದಾದ್ಯಂತ 1642 ವಾತ್ಸಲ್ಯ ಮನೆ ರಚನೆ ಮಾಡಲಾಗಿರುತ್ತದೆ, ನಿರ್ಗತಿಕರನ್ನು ಗುರುತಿಸಿ ಪ್ರತಿ ತಿಂಗಳಿಗೆ 1000 ರೂದಂತೆ ಮಾಸಿಕ ಮಾಶಾಸನ ನೀಡಲಾಗುತ್ತಿದೆ ಮಹಿಳಾ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ [SKDRDP ] ಸದಾ ಬೆಂಬಲವಾಗಿ ಸ್ಪಂದಿಸುತ್ತಿದೆ ಹಾಗೂ ಮಹಿಳೆಯರ ಅಭಿವೃದ್ಧಿಗೆ ವಿಶೇಷ ತರಬೇತಿ ಹಾಗೂ ಯೋಜನೆಗಳನ್ನು ರೂಪಿಸುತ್ತಿದೆ ಈ ಅವಕಾಶಗಳನ್ನು ಸಮಾಜದ ಪ್ರತಿ ಮಹಿಳೆಗೂ ತಲುಪಿಸುವ ಕಾರ್ಯವನ್ನು ನಮ್ಮ ಸಿಬ್ಬಂದಿವರ್ಗ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ನಾಗೇಶ್, ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಕಲಾ ನಾಗರಾಜ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ವಾಣಿ, ಮಮತಾ, ಪುಷ್ಪ, ರಮೇಶ್ ಹಾಗೂ ತಾಲೂಕು ಯೋಜನಾಧಿಕಾರಿಗಳಾದ ದಿನೇಶ್, ಸಂಗೀತಾ ತಾಲೂಕಿನ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು, ಸೇವಾ ಪ್ರತಿನಿಧಿಗಳು,ಸಂಘದ ಸದಸ್ಯರು, ಉಪಸ್ಥಿತರಿದ್ದರು.
