ದೊಡ್ಡಬಳ್ಳಾಪುರ : ಉತ್ತಮ ತರಬೇತಿ ದೊರೆತರೆ ಗ್ರಾಮೀಣ ಮಕ್ಕಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಮಹಾರಾಷ್ಟ್ರದ ವರೋರಾದಲ್ಲಿ ನಡೆದ ಸಿಬಿಎಸ್ಇ ದಕ್ಷಿಣ ವಲಯ 2026 – 27 ನೇ ಸಾಲಿನ ಟೇಕ್ವಾಂಡೋ ಚಾಂಪಿಯನ್ಷಿಪ್ ಉತ್ತಮ ಉದಾಹರಣೆಯಾಗಿದೆ ನಮ್ಮಎಂ ವಿ ಎಂ ಶಾಲೆಯ ಮಕ್ಕಳು ಈ ಚಾಂಪಿಯನ್ಷಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ 11 ಪಡಕಗಳನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಎಂವಿಎಂ ಶಾಲಾ ವ್ಯವಸ್ಥಾಪಕ ನಿರ್ದೇಶಕ ಗೌರವ್ ತಿಳಿಸಿದರು.

ಚಾಂಪಿಯನ್ ಶಿಪ್ ನಲ್ಲಿ ಜಯಗಳಿಸಿದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು ಮಕ್ಕಳು ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ 6 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದ್ದು . ಈ ಪೈಕಿ 10 ಕ್ರೀಡಾಪಟುಗಳು ಹರಿಯಾಣದಲ್ಲಿ ನಡೆಯಲಿರುವ ಸಿಬಿಎಸ್ಇ ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ಷಿಪ್ಗೆ ಅರ್ಹತೆ ಪಡೆದಿದ್ದಾರೆ.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗೋವಾ ಸೇರಿದಂತೆ ವಿವಿಧ ರಾಜ್ಯಗಳ 150ಕ್ಕೂ ಹೆಚ್ಚು ಸಿಬಿಎಸ್ಇ ಶಾಲೆಗಳ 1,000ಕ್ಕೂ ಅಧಿಕ ಕ್ರೀಡಾಪಟುಗಳು ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡಿದ್ದರು. ನಮ್ಮ್ ಶಾಲೆಯ ಪರವಾಗಿ ಎಸ್ಟಿಎ ಶಂಕರ್ ಟೇಕ್ವಾಂಡೋ ಅಕಾಡೆಮಿಯ ವತಿಯಿಂದ ಭಾಗವಹಿಸಿದ್ದ ಮಕ್ಕಳು ಹೆಚ್ಚು ಪೈಪೋಟಿಯ ನಡುವೆಯೂ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡಿ 11 ಪದಕಗಳನ್ನು ಗೆದ್ದು ಶಾಲೆಯ ಮತ್ತು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

14 ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ವರ್ಷನ್.ಎಸ್ (21ಕೆಜಿ), ಹೃತಿಕ್.ಆರ್ (18ಕೆಜಿ), ಬಾಲಕಿಯರ ವಿಭಾಗದಲ್ಲಿ ಚಿನ್ಮಯಿ (20ಕೆಜಿ), ದೀಕ್ಷಾ.ಪಿ (22ಕೆಜಿ), ಶಾನ್ವಿ.ಎಸ್ (16ಕೆಜಿ) ಹಾಗೂ 17 ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಜಶನ್.ಹೆಚ್ (59ಕೆಜಿ) ಚಿನ್ನದ ಪದಕ ಗೆದ್ದಿದ್ದಾರೆ.
14 ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಮಾನ್ವಿತ್ ಗೌಡ.ಎನ್ (25ಕೆಜಿ), ಜಶ್ವಂತ್.ಸಿ (27ಕೆಜಿ), 17 ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಹರ್ಷಿತಾ.ಎಂ. (38ಕೆಜಿ) ಹಾಗೂ 19 ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ತುಷಾರ್ ಸಾಯಿ ಯಾದವ್.ಸಿ (48ಕೆಜಿ) ಬೆಳ್ಳಿ ಪದಕ ಪಡೆದಿದ್ದು, 14 ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ತಮನ್ನಾ.ಆರ್ (32ಕೆಜಿ) ಕಂಚಿನ ಪದಕ ಪಡೆದಿದ್ದು, ದಕ್ಷಿಣ ವಲಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟದ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿರುವುದು ಶಾಲೆಯ ಪಾಲಿಗೆ ವಿಶೇಷ ಹೆಗ್ಗಳಿಕೆಯಾಗಿದೆ. ಪಠ್ಯದ ಜತೆಗೆ ಕ್ರೀಡೆಗೆ ಶಾಲೆ ಹೆಚ್ಚಿನ ಒತ್ತು ಕೊಡುತ್ತಿರುವುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ.

ಟೇಕ್ವಾಂಡೋ ಅಕಾಡೆಮಿಯ ಮುಖ್ಯ ತರಬೇತುದಾರ ಶಂಕರ್ ಮಾತನಾಡಿ, ಪರಿಶ್ರಮ, ಸತತ ಅಭ್ಯಾಸ ಮತ್ತು ಗುಣಮಟ್ಟದ ತರಬೇತಿಯಿಂದಾಗಿ ಈ ಸಾಧನೆ ಪಡೆಯಲು ಸಹಕಾರಿಯಾಯಿತು. ಗುರುವಿನ ಮಹತ್ವ ಬಗ್ಗೆ ತಿಳಿಸಿಕೊಟ್ಟರು. ಶಾಲಾಡಳಿತ ಮಂಡಳಿಯೂ ಸಹ ಉತ್ತಮ ಸಹಕಾರ ನೀಡುತ್ತಿದೆ. ಗ್ರಾಮೀಣ ಭಾಗದಲ್ಲಿನ ಮಕ್ಕಳು ರಾಷ್ಟ್ರಮಟ್ಟದ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟçಮಟ್ಟದಲ್ಲಿಯೂ ಸಹ ಉತ್ತಮ ಸಾಧನೆ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕವೃಂದ, ಮಕ್ಕಳು ಉಪಸ್ಥಿತರಿದ್ದರು.
