
ದೊಡ್ಡಬಳ್ಳಾಪುರ : ಇತ್ತೀಚಿಗೆ ತಾಲ್ಲೂಕಿನಲ್ಲಿ ಖಾಸಗಿ ಕಂಪನಿವಾಹನಗಳ ಹಾವಳಿ ಹೆಚ್ಚಾಗಿವೆ. ಯಾವುದೇ ನಿಯಮ ಪಾಲಿಸದೇ ವೇಗಮಿತಿ ಇಲ್ಲದೆ ವಾಹನ ಚಲಾಯಿಸುವುದು ಸರ್ವೇ ಸಾಮಾನ್ಯವಾಗಿದೆ.

ಇಂದು (ಅ.27) ತಾಲ್ಲೂಕಿನ ಕೊನಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಶಾಲಾ ವಾಹನ ಹಾಗೂ ಖಾಸಗಿ ವಾಹನದ ನಡುವೆ ಅಪಘಾತ ಸಂಭವಿಸಿದೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ , ಶಾಲಾ ವಾಹನದಲ್ಲಿ ಸುಮಾರು 20ಮಕ್ಕಳಿದ್ದರು ಎಂದು ತಿಳಿದು ಬಂದಿದೆ.
ಖಾಸಗಿ ಕಂಪನಿಯ ವಾಹನದ ವೇಗಕ್ಕೆ ಈಗಾಗಲೇ ಹಲವಾರು ಜೀವಗಳು ಬಲಿಯಾಗಿವೆ ಆದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ನಗರದ ಒಳಭಾಗದಲ್ಲೂ ವಾಹನಗಳು ಸಂಚರಿಸುವ ಸಮಯದಲ್ಲಿ ಯಾವುದೇ ವೇಗಮಿತಿ ಪಾಲನೆ ಮಾಡದೇ ಅಡ್ಡ ದಿಡ್ಡಿ ವಾಹನ ಚಲಾಯಿಸುತ್ತಾರೆ ರಸ್ತೆಯಲ್ಲಿ ಬೇರೆ ವಾಹನಗಳಿವೆ ಎಂಬ ಸಾಮಾನ್ಯಜ್ಞಾನವು ಚಾಲಕರಿಗೆ ಇಲ್ಲಾ ಎಂಬುದು ಜನ ಸಾಮಾನ್ಯರ ಗಂಭೀರ ಆರೋಪವಾಗಿದೆ.

ಅಪಘಾತ ಕುರಿತು ಕೊನಘಟ್ಟ ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಾರಾಯಣ ಸ್ವಾಮಿ ಮಾತನಾಡಿ ಈಗಾಗಲೇ ಹಲವಾರು ಜೀವಗಳನ್ನು ಬಲಿ ಪಡೆದಿರುವ ಖಾಸಗಿ ಕಂಪನಿಯ ವಾಹನಗಳು ಆ ರಸ್ತೆಗಳಲ್ಲಿ ವೇಗ ನಿಯಂತ್ರಕ್ಕಾಗಿ ಹಂಪ್ ಗಳನ್ನು ಹಾಕಿರುವ ಕಾರಣ ರಸ್ತೆ ಬದಲಿಸಿ ಈಗ ನಮ್ಮ ರಸ್ತೆಯಲ್ಲಿ ಸಂಚಾರ ಆರಂಭಿಸಿವೆ ಈ ರಸ್ತೆಯಲ್ಲಿ ಯಾವುದೇ ವೇಗ ನಿಯಂತ್ರಣ ಹಂಪ್ ಇಲ್ಲಾ ಹಾಕುವಂತೆ ಮನವಿ ಮಾಡಿದರೆ ಕಾನೂನು ಒಪ್ಪುವುದಿಲ್ಲ ಎಂದು ಹೇಳುತ್ತಾರೆ ಜೀವಕ್ಕೆ ಹಾನಿಯಾದರೆ ಯಾರು ಹೊಣೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ವಾಹನಗಳಿಗೆ ವೇಗಮಿತಿಯ ಕಡಿವಾಣ ಹಾಕಬೇಕು ಎಂದು ಅಗ್ರಹಿಸಿದರು.




