
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 2395 ಮಂದಿ ಯುವ ಮತದಾರರಿದ್ದರು. ಇದೀಗ ಅಂತಿಮ ಮತದಾರರ ಪಟ್ಟಿಯಲ್ಲಿ 3796 ಮಂದಿ ಯುವ ಮತದಾರರಿದ್ದಾರೆ ಎಂದು ಉಪವಿಭಾಗಾಧಿಕಾರಿ ಮಂಜುನಾಥ್ ತಿಳಿಸಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕರಡು ಮತದಾರರ ಪಟ್ಟಿಯ ಪ್ರಕಾರ 1,92,228ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ 1.94,33೦ಕ್ಕೆ ಏರಿಕೆಯಾಗಿದೆ. ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ 2,102 ಮತದಾರರು ಹೆಚ್ಚಳವಾಗಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 279 ಮತಗಟ್ಟೆಗಳಿವೆ. ಕರಡು ಪಟ್ಟಿಯಲ್ಲಿ 94,566ಪುರುಷರು ಹಾಗೂ 97,661 ಮಹಿಳಾ ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ ಪುರುಷ ಮತದಾರರ ಸಂಖ್ಯೆ 95,589ಕ್ಕೆ ಹಾಗೂ ಮಹಿಳಾ ಮತದಾರರ ಸಂಖ್ಯೆ 98,74೦ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಅಂತಿಮ ಮತದಾರರ ಪಟ್ಟಿಯಲ್ಲಿ 1,94,330 ಮತದಾರರು ಸ್ಥಾನ ಪಡೆದಿದ್ದಾರೆ ಎಂದರು.
ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳ ವಿಲೇವಾರಿ:
ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ ನಮೂನೆ 6,7 ಮತ್ತು 8ರ ಅಡಿಯಲ್ಲಿ ಒಟ್ಟು 36,679 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳಲ್ಲಿ 36, 792 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 887ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ನಮೂನೆ ೬ರ ಅಡಿಯಲ್ಲಿ ಹೊಸ ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ 2,213 ಅರ್ಜಿಗಳು ಸ್ವೀಕೃತವಾಗಿದ್ದು, 2,045 ಅರ್ಜಿಗಳನ್ನು ಸ್ವೀಕರಿಸಿ 172ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನಮೂನೆ 7ರ ಅಡಿಯಲ್ಲಿ 31,429 ಅರ್ಜಿಗಳು ಸ್ವೀಕೃತವಾಗಿದ್ದು,31,218 ಅರ್ಜಿಗಳನ್ನು ಸ್ವೀಕರಿಸಿ221 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನಮೂನೆ 8ರ ಅಡಿಯಲ್ಲಿ 4,023 ಅರ್ಜಿಗಳು ಸ್ವೀಕೃತವಾಗಿದ್ದು,3,529 ಅರ್ಜಿಗಳನ್ನು ಸ್ವೀಕರಿಸಿ 494 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು 276 ರಿಂದ 279ಕ್ಕೆ ಹೆಚ್ಚಿಸಲಾಗಿದೆ. ಕಂಟನಕುಂಟೆ , ವರದನಹಳ್ಳಿ ಮತ್ತು ದೊಡ್ಡತುಮಕೂರು ಪ್ರದೇಶಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಮರುವಿಂಗಡಣೆ ಮೂಲಕ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 279 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿಲ್ಲದ ಮತದಾರರು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.
ಯುವ ಮತದಾರರು, ಹಿರಿಯ ನಾಗರಿಕರ ವಿವರ:
ಅಂತಿಮ ಮತದಾರರ ಪಟ್ಟಿಯ ಪ್ರಕಾರ ಕ್ಷೇತ್ರದಲ್ಲಿ 18ರಿಂದ 19 ವರ್ಷದೊಳಗಿನ 3, 796ಯುವ ಮತದಾರರು, 80ವರ್ಷ ಮೇಲ್ಪಟ್ಟ 4,412
ಮತದಾರರು ಹಾಗೂ 3, 046ವಿಕಲಚೇತನ
ಮತದಾರರಿದ್ದಾರೆ. ಕ್ಷೇತ್ರದಲ್ಲಿ 49 ಸೇವಾ ಮತದಾರರು ದಾಖಲಾಗಿದ್ದಾರೆ ಎಂದರು.
ಪರಿಷ್ಕರಣೆ ಮುಂದುವರಿಕೆ
ಅಕ್ಟೋಬರ್ 27ರಿಂದ ನಿರಂತರ ಪರಿಷ್ಕರಣೆ ಪ್ರಕ್ರಿಯೆ ಮುಂದುವರಿಯಲಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋದವರು, ಹೊಸದಾಗಿ ಮತದಾರರಾಗಲು ಅರ್ಹತೆ ಹೊಂದಿರುವ ಯುವಕರು ಹಾಗೂ ಇತರೆ ಅರ್ಹರು ಹೆಸರು ಸೇರ್ಪಡೆಗಾಗಿ ನಮೂನೆ-6 ಸಲ್ಲಿಸಬಹುದು. ಹೆಸರು ಅಥವಾ ಇತರೆ ವಿವರಗಳ ತಿದ್ದುಪಡಿ ಹಾಗೂ ವಿಳಾಸ ಬದಲಾವಣೆಗಾಗಿ ನಮೂನೆ-8 ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಥಮ ಮೇಲ್ಮನವಿ ಪ್ರಕರಣಗಳು ಯಾವುದೇ ದಾಖಲಾಗಿಲ್ಲ ಎಂದು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವೇಳೆ ಮತಗಟ್ಟೆ ಅಧಿಕಾರಿಗಳಾದ ಶೋಭಾ, ರಾಜು, ಚಂದ್ರಪ್ಪ, ವೆಂಕಟೇಶ್, ರತ್ನಮ್ಮ, ಲಕ್ಷ್ಮೀದೇವಿ, ಚಂದ್ರಶೇಖರ್ ಅವರನ್ನು ಚುನಾವಣಾಧಿಕಾರಿ ಟಿ.ಆರ್ ಮಂಜುನಾಥ್ ಅಭಿನಂದಿಸಿದರು.




