
ದೊಡ್ಡಬಳ್ಳಾಪುರ : ತಾಲ್ಲೂಕಿನ ಹೊರವಲಯದ ಅರದೇಶನಹಳ್ಳಿ ಗ್ರಾಮದ ಶ್ರೀ ಬಗಳಾಮುಖಿ ದೇವಾಲಯದಲ್ಲಿ 12 ನೇ ವರ್ಷದ ಆರಾಧನಾ ಮಹೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.

ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣಿ ಮಾತನಾಡಿ ಈ ದೇವಾಲಯದಲ್ಲಿ ಚಾಮುಂಡೇಶ್ವರಿ, ಬಗಳಾಮುಖಿ ಹಾಗೂ ಯಲ್ಲಮ್ಮ ದೇವಿಯರಿದ್ದು ಕಳೆದ 12ವರ್ಷಗಳಿಂದ ತಾಯಿ ಬಗಳಾಮುಖಿಯ ಆರಾಧನೆಯನ್ನು ಭಕ್ತರ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು ಇಂದು ಬೆಳಗಿನಿಂದಲ್ಲೇ ದೇವಿಗೆ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿ ಹೋಮ – ಹವನ, ವಿಶೇಷ ಅಲಂಕಾರ ಹಾಗೂ ಪೂಜೆ ಸಲ್ಲಿಸಿದ್ದೇವೆ ಅಲ್ಲದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ಮೆರವಣಿಗೆ ಮಾಡುವ ಮೂಲಕ ಭಕ್ತಿಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದು ತಿಳಿಸಿದರು.

ದೇವಿಯ ಆರಾಧನೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಹಾಗೂ ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಪ್ರತಿ ಮಂಗಳವಾರ ಶುಕ್ರವಾರ ಹಾಗೂ ಅಮಾವಾಸ್ಯೆ ಹುಣ್ಣಿಮೆ ದಿನದಂದು ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಂದಿನ ಆರಾಧನಾ ಮಹೋತ್ಸವಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ ಇಂದು ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ನಿರಂತರ 12 ವರ್ಷಗಳಿಂದ ಈ ಆಚರಣೆ ನಿರಂತರವಾಗಿ ನೆಡೆಯುತ್ತಿದ್ದು, ದೇವಿಯ ಸ್ವರೂಪರಾದ ಮಹಿಳೆಯರಿಗೆ ಇಲ್ಲಿ ಉಡುಗೊರೆ ಸೇರಿದಂತೆ ಹಲವು ಪದಾರ್ಥಗಳನ್ನೊಳಗೊಂಡ ಬಾಗಿನವನ್ನು ಅರ್ಪಿಸಿ ದೇವಿ ಆರಾಧನೆ ಮಾಡುವುದು ವಿಶೇಷ ಎಂದು ಭಕ್ತದಿಗಳು ತಿಳಿಸಿದರು.
ಯಜಮಾನ್ ಗಂಗಾ ಹನುಮಯ್ಯ ಮಾತನಾಡಿ ಕಳೆದ 5 ವರ್ಷಗಳಿಂದ ಈ ದೇವಾಲಯದ ಜಾತ್ರ ಮಹೋತ್ಸವಕ್ಕೆ ಆಗಮಿಸುತ್ತಿದ್ದೇನೆ ವರ್ಷದಿಂದ ವರ್ಷಕ್ಕೆ ಇಲ್ಲಿ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಅಲ್ಲದೆ ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೂ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಉತ್ತಮ ವ್ಯವಸ್ಥೆಯಲ್ಲಿ ಕಲ್ಪಿಸಲಾಗುತ್ತದೆ ಕಾರ್ಯಕ್ರಮದ ಸಂಪೂರ್ಣ ಯಶಸ್ಸು ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣಿ ಅವರಿಗೆ ಸಲ್ಲುತ್ತದೆ ಎಂದರು.

ಯಜಮಾನ್ ಜಗದೀಶ್ ಮಾತನಾಡಿ ಶ್ರೀ ಬಗಳಾಮುಖಿ ದೇವಿಯ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸುವುದು ತಾವೇ ಸ್ವತಹ ದೇವಾಲಯದ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜಾತ್ರೆಯನ್ನು ವಿಜೃಂಭಣೆಯಿಂದ ಮಾಡುವುದು ಇಲ್ಲಿನ ವಿಶೇಷತೆ, ಈ ಜಾತ್ರಾ ಮಹೋತ್ಸವ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ನಡೆಯಲಿ ದೇವಿಯು ಸರ್ವರಿಗೂ ಸಕಲ ಸಮ್ಮಂಗಳವನ್ನು ಉಂಟುಮಾಡಲಿ ಎಂದು ಶುಭ ಹಾರೈಸಿದರು.
ಈ ವೇಳೆ ಮುಖಂಡರಾದ ಯಜಮಾನ್ ಉಮೇಶ್, ಶಾಂತಕುಮಾರ್ ಬೈಯಪ್ಪ ಅಧ್ಯಕ್ಷರು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆ ಸಿ ಮಂಜಣ್ಣ ಕಾಂಗ್ರೆಸ್ ಪ್ರಮುಖರು ವಿಜಿಕುಮಾರ್ , ಸುಬ್ಬಣ್ಣ,ಎಂ.ಜಯರಾಮ್,ನಾಗರಾಜು ಚಿಕ್ಕ ಹೆಜ್ಜಾಜಿ , ರಾಮ ಮೂರ್ತಿ ಚಿಕ್ಕ ಹೆಜ್ಜಾಜಿ , ಯಮುನಾ ಸುಬ್ರಮಣಿ, ಅರದೇಶನಹಳ್ಳಿ ರಮೇಶ್, ಮಂಜ ಕತ್ತಿ ಹೊಸಹಳ್ಳಿ, ಬೋಕಿಪುರ ಹನುಮಂತ, ರವಿ, ವಿನು ನಾಗರಾಜು ಖ್ಯಾತಸಂದ್ರ, ನೆಲಮಂಗಲ ನಾಗರಾಜು ದೇವಾಲಯಕ್ಕೆ ಆಗಮಿಸಿದ ಭಕ್ತದಿಗಳಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.




