
ದೊಡ್ಡಬಳ್ಳಾಪುರ : ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಐದನೇ ವರ್ಷದ ಪುಣ್ಯಸ್ಮರಣೆಯನ್ನು ತಾಲ್ಲೂಕಿನ ಎಳ್ಳುಪುರ ಕ್ರಾಸ್ ನಲ್ಲಿ ಅಭಿಮಾನಿಗಳು ವಿಶೇಷವಾಗಿ ಅನ್ನಸಂತರ್ಪಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ತಮ್ಮ ನೆಚ್ಚಿನ ನಾಯಕನಟರಿಗೆ ಇಷ್ಟವಾದ ಬಿರಿಯಾನಿಯನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಅಭಿಮಾನಿಗಳು ನಟ ಪುನೀತ್ ರಾಜಕುಮಾರ್ ಅವರನ್ನು ನೆನೆದರು.
ಈ ವೇಳೆ ಅಭಿಮಾನಿ ಪುನೀತ್ ಅಪ್ಪು ಮಾತನಾಡಿ ಕರ್ನಾಟಕದ ಹೆಮ್ಮೆ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ ಕಳೆದ ಐದು ವರ್ಷದಿಂದ ಪ್ರತಿ ವರ್ಷವೂ ಅವರ ಪುಣ್ಯಸ್ಮರಣೆಯನ್ನು ಅನ್ನ ಸಂತರ್ಪಣೆ ಮಾಡುವ ಮೂಲಕ ನೆರವೇರಿಸುತ್ತಿದ್ದು, ನಮ್ಮ ಸೇವಾ ಕಾರ್ಯಗಳಲ್ಲಿ ಅವರು ಸದಾ ಅಮರರು ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದೇವೆ. ಪುನೀತ್ ರಾಜಕುಮಾರ್ ಕೇವಲ ಒಬ್ಬ ನಟರಲ್ಲ ಸಮಾಜಕ್ಕೆ ಮಾದರಿಯಾದ ವ್ಯಕ್ತಿ ಅವರ ಸೇವಾ ಕಾರ್ಯಗಳು ನಮ್ಮೆಲ್ಲರಿಗೂ ಸ್ಫೂರ್ತಿ ಎಂದರು.
ಡಾ. ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣ ದಿನಗಳಷ್ಟೇ ಅಲ್ಲದೆ ನಿರಂತರ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಅವರು ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ತೋರಿಸಬೇಕೆಂದು ಎಲ್ಲಾ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ . ಅವರು ಸದಾ ನಮ್ಮ ಹೃದಯದಲ್ಲಿ ಜೀವಂತರಾಗಿದ್ದಾರೆ ನಾವು ಮಾಡುವ ಸೇವಾ ಕಾರ್ಯಗಳಲ್ಲಿ ಅವರ ಆಶೀರ್ವಾದ ಸದಾ ಇರುತ್ತದೆ ಎಂದರು.
ಅಭಿಮಾನಿ ಚಂದ್ರು ಮಾತನಾಡಿ ನಮ್ಮೆಲ್ಲರ ಆದರ್ಶ ಡಾ. ಪುನೀತ್ ರಾಜಕುಮಾರ್ ಅವರು ಅವರ ಜೀವನವೇ ನಮಗೆ ಸ್ಪೂರ್ತಿಯಾಗಿದೆ ಸದಾ ಸಮಾಜ ಸೇವೆಯಲ್ಲಿ ತೊಡಗುವುದು ನೊಂದವರ ಧ್ವನಿಯಾಗಿ ಶ್ರಮಿಸುವುದನ್ನು ನಾವು ಅವರಿಂದ ಕಲಿತ್ತಿದ್ದೇವೆ ಮುಂದೆಯೂ ಸಹ ಅವರ ಹೆಸರಿನಲ್ಲಿ ಸಮಾಜ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿವೆ ಎಂದರು.

ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ ಎಳ್ಳುಪುರ ಕ್ರಾಸ್ ನ ನಿವಾಸಿ ಪುನೀತ್ ಅಪ್ಪುರವರು ಪ್ರತಿ ವರ್ಷವು ಡಾಕ್ಟರ್ ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬ ಪುಣ್ಯಸ್ಮರಣೆ ಇತರೆ ಕಾರ್ಯಕ್ರಮಗಳನ್ನು ಎಷ್ಟೇ ಅಡೆತಡೆಗಳಿದ್ದರೂ ನಡೆಸಿಕೊಂಡು ಬರುತ್ತಿದ್ದಾರೆ. ಪುನೀತ್ ರಾಜಕುಮಾರ್ ಎಂದರೆ ಶಕ್ತಿ ಎಂಬುದನ್ನು ತಮ್ಮ ಕಾರ್ಯದ ಮೂಲಕ ತೋರಿಸಿದ್ದಾರೆ ಎಳ್ಳುಪುರ ಕ್ರಾಸ್ ನ ಪುನೀತ್ ಅಪ್ಪು ಹಾಗೂ ತಂಡದವರಿಗೆ ಶುಭವಾಗಲಿ ಅವರ ಸೇವೆ ಸದಾ ಹೀಗೆ ಮುಂದುವರೆಯಲಿ ಎಂದರು.
ಈ ವೇಳೆ ಅಭಿಮಾನಿಗಳಾದ ಪುನೀತ್ ಅಪ್ಪು, ನರೇಂದ್ರ ಎಳ್ಳುಪುರ ಕ್ರಾಸ್,ಪಟ್ಟಣ ಪಂಚಾಯಿತಿ ಸದಸ್ಯ ಮಧು , ಚಂದ್ರಶೇಖರ್ ಬೀರಸಂದ್ರ,ಶರತ್ ಜೋಗಹಳ್ಳಿ, ಕನಕರಾಜು, ಜಿಂಕೆಬಚ್ಚಳ್ಳಿ, ದಯಾನಂದ, ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆ ಮಂಜುನಾಥ್ ಹಾಗೂ ಸದಸ್ಯರು ಹಾಗೂ ಅಪ್ಪು ಅಭಿಮಾನಿಗಳು ಹಾಜರಿದ್ದರು.




