
ದೊಡ್ಡಬಳ್ಳಾಪುರ : ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಸಾಧನೆ ಮಾಡಿದ 14 ಸಾಧಕರಿಗೆ ತಾಲ್ಲೂಕು ಆಡಳಿತದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜನೆ ಮಾಡುವ ತಾಲ್ಲೂಕು ಮಟ್ಟದ ಕಾರ್ಯಕ್ರಮದಲ್ಲಿ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಗುವುದು

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇತರೆ ಪ್ರಶಸ್ತಿಗಳಿಗೆ ಆಯ್ಕೆಯಾದವರ ಪಟ್ಟಿ : ಮಹಾಬಲೇಶ್ವರ್ (ವೆಂಕಟರೆಡ್ಡಿ ಪ್ರಶಸ್ತಿ), ಅಂಜನಮೂರ್ತಿ(ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ರಾಮಕೃಷ್ಣ ಎನ್ (ಕನ್ನಡ ರಾಜ್ಯೋತ್ಸವ ಪ್ರಶಸ್ತಿ),ಕುಮಾರಿ ಮೋನಿಕಾ (ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ), ಹೃತಿಕ್ ಜೆ.ಸಿ (ಕ್ರೀಡೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ಚಂದ್ರಶೇಖರ್ ಎಂ (ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ಚುರುಚಪ್ಪ ಬೀಮಪ್ಪ ( ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ಎಂ ಜೋಗಿಹಳ್ಳಿ ಅಮ್ಮು (ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ಹರ್ಷಿತ್ ಎಂ (ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ಬ್ರಹ್ಮಾಚಾರ್ (ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ಅಣ್ಣಯ್ಯ (ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ಆದರ್ಶ್ ಕೋಡಿ (ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ಲೋಕೇಶ್ ಸಿ ವಿ (ಕನ್ನಡ ರಾಜ್ಯೋತ್ಸವ ಪ್ರಶಸ್ತಿ), ಶ್ರೀಲಾಳೆ ಮಶ್ಯಾಕ್ (ಕನ್ನಡ ರಾಜ್ಯೋತ್ಸವ ಪ್ರಶಸ್ತಿ) ಪ್ರಶಸ್ತಿ ಪಡೆಯಲಿದ್ದಾರೆ.
Ad
ಕನ್ನಡ ರಾಜ್ಯೋತ್ಸವ ದಿನದಂದು ಆಯೋಜಿಸಲಾಗುವ ಅಧಿಕೃತ ಸಮಾರಂಭದಲ್ಲಿ ತಾಲ್ಲೂಕು ಆಡಳಿತವು ಈ ಎಲ್ಲಾ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ, ಸನ್ಮಾನದೊಂದಿಗೆ ಗೌರವಿಸಲಿದೆ ಎಲ್ಲಾ ಸಾಧಕ ಸನ್ಮಾನಿತರಿಗೆ ಹೆಚ್ ಕೆ ಸುದ್ದಿ ( HKSUDDI ) ವಾಹಿನಿ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.




