
ದೊಡ್ಡಬಳ್ಳಾಪುರ : ನಿರಂತರ ಅನ್ನದಾಸೋಹಕ್ಕೆ ಸಹಾಯ ಹಸ್ತ ನೀಡಿದ ದಾನಿಗಳನ್ನು ಗುರುತಿಸಿ ಅವರಿಗಾಗಿ ವೇದಿಕೆ ಸಿದ್ಧಪಡಿಸಿ ಕಾರ್ಯಕ್ರಮವನ್ನು ರೂಪಿಸಿ ಸನ್ಮಾನಿಸಿ ಗೌರವಿಸುವುದು ನಿರಂತರ ಅನ್ನ ದಾಸೋಹ ಸಮಿತಿಯ ವಿಶೇಷತೆಯಾಗಿದೆ. ಇಂತಹ ಕಾರ್ಯಕ್ರಮಗಳು ಆರ್ಥಿಕವಾಗಿ ಸಬಲತೆ ಹೊಂದಿರುವ ಕುಟುಂಬಗಳು ದಾನ ಮಾಡುವಂತೆ ಪ್ರೇರೇಪಿಸುತ್ತವೆ ಎಂದರೆ ತಪ್ಪಾಗಲಾರದು ಜೊತೆಗೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಪ್ರಸ್ತುತ ಬಡಜನರ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮುಟ್ಟಿಸುವುದಾಗಿದೆ ಎಂದು ಖ್ಯಾತ ವಕೀಲರು ಹಾಗೂ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ರವಿ ಮಾವಿನ ಕುಂಟೆ ತಿಳಿಸಿದರು

ತಾಲೂಕಿನ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರಂತರ ಅನ್ನದಾಸೋಹ ಸಮಿತಿಯ ವತಿಯಿಂದ 2411ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಸರ್ಕಾರಗಳು ಇಲ್ಲಸಲ್ಲದ ಭಾಗ್ಯಗಳನ್ನು ಕೊಟ್ಟು ಬಡವರ ಉದ್ದಾರ ಮಾಡುತ್ತಿದ್ದೇವೆ ಎನ್ನುತ್ತಾರೆ ಆದರೆ ಇಂದಿಗೂ ನಮ್ಮಲ್ಲಿ ಹಸಿವು ನಿಂತಿಲ್ಲ ಬಡತನ ಹೋಗಿಲ್ಲ ಇಂತಹ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಲೇ ಇವೆ ಇಂದಿಗೂ ನಿರಂತರವಾಗಿ ಅನ್ನದಾಸೋಹಕ್ಕೆ ನೂರಾರು ಜನರು ಬರುತ್ತಿದ್ದಾರೆ ಎಂದರೆ ನಾವೆಲ್ಲರೂ ಅರ್ಥೈಸಿಕೊಳ್ಳಬೇಕು ಇದು ಅವಶ್ಯಕತೆಯಲ್ಲ ಅನಿವಾರ್ಯತೆ ಎಂದು ನಿರಂತರವಾಗಿ ಯಾವುದೇ ಅಡ್ಡಿ ಅಡೆತಡೆಗಳು ಬಂದರೂ ಕಾರ್ಯಕ್ರಮವನ್ನು ನಿಲ್ಲಿಸದೆ ಸತತ 2411 ದಿನಗಳಿಂದ ನಿರಂತರ ಅನ್ನದಾಸೋಹ ಮಾಡುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದರು.

ಖ್ಯಾತ ವೈದ್ಯರಾದ ಡಾ. ಅಂಜಿನಪ್ಪ ಮಾತನಾಡಿ ಖಂಡಿತವಾಗಿಯೂ ಇದು ವಿಶೇಷ ಕಾರ್ಯಕ್ರಮವೇ ಸರಿ ಕಾರಣ ಮಠ ಮಂದಿರಗಳಲ್ಲಿ ಅನ್ನದಾಸೋಹ ಮಾಡಿದ್ದನ್ನು ನೋಡಿದ್ದೇವೆ ಆದರೆ ಒಬ್ಬ ಸಾಮಾನ್ಯ ಕಲಾವಿದ ಕಳೆದ 2411 ದಿನಗಳಿಂದ ನೂರಾರು ಜನರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ ಇದು ಸಾಮಾನ್ಯವಾಗಿ ವಿಚಾರವಲ್ಲ, ಕೇವಲ ದಾನಿಗಳ ನೆರವಿನಿಂದ ಇಂಥ ಮಹತ್ಕಾರ್ಯ ಮಾಡುತ್ತಿರುವ ಮಲ್ಲೇಶ್ ರವರಿಗೆ ಶುಭವಾಗಲಿ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ರಾಜ್ಯ ಕಾಂಗ್ರೆಸ್ ಪ್ರಮುಖರು ಸಮಾಜ ಸೇವಕರು ಆದ ಸಾಯಿ ಸತೀಶ್ ತೋಟಯ್ಯ ಮಾತನಾಡಿ ಸಣ್ಣದೊಂದು ಕಾರ್ಯಕ್ರಮ ಭೇಟಿ ನೀಡಿ ಎಂದು ಆಹ್ವಾನಿಸಿದ್ದರು ಆದರೆ ಇಲ್ಲಿ ಬಂದು ನೋಡಿದರೆ ಇದೊಂದು ಬೃಹತ್ ಕಾರ್ಯಕ್ರಮ ಸತತ 2411 ದಿನಗಳು ನಡೆದಿರುವ ನಿರಂತರ ಅನ್ನದಾಸೋಹ ಕಾರ್ಯಕ್ರಮದ ವಿಶೇಷ ದಿನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸತಂದಿದೆ. ಮುಂದೆ ನಿರಂತರ ಅನ್ನದಾಸೋಹ ಸಮಿತಿಯ ಶಿವ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದರು.

ಚಿತ್ರನಟ ಗಣೇಶ್ ರಾವ್ ಕೇಸರ್ಕರ್ ಮಾತನಾಡಿ ಇದೊಂದು ಅಭೂತಪೂರ್ವ ಕಾರ್ಯಕ್ರಮ ಈ ಕಾರ್ಯಕ್ರಮವು ಕೇವಲ ಅನ್ನದಾಸೋಹಕ್ಕೆ ಸೀಮಿತವಾಗದೆ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ ಮಾಡುವ ಮೂಲಕ ಬಡವರಿಗೆ ಬಟ್ಟೆ ವಿತರಣೆ ಮಾಡುವ ಮೂಲಕ ವಿಶೇಷ ಆಯಾಮಗಳನ್ನು ಪಡೆದುಕೊಂಡಿದೆ ನಿರಂತರ ಅನ್ನದಾಸೋಹ ಸಮಿತಿಯ ಸೇವಾ ಕಾರ್ಯಗಳು ಸದಾ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಂತಾಗಲಿ ಎಂದರು.

ಪತ್ರಕರ್ತರಾದ ಟಿವಿ ಸಂಪಂಗಿ ಮಾತನಾಡಿ ಹಲವಾರು ದೇಶಗಳಿಗೆ ಭೇಟಿ ನೀಡಿದ್ದೇನೆ ದೇಶದ ಹಲವು ರಾಜ್ಯಗಳಲ್ಲಿ ನೂರಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಆದರೆ ಇದೊಂದು ವಿಶೇಷ ಕಾರ್ಯಕ್ರಮ ಯಾವುದೇ ಬೆಂಬಲವಿಲ್ಲದೆ ಕೇವಲ ದಾನಿಗಳನ್ನು ಹುಡುಕಿ ಅವರ ಸಹಾಯದಿಂದ ನಡೆಯುವ ಅನ್ನ ದಾಸೋಹ ಕಾರ್ಯಕ್ರಮ ಮಲ್ಲೇಶ್ ಅವರ ಸಾಧನೆ ಮೆಚ್ಚುವಂಥದ್ದು ಅವರ ಸೇವಾಕಾರ್ಯಗಳು ಹೇಗೆ ಮುಂದುವರೆಯಲಿ ಎಂದರು.

ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಗುರು ಸ್ವಾಮಿ ಮಾತನಾಡಿ ಹಸಿದವರಿಗೆ ಆಹಾರ ಒದಗಿಸುವುದು ಅಷ್ಟು ಸುಲಭದ ಕೆಲಸವಲ್ಲ ಇಂತಹ ಕಾರ್ಯವನ್ನು ಅನ್ನದಾಸೋಹಿ ಎಂದೆ ಪ್ರಸಿದ್ಧಿ ಪಡೆದಿರುವ ಮಲ್ಲೇಶ್ ರವರು ಕಳೆದ 2411 ದಿನಗಳಿಂದ ನೆಡೆಸಿಕೊಂಡು ಬರುತ್ತಿದ್ದಾರೆ ಅವರ ಸೇವೆ ಸದಾ ನಡೆಯಲಿ ನಮ್ಮ ಸಹಕಾರ ಅವರೊಂದಿಗೆ ಸದಾ ಇರುತ್ತದೆ.

ನಮ್ಮ ಊರು ನಮ್ಮ ನೀರು ಬಾಬುರೆಡ್ಡಿ ಮಾತನಾಡಿ ಇಂತಹ ಉತ್ತಮ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿದ್ದೇವೆ ಎಂಬುದು ನಮಗೆ ಹೆಮ್ಮೆ , ಕಾರ್ಯಕ್ರಮಕ್ಕಾಗಿ ನಮ್ಮವರು ನಮ್ಮ ನೀರು ವತಿಯಿಂದ ಸೇವೆ ಸಲ್ಲಿಸಿದ್ದೇವೆ. ಇದೊಂದು ವಿಶೇಷ ಪ್ರಯತ್ನ ಕನ್ನಡಿಗರಿಂದ ಪ್ರಾರಂಭವಾಗಿರುವ ಉದ್ಯೋಗವು ಕರ್ನಾಟಕದ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ನಮ್ಮ ಉದ್ದೇಶವನ್ನು ಬೆಂಬಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ನಿರಂತರ ಅನಂತ ಸಹ ಸಮಿತಿಗೆ ಆಭಾರಿಯಾಗಿರುತ್ತೇವೆ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಜೀವ್ ನಾಯಕ್, ರಾಜಘಟ್ಟ ರವಿ, ಪ್ರಭಾ ನಾಗರಾಜ್, ಸುಬ್ರಹ್ಮಣ್ಯ (ಎಂ ಎಸ್ ವಿ), ಪಿ.ಸಿ ಲಕ್ಷ್ಮೀನಾರಾಯಣ, ಪ್ರಮೀಳಾ ಮಹದೇವ್, ಶಶಿಕಲಾ ನಾಗರಾಜು, ಜೆ ವೈ ಮಲ್ಲಪ್ಪ, ನಾಗರಾಜ್ ಭಂಡಾರಿ, ಡಾ. ಗುಣವಂತ, ಮಂಜು, ಜಿ ಸುರೇಶ್. ಡಾ. ಟಿ ಎಂ ಸಹದೇಶ್, ನಾಗರಾಜ್,ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾ ಕರ್ನಾಟಕ ರಾಜ್ಯ ಘಟಕದ ಪ್ರಮುಖರಾದ , ವಿಜಯ ಬಿರಾದಾರ್, ಲಕ್ಷ್ಮೀ ಶೆಟ್ಟಿಗಾರ್, ಟಿ.ಕೃಷ್ಣಪ್ಪ, ಸಮಿತಿಯ ಪ್ರಮುಖರಾದ ಸಂತೋಷ್ , ಸೇಲ್ವಂ, ಕೆ.ಶ್ರೀನಿವಾಸ್,ವೆಂಕಟರಾಜು, ಜಯಂತ್, ಆರ್. ಸುಜಾತಾ, ಜೆ. ಶಿವಕುಮಾರ್ ಜಗನ್ನಾಥ್,ಎಸ್. ಸುರೇಶ್ ಸಿಂಗಂ ನಮ್ಮ ಊರು ನಮ್ಮ ನೀರು ಬಾಬುರೆಡ್ಡಿ, ಹರ್ಶಿತ್ ರಾಜ್, ಜಯಕೃಷ್ಣ, ನಾಗರತ್ನಮ್ಮ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.




