
ದೊಡ್ಡಬಳ್ಳಾಪುರ : ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಮದುವೆಯಾಗಿ ವರ್ಷ ತುಂಬಿತಷ್ಟೇ, ಅದಾಗಲೇ ಶುರುವಾಗಿತ್ತು ಗಂಡನ ಮನೆಯವರ ಕಿರುಕುಳಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಕಾಡನೂರು ಗ್ರಾಮದಲ್ಲಿ ನವೆಂಬರ್ 8ರ ಸಂಜೆ ಘಟನೆ ನಡೆದಿದ್ದು, 22 ವರ್ಷದ ಕಾವ್ಯ ತನ್ನ ತವರು ಮನೆಯಲ್ಲಿ ದುರಂತ ಅಂತ್ಯ ಕಂಡಿದ್ದಾಳೆ ಎನ್ನಲಾಗಿದೆ. ವರದಕ್ಷಿಣೆ ಕಿರುಕುಳ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೃತಳ ತಾಯಿ ಚಿಕ್ಕಮುನಿಯಮ್ಮ ದೂರು ನೀಡಿದ್ದಾರೆ.
ಪೊಲೀಸ್ ಇಲಾಖೆ ಸೂಕ್ತ ತನಿಖೆ ನೆಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಮೃತ ಕಾವ್ಯರ ಸಾವಿಗೆ ನ್ಯಾಯ ಒದಗಿಸಲಿ ಎಂದು ಕುಟುಂಬಸ್ಥರು ವಿನಂತಿಸಿದ್ದಾರೆ.
ಮೃತ ಕಾವ್ಯ ಖಾಸಗಿ ಕಾಲೇಜ್ ನಲ್ಲಿ ಅಡೆಂಡರ್ ಕೆಲಸ ಮಾಡುತ್ತಿದ್ದಳು, ಅಲ್ಲಿಯೇ ಪರಿಚಯವಾಗಿದ್ದ ಶಾನುಭೋಗನಹಳ್ಳಿಯ ಹನುಮಂತರಾಜು ಪರಿಚಯವಾಗಿದೆ, ಇಬ್ಬರು ಪ್ರೀತಿಸಿ ಕಳೆದ ವರ್ಷ ಮದುವೆಯಾಗಿದ್ದರು. ಮದುವೆಯಾಗಿ ವರ್ಷ ಆಗಿರಲಿಲ್ಲ 5 ಲಕ್ಷ ವರದಕ್ಷಿಣೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಂಡನ ಮನೆಯ ಪಕ್ಕದಲ್ಲಿಯೇ ವಾಸವಾಗಿದ್ದ, ಗಂಡನ ಕುಟುಂಬಸ್ಥರು ಮಾನಸಿಕ ಕಿರುಕುಳ ನೀಡುತ್ತಿದ್ದರು ಗಂಡನ ಮನೆಯವರ ಕಿರುಕುಳಕ್ಕೆ ಮನೆನೊಂದು ಕಾವ್ಯ ನವೆಂಬರ್ 8ರಂದು ತವರು ಮನೆಗೆ ಬಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಕಾರಣರಾದ ಗಂಡ ಮತ್ತು ನಾದಿನಿಯರು ಅವರ ಗಂಡದಿರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ತಾಯಿ ಚಿಕ್ಕಮುನಿಯಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.




