
ದೊಡ್ಡಬಳ್ಳಾಪುರ : ಸಾಂಪ್ರದಾಯಿಕ ಬೋಧನಾ ವಿಧಾನಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಜೊತೆಗೆ ಪ್ರಮುಖ ಶೈಕ್ಷಣಿಕ ಗಣಿತ, ವಿಜ್ಞಾನ, ಸಮಾಜ ಅಧ್ಯಯನ ಮತ್ತು ಭಾಷೆಗಳೆಗೆ ಒತ್ತು ನೀಡುವ ಸಲುವಾಗಿ ಮಕ್ಕಳು ವಿಚಾರವನ್ನು ಕಲಿತು ತಿಳಿಸುವಂತಾಗಬೇಕು ಎಂಬ ಮುಖ್ಯ ಉದ್ದೇಶದೊಂದಿಗೆ ಕ್ಯೂರಿಯಾಸಿಟಿ ಕ್ವೆಸ್ಟ್ -2026(CURIOSITY QUEST2026) ಆಯೋಜನೆಮಾದಲಾಗಿದೆ ಎಂದು ಬ್ಲೂಮ್ಸ್ ಟೆಕ್ನೋ ಶಾಲೆಯ ಉಪಾಧ್ಯಕ್ಷ ಮುರಳಿ ಎಂ ತಿಳಿಸಿದರು.
ತಾಲ್ಲೂಕಿನ ಪಲನಾ ಜೋಗಿಹಳ್ಳಿಯಲ್ಲಿರುವ ಬ್ಲೂಮ್ಸ್ ಟೆಕ್ನೋ ಶಾಲೆಯಲ್ಲಿ ಇಂದು ಆಯೋಜನೆ ಮಾಡಲಾಗಿದ್ದ ಕ್ಯೂರಿಯಾಸಿಟಿ ಕ್ವೆಸ್ಟ್- 2026 (Curiosity quest- 2026 ) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು,ಸಮರ್ಪಿತ ಮನೋಭಾವ ಹೊಂದಿರುವ ಮಾರ್ಗದರ್ಶಕ ಶಿಕ್ಷಕರು ನಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಕರು ಹಾಗೂ ಪೋಷಕರ ಕಳೆದ 15 ದಿನಗಳ ನಿರಂತರ ಶ್ರಮದಿಂದಾಗಿ ಇಂದಿನ ಕ್ಯೂರಿಯಾಸಿಟಿ ಕ್ವಿಸ್ಟ್ -2026 ಅದ್ಭುತವಾಗಿ ಮೂಡಿಬಂದಿದೆ ಎಂದರು.
ನಮ್ಮಲ್ಲಿ ಬೇರೆ ಶಾಲೆಗಳ ರೀತಿ ಕಟ್ಟುನಿಟ್ಟಾಗಿ ಕಂಠಪಾಠವನ್ನು ಅವಲಂಬಿಸುವ ಬದಲು ಕುತೂಹಲವನ್ನು ಹುಟ್ಟುಹಾಕಲು ವಿನ್ಯಾಸಗೊಳಿಸಲಾದ ಸೃಜನಶೀಲ, ಸ್ಮಾರ್ಟ್-ಕಲಿಕೆಗೆ ಉತ್ತೇಜನ ನೀಡುತ್ತೇವೆ.ನಮ್ಮ ಸಂಸ್ಥೆಯು ಮೌಲ್ಯಾಧಾರಿತ ಕಲಿಕೆಗೆ ಹೆಚ್ಚು ಪ್ರಮುಖ್ಯತೆ ನೀಡುತ್ತೇವೆ ಅದಕ್ಕೆ ಉತ್ತಮ ಉದಾಹರಣೆ ಇಂದಿನ ಕಾರ್ಯಕ್ರಮ ಎಂದರೆ ತಪ್ಪಾಗಲಾರದು ಎಂದರು.
ಸಂಪೂರ್ಣ ಪರಿಸರ ಸಂರಕ್ಷಣಾ ಪರಿಕಲ್ಪನೆಯಲ್ಲಿ ಕ್ಯೂರಿಯಾಸಿಟಿ ಕ್ವಿಸ್ಟ್
ಇದು ಎರಡನೇ ವರ್ಷದ ಕ್ಯೂರಿಯಾಸಿಟಿ ಕ್ವೆಸ್ಟ್- 2026 ಕಾರ್ಯಕ್ರಮವಾಗಿದೆ ಈ ಬಾರಿ ಪರಿಸರಕ್ಕೆ ಸಂಬಂದಿಸಿದ ಪರಿಕಲ್ಪನೆಯಲ್ಲಿ ಸಂಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ, ಪ್ರಮುಖವಾಗಿ ಹವಾಮಾನ ವೈಫರಿತ್ಯ , ಮಾನವ ಅರೋಗ್ಯ, ಮಾನವನಿಂದ ಹನಿಗೋಳಗಾದ ಸಮುದ್ರ ಹಾಗೂ ಜಲಮೂಲಗಳನ್ನು ಬಿಂಬಿಸುವ ಸಾಕಷ್ಟು ಮಾದರಿಗಳನ್ನು ಪೋಷಕರು, ಮಕ್ಕಳು ಹೆಚ್ಚಿನ ಉತ್ಸಾಹದಿಂದ ಮಾಡಿ ಇಲ್ಲಿ ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ಪೋಷಕರಿಂದ ಪೋಷಕರಿಗೆ ವಿಶೇಷ ಆಟಗಳ ಆಯೋಜನೆ
ಕ್ಯೂರಿಯಾಸಿಟಿ ಕ್ವಿಸ್ಟ್ ನೋಡಲು ಶಾಲೆಗೆ ಬರುವ ಎಲ್ಲಾ ಪೋಷಕರಿಗೆ, ಮಕ್ಕಳಿಗೆ ಹಾಗೂ ಅತಿಥಿಗಳಿಗೆ ಗಣಿತದ ಲೆಕ್ಕಾಚಾರ, ವಿಜ್ಞಾನದ ರಹಸ್ಯ, ಬುದ್ದಿಗೆ ಕೆಲಸ ಕೊಡುವ ಹಲವು ವಿಶೇಷ ಒಳಂಗಣ ಕ್ರೀಡೆಗಳನ್ನು ಪೋಷಕರೇ ಆಯೋಜನೆ ಮಾಡಿ ನಿರ್ವಹಣೆ ಮಾಡಿದ್ದು ವಿಶೇಷವಾಗಿತ್ತು. ಶಾಲೆಗೆ ಬಂದ ಪೋಷಕರು ಮನೋರಂಜನೆ ಜೊತೆ ಜೋತೆಗೆ ಬುದ್ದಿ ಚುರುಕುಗೊಳಿಸುವ ಆಟಗಳನ್ನು ಆಡುವ ಮೂಲಕ ಸಂಭ್ರಮವ್ಯಕ್ತ ಪಡಿಸಿದರು.
ಶಾಲೆಯ ಅಧ್ಯಕ್ಷ ಬಿಎಂ ಶ್ರೀನಿವಾಸ್ ಮಾತನಾಡಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ಮಕ್ಕಳಿಂದ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂದಿದೆ, ಇಂದಿನ ಕ್ಯೂರಿಯಾಸಿಟಿ ಕ್ವಿಸ್ಟ್ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಜಲಚರಗಳನ್ನು ಕುರಿತ ವಿಶೇಷ ಮಾದರಿಯನ್ನು ತಯಾರಿಸಲಾಗಿದೆ, ಅಲ್ಲದೆ ಮಾನವನ ದೇಹದಲ್ಲಿ ರಕ್ತ ಪರಿಚಲನೆ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ರೇಡಿಯಮ್ ಗಳನ್ನು ಬಳಸಿ ವಿಶೇಷ ಕೋಣೆ ತಯಾರಿಸಲಾಗಿದೆ, ಸಂಭ್ರಮಾಚರಣೆ ಮೂಲಕ ಮಕ್ಕಳಿಗೆ ಒಂದಿಷ್ಟು ಕಲಿಕೆಯಾಗಲಿ ಪೋಷಕರಿಗೆ ಮಕ್ಕಳ ತಿಳಿಸಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಈ ಕಾರ್ಯಕ್ರಮಕ್ಕೆ ಸ್ಪರ್ಧಿಸಿ ಸಹಕಾರ ನೀಡಿದ ಎಲ್ಲಾ ಗೌರವಾನ್ವಿತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬ್ಲೂಮ್ಸ್ ಟೆಕ್ನೋ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಸಾಕಷ್ಟು ವಿವಿಧ ವಿಭಿನ್ನ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ ಅಂತೆಯೇ ಇಂದು ಎರಡನೇ ಬಾರಿಗೆ ಕ್ಯೂರಿಯಾಸಿಟಿ ಕ್ವೆಸ್ಟ್- 2026 ಆಯೋಜನೆ ಮಾಡಲಾಗಿದ್ದು ಮಕ್ಕಳಿಗೆ ಪ್ರಾಯೋಗಿಕವಾಗಿ ಕಲಿಕೆ ಮಡಲು ಅವಕಾಶ ಕಲ್ಪಿಸಿದ್ದಾರೆ, ಶಾಲೆಯ ಆಡಳಿತ ಮಂಡಳಿ ಅತ್ಯಂತ ಸ್ನೇಹಮಯಿಯಾಗಿದ್ದು ಮುಂದೆ ಮತ್ತಷ್ಟು ಉತ್ತಮ ಮಟ್ಟದ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಪೋಷಕರು ಶುಭ ಹಾರೈಸಿದರು.
ಈ ವೇಳೆ ಶಾಲೆಯ ಅಧ್ಯಕ್ಷ ಬಿ ಎಂ ಶ್ರೀನಿವಾಸ್, ಶಾಲೆಯ ಉಪಾಧ್ಯಕ್ಷ ಮುರಳಿ ಎಂ, ಪ್ರಾಂಶುಪಾಲರಾದ ದೀಪ್ತಿ ಬಿ.ಟಿ, ಸೇರಿದಂತೆ ಶಾಲೆಯ ಶಿಕ್ಷಕರು, ಪೋಷಕರು ಹಾಜರಿದ್ದರು.




