ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ಅನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. NTA ಯ ಶಿಫಾರಸುಗಳನ್ನು ಅನುಸರಿಸಿ ಭಾರತದಲ್ಲಿ ಮರು- NEET ಗಾಗಿ ಟೆಲಿಗ್ರಾಮ್ ಪ್ರವೇಶವನ್ನು ನಿರ್ಬಂಧಿಸಲಾಗಿದೆ ನೀಟ್ ಪರೀಕ್ಷೆಗೆ ಯಾವುದೇ ಸಮಸ್ಯೆ ಆಗದಂತೆ ನೋಡುವ ನಿಟ್ಟಿನಲ್ಲಿ ಭಾರತ ಸರ್ಕಾರ (Social Media Ban) ಈ ನಿರ್ಧಾರ ಕೈಗೊಂಡಿದೆ.
“ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 69 A ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದೆ, ಇದು ಜೂನ್ 22, 2026 ಕ್ಕೆ ಕೊನೆಗೊಳ್ಳುವ ನಿರ್ದಿಷ್ಟ ಮತ್ತು ಸೀಮಿತ ಅವಧಿಗೆ ಭಾರತದಲ್ಲಿ ಟೆಲಿಗ್ರಾಮ್ ಪ್ಲಾಟ್ಫಾರ್ಮ್ಗೆ ಪ್ರವೇಶವನ್ನು ನಿರ್ಬಂಧಿಸುತ್ತದೆ, ಇದು NEET (UG) 2026 ಮರು-ಪರೀಕ್ಷೆಯ ದಿನ ಮತ್ತು ಅದರ ತಕ್ಷಣದ ಪರಿಣಾಮಗಳನ್ನು ಒಳಗೊಂಡಿದೆ. ಭಾರತದಲ್ಲಿ, ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳಿಗೆ ಸಂಬಂಧಿಸಿದಂತೆ ಸಂದೇಶ-ಸಂಪಾದನೆ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲು ವೇದಿಕೆಗೆ ಅಗತ್ಯವಿರುವ ನಿರ್ದೇಶನ, ರಾಷ್ಟ್ರೀಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ “ಪೇಪರ್ ಸೋರಿಕೆ” ಪುರಾವೆಗಳನ್ನು ತಯಾರಿಸಲು ವೇದಿಕೆಯನ್ನು ಬಳಸಲಾದ ನಿರ್ದಿಷ್ಟ ರಚನಾತ್ಮಕ ವೈಶಿಷ್ಟ್ಯವನ್ನು ಪರಿಹರಿಸುತ್ತದೆ.” : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಎಕ್ಸ್ ಮೂಲಕ ದೃಢಪಡಿಸಿದೆ.
ಜೂನ್ 22ರವರೆಗೆ ಭಾರತದಲ್ಲಿ ನೀಟ್ ಮರು ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೀಟ್ ಪರೀಕ್ಷೆಗೆ ತೊಂದರೆ ತರುವಂತಹ ಕೃತ್ಯಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದೆ.
ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ಗೆ ಟೆಲಿಗ್ರಾಮ್ ಹೆಸರುವಾಸಿಯಾಗಿದ್ದು, ಕಳೆದ ಬಾರಿ ಕೂಡ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಟೆಲಿಗ್ರಾಮ್ ಆಪ್ನಲ್ಲೇ ಹೆಚ್ಚು ವೈರಲ್ ಆಗಿತ್ತು. ಹೀಗಾಗಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರವು ಜೂನ್ 22 ರವರೆಗೆ ನೀಟ್ ಮರುಪರೀಕ್ಷೆಗೆ ಮುಂಚಿತವಾಗಿ ಟೆಲಿಗ್ರಾಮ್ ಆಪ್ ಅನ್ನು ನಿಷೇಧಿಸಿದೆ. ಜೂನ್ 30 ರವರೆಗೆ ಟೆಲಿಗ್ರಾಮ್ನಲ್ಲಿ ಮೆಸೇಜ್ ಕಳುಹಿಸುವ ಫೀಚರ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.
