ದೊಡ್ಡಬಳ್ಳಾಪುರ : ಪ್ರತಿನಿತ್ಯ ಬೆಳಗಾದರೆ ಸಾಕು ಹಸಿ ಕಸ ಒಣ ಕಸ ವಿಂಗಡನೆ ಮಾಡಿ ಪೌರಕಾರ್ಮಿಕರಿಗೆ ನೀಡಿ ಎಂದು ಸೂಚನೆ ಕೊಡುತ್ತಾ ಪ್ರತಿ ಮನೆ ಮುಂದೆ ಕಸದ ಗಾಡಿ ಬರುತ್ತವೆ ಅಪ್ಪಿ ತಪ್ಪಿ ಸಾರ್ವಜನಿಕರು ಗಾಡಿಗೆ ಕಸ ಹಾಕದೆ ಇದ್ದಲ್ಲಿ ರಸ್ತೆ ಬದಿಗಳಲ್ಲಿ ಕಸ ಹಾಕಿದಲ್ಲಿ ನಗರಸಭೆ, ಗ್ರಾಮ ಪಂಚಾಯಿತಿಗಳು ದಂಡ ಹಾಕುವುದು ಸರ್ವೇಸಾಮಾನ್ಯ.

ಆದರೆ ಸಾರ್ವಜನಿಕರು ರಸ್ತೆ ಬದಿ ಕಸ ಬಿಸಾಡುವುದು ತಪ್ಪು ಎಂದಾದರೆ ಅಧಿಕೃತವಾಗಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಎಂದು ನಾಮಫಲಕ ಹಾಕಿಕೊಂಡಿರುವ ಘನತಾಜ್ಯ ವಿಲೇವಾರಿ ಘಟಕಗಳು ತನ್ನ ಕರ್ತವ್ಯ ನಿರ್ವಹಿಸದೆ ಕರ್ತವ್ಯ ಲೋಪ ಮಾಡಿದರೆ ತಪ್ಪು ಅಲ್ಲವೇ.. ಅದಕ್ಕೆ ದಂಡ ಹಾಕುವವರು ಯಾರು…??? ಎಂಬುದು ಸಾರ್ವಜನಿಕರ ಪ್ರಶ್ನೆ

ಹೌದು ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ತನ್ನ ಕೆಲಸ ನಿಲ್ಲಿಸಿದಂತೆ ಕಾಣುತ್ತದೆ ಹಾಗಾಗಿ ಘಟಕದ ಒಳಭಾಗದಲ್ಲಿ ಕ್ವಿಂಟಲ್ ಗಟ್ಟಲೆ ಕಸದ ರಾಶಿ ನಮ್ಮನ್ನು ಸ್ವಾಗತಿಸುತ್ತದೆ. ಕಸ ಕೊಳೆತು ಗಬ್ಬುನಾರುತ್ತಿದೆ ಆದರೆ ಆ ವಾಸನೆ ಯಾವ ಅಧಿಕಾರಿಗಳಿಗೂ ಬಂದಂತಿಲ್ಲ ಅಷ್ಟೇ … ಪಂಚಾಯ್ತಿ ಆಡಳಿತ ಹಾಗೂ ಅಧಿಕಾರಿಗಳ ವರ್ಗ ಇದನ್ನು ಗಮನಿಸದೆ ಇರುವುದು ವಿಪರ್ಯಾಸವೇ ಸರಿ….

ಸಿಬ್ಬಂದಿಯೊಬ್ಬರನ್ನು ಈ ಕುರಿತು ಕೇಳಿದರೆ ಅದು ಕೇವಲ ಹಸಿ ಕಸ ಅಷ್ಟೇ ಅನ್ನುತ್ತಾರೆ ಆದರೆ ರಾಶಿ ರಾಶಿ ಕಸದಲ್ಲಿ ಮೆಡಿಕಲ್ ತಾಜ್ಯ, ಪ್ಲಾಸ್ಟಿಕ್, ಕಬ್ಬಿಣ ಅಂಶಗಳು ಒಳಗೊಂಡಿದೆ ಅದನ್ನು ಯಾರು ಒಪ್ಪಿಕೊಳ್ಳುವುದಿಲ್ಲ.. ಪಂಚಾಯ್ತಿ ಸ್ವಚ್ಛತೆ ಕಾಪಾಡಿ ಎಂದು ಸರ್ಕಾರ ಲಕ್ಷ ಲಕ್ಷ ಅನುದಾನ ಬಿಡುಗಡೆ ಮಾಡಿ ಸಹಾಯಕ್ಕೆಂದು ಸಂಬಳ ಭತ್ಯೆ ಕಲ್ಪಿಸಿ ಪೌರಕಾರ್ಮಿಕರನ್ನು ನೀಡಿದರೆ ಸಂಬಂಧ ಪಟ್ಟ ಪಂಚಾಯ್ತಿ ಸಿಬ್ಬಂದಿ ವರ್ಗ ಏನು ಮಾಡುತ್ತಿದೆ ಆ ದೇವರೇ ಬಲ್ಲ … ಈ ಪವಿತ್ರ ಸ್ಥಳಕ್ಕೆ ಅಧಿಕಾರಿಗಳು, ಪಂಚಾಯತಿ ಅಧ್ಯಕ್ಷರು, ಸ್ಥಳೀಯ ಸದಸ್ಯರು ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸಲಿ ಎಂಬುದೇ ನಮ್ಮ ಹೆಚ್ ಕೆ ಸುದ್ದಿ ಆಶಯ….
