
ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಟಿ.ವೆಂಕಟರಮಣ್ಯ, ಸದಸ್ಯರಾಗಿ ಬೈರೇಗೌಡ, ಕಂಟನಕುಂಟೆ ಕೃಷ್ಣಮೂರ್ತಿ, ಮುನಿರಾಜು ಅಧಿಕಾರ ಸ್ವೀಕರಿಸಿದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಮುಂಭಾಗದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರ ಪದಗ್ರಹಣ ನಡೆಯಿತು, ಈ ವೇಳೆ ಹೂಗುಚ್ಛ ನೀಡುವ ಮೂಲಕ ಅಧ್ಯಕ್ಷರನ್ನ ಅಭಿನಂದಿಸಲಾಗಿತು.
ಇದೇ ವೇಳೆ ಮಾಧ್ಯಮಗಳೊಂದಿಗೆ ನೂತನ ಅಧ್ಯಕ್ಷ ಟಿ.ವೆಂಕಟರಮಣಯ್ಯ ಮಾತನಾಡಿ ನಗರಗಳು ಅಡ್ಡಾದಿಟ್ಟಿಯಾಗಿ ಬೆಳೆಯುತ್ತಿದ್ದು , ಇದನ್ನು ಮನಗಂಡ ಸರ್ಕಾರ ನಗರ ಯೋಜನಾ ಪ್ರಾಧಿಕಾರಗಳನ್ನು ಅಸ್ತಿತ್ವಕ್ಕೆ ತಂದಿದೆ, 2017ರಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಪ್ರಾರಂಭವಾಗಿದ್ದು, ಪ್ರಾಧಿಕಾರದ ಪ್ರಕಾರವಾಗಿ ನಗರಗಳು ವಿಶಾಲವಾದ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರಬೇಕು. ಕಾನೂನು ಪ್ರಕಾರವಾಗಿ ಸದಸ್ಯರು ಸೇರಿದಂತೆ ನಾನು ಆಡಳಿತ ನಡೆಸುವ ಮೂಲಕ ಜನರ ಕೆಲಸ ಮಾಡಲಾಗುತ್ತದೆ, ನಮ್ಮದೆ ಸರ್ಕಾರ ಇದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವೀರಪ್ಪಮೊಯ್ಲಿ ಮಾರ್ಗದರ್ಶನದಲ್ಲಿ ತಾಲೂಕಿನ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದಲ್ಲಿ ಹೆಸರಘಟ್ಟ, ತೂಬಗೆರೆ ಸೇರಿದಂತೆ ತಾಲೂಕಿನ ಹೋಬಳಿಗಳಿದ್ದು, ಪ್ರತಿಯೊಬ್ಬರಿಗೆ ಒಂದೊಂದು ಬಾರಿ ಅವಕಾಶ ನೀಡುವ ಕೆಲಸ ಮಾಡಲಾಗುವುದು, ಇಲ್ಲಿಯವರೆಗೂ ಯಾವುದೇ ಅಪಸ್ವರ ಕೇಳಿ ಬಂದಿಲ್ಲ ಎಂದರು.
ಕಾಂಗ್ರೆಸ್ ನಗರಸಭಾ ಸದಸ್ಯರ ಗೈರು !
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಇರುವುದು ನಗರಗಳ ಅಭಿವೃದ್ಧಿಗಾಗಿ ಆದರೆ, ದೊಡ್ಡಬಳ್ಳಾಪುರ ನಗರ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಪ್ರತಿನಿಧಿಗೆ ಅವಕಾಶ ನೀಡಿಲ್ಲ, ಇದೇ ವೇಳೆ ಕಾಂಗ್ರೆಸ್ ನಗರಸಭಾ ಸದಸ್ಯರು ಪದಗ್ರಹಣ ಕಾರ್ಯಕ್ರಮಕ್ಕೆ ಗೈರು ಆಗಿರುವುದು ಸದಸ್ಯರ ಅಸಮಾಧನವನ್ನ ವ್ಯಕ್ತಪಡಿಸಿದೆ ಎಂದು ತಿಳಿಯ ಬಹುದಾಗಿದೆ.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಚುಂಚೇಗೌಡ, ಸದಸ್ಯರಾದ ಅಂಜನಮೂರ್ತಿ, ವೆಂಕಟೇಶ್, ರಾಮಣ್ಣ, ಜಂಟಿ ಕಾರ್ಯದರ್ಶಿಗಳಾದ ನಾಗರಾಜು ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.




