
ದೊಡ್ಡಬಳ್ಳಾಪುರ ( HK ಸುದ್ದಿ ): 20 ವರ್ಷಗಳ ನಿರಂತರ ಸಮಾಜಸೇವೆ ಗುರುತಿಸಿ ಯುನೈಟೆಡ್ ಅಮೆರಿಕನ್ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿನೀಡಿ ನನ್ನನ್ನು ಗೌರವಿಸಿದ್ದು ಈ ಸಂತೋಷವನ್ನು ನಿರಂತರ ಅನ್ನದಾಸೋಹ ಸಮಿತಿ ಸಹಯೋಗದೊಂದಿಗೆ ನಿರಾಶ್ರಿತರಿಗೆ ಅನ್ನದಾಸೋಹ, ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ, ವಯೋವೃದ್ಧರಿಗೆ ವಸ್ತ್ರ ವಿತರಣೆ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದೇನೆ ಎಂದು ಸಮಾಜಸೇವೆಕ ಡಿ ಎಸ್ ಸುಬ್ರಮಣ್ಯ ತಿಳಿಸಿದರು.

ತಾಲ್ಲೂಕಿನ ದರ್ಗಾಜೋಗಹಳ್ಳಿ ವ್ಯಾಪ್ತಿಯ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ 20 ವರ್ಷಗಳಿಂದ ಯಾವುದೇ ಪಲಾಪೇಕ್ಷೆ ಇಲ್ಲದೆ ಅನಾಥ ಮಕ್ಕಳಿಗೆ ಅನ್ನದಾಸೋಹ, ಸಾಮೂಹಿಕ ವಿವಾಹಗಳು, ನಿರ್ಗತಿಕರಿಗೆ ಬಟ್ಟೆ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಗೋಶಾಲೆಗಳಲ್ಲಿ ಮತ್ತು ಕನ್ನಡ ಪರ ಸಂಘಟನೆಗಳಲ್ಲಿ ನಾಡು ನುಡಿ ಜಲಕ್ಕಾಗಿ ಹೋರಾಟಗಳು, ರಕ್ತದಾನ, ಇನ್ನೂ ಇತರೆ ಸೇವೆಗಳನ್ನು ಗುರುತಿಸಿ ಯುನೈಟೆಡ್ ಅಮೆರಿಕನ್ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ನನ್ನನು ಆಯ್ಕೆ ಮಾಡಿದ ಯುನೈಟೆಡ್ ಅಮೆರಿಕನ್ ಯೂನಿವರ್ಸಿಟಿ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ದಾನಿಗಳಾದ ಪುಷ್ಪಲತಾ ಸುಬ್ರಮಣ್ಯ ಮಾತನಾಡಿ ಯುನೈಟೆಡ್ ಅಮೆರಿಕನ್ ಯೂನಿವರ್ಸಿಟಿ ನೀಡಿರುವ ಪ್ರಶಸ್ತಿ ನಮ್ಮ ಜವಾಬ್ದಾರಿ ಹೆಚ್ಚಿಸಿದೆ, ನಾವು ಸಮಾಜಮುಖಿ ಕಾರ್ಯಕ್ರಮ ಮತ್ತಷ್ಟು ಹೆಚ್ಚಿಗೆ ಮಾಡಲು ಈ ಪ್ರಶಸ್ತಿ ಉತ್ಸಹ ನೀಡಿದೆ ಎಂದರು.
ಕಾರ್ಯಕ್ರಮದ ಆಯೋಜಕರಾದ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ನಿರಂತರ ಸಮಾಜಮುಖಿ ನಿಸ್ವಾರ್ಥ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಡಿ ಎಸ್ ಸುಬ್ರಮಣ್ಯ ಅವರನ್ನು ಗುರುತಿಸಿ ಯುನೈಟೆಡ್ ಅಮೆರಿಕನ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಸುಬ್ರಮಣ್ಯಅವರ ಕುಟುಂಬ ಸದಾ ನಿರಾಶ್ರಿತರು, ಕಡುಬಡವರು, ಶಾಲಾ ಮಕ್ಕಳು, ಮಹಿಳೆಯರ ಪರವಾಗಿ ಹಲವು ಕಾರ್ಯಕ್ರಮಗಳು ರೂಪಿಸುತ್ತಾ ಬಂದಿದೆ ಇವರ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಸಮಾಜಕ್ಕೆ ಇವರ ಕೊಡುಗೆ ಮತ್ತಷ್ಟು ದೊರೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸನ್ಮಾನಿತರಿಗೆ ಕನ್ನಡ ಪರ ಹೋರಾಟಗಾರ ಸುರೇಶ ಸಿಂಗಂ, ಪೊಲೀಸ್ ಸಿಬ್ಬಂದಿ ಸಂತೋಷ್, ಯೋಗ ಕೃಷ್ಣಪ್ಪ, ಕವಿತಾ, ಗೌರಿ, ವಾಸುದೇವ್ ಸೇರಿದಂತೆ ಹಲವು ಪ್ರಮುಖರು ಶುಭಕೋರಿದರು.




