
ದೊಡ್ಡಬಳ್ಳಾಪುರ : ಕಳೆದ ಹಲವು ವರ್ಷಗಳ ನಿರಂತರ ಜನಸೇವೆಯನ್ನು ಗುರುತಿಸಿ ಖಾಸಗಿ ವಾಹಿನಿಯೊಂದು ಅನ್ನದಾಸೋಹಿ ಮಲ್ಲೇಶ್ ರವರಿಗೆ ಜೀವಮಾನ ಸಾಧನೆ ನೀಡಿ ಗೌರವಿಸಿದೆ ಈ ಸಂತೋಷದ ಕ್ಷಣಗಳನ್ನು ಸಂಭ್ರಮಿಸುವ ಸಲುವಾಗಿ ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕಿನ ದರ್ಗಾಜೋಗಹಳ್ಳಿ ವ್ಯಾಪ್ತಿಯ ಸಮುದಾಯ ಭವನದಲ್ಲಿ ಸ್ನೇಹಿತರ ಬಳಗದ ವತಿಯಿಂದ ಅನ್ನದಾಸೋಹಿ ಮಲ್ಲೇಶ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಪೊಲೀಸ್ ಇಲಾಖೆ ಸಿಬ್ಬಂದಿ ಸಂತೋಷ್ ಮಾತನಾಡಿ ಕಳೆದ ೭ ವರ್ಷಗಳಿಂದ ಯಾವುದೇ ಪಲಾಪೇಕ್ಷೆ ಇಲ್ಲದೆ ನಿರಂತರ ಅನ್ನದಾಸೋಹ ಮಾಡುತ್ತಾ ವಯೋವೃದ್ಧರಿಗೆ ಹೊದಿಕೆ ಹಾಗೂ ವಸ್ತ್ರ ವಿತರಣೆ ಮತ್ತು ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಿಕಾ ಪರಿಕರಗಳ ವಿತರಣೆ ಮಾಡುತ್ತಾ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದನ್ನು ಗಮನಿಸಿದ “tv 4 ಕನ್ನಡ ವಾಹಿನಿ ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ವಾಹಿನಿಯ ಪ್ರಮುಖರಾದ ಶ್ರೀ ಸಾಯಿ ಸತೀಶ್ ತೋಟಯ್ಯ ರವರಿಗೆ ಈ ಮೂಲಕ ನಾವು ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.

ಪೊಲೀಸ್ ಇಲಾಖೆ ಸಿಬ್ಬಂದಿ ಶ್ರೀನಿವಾಸ್ ಮಾತನಾಡಿ ನಮ್ಮ ಆತ್ಮೀಯ ಗುರುಗಳು ಮಾರ್ಗದರ್ಶಕರಾದ ಮಲ್ಲೇಶ್ ರವರು ಜೀವಮಾನ ಸಾಧನೆ ಪ್ರಶಸ್ತಿ ಪಡೆದಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಸ್ನೇಹಿತರ ಒಟ್ಟುಗೂಡಿ ಇಂದು ಅವರನ್ನು ಮತ್ತು ಅವರ ಕುಟುಂಬದವರನ್ನು ಅಭಿನಂದನೆ ಮಾಡುತ್ತಿರುವುದು ಮತ್ತಷ್ಟು ಸಂತೋಷವನ್ನು ಹೆಚ್ಚಿಸಿದೆ ಅವರ ಸೇವೆ ಹೀಗೆ ಸದಾ ಮುಂದುವರೆಯಲಿ ಸಮಾಜಕ್ಕೆ ಅವರಿಂದ ಮತ್ತಷ್ಟು ಉತ್ತಮ ಸೇವೆ ಲಭಿಸಲಿ ಎಂದರು.

ಕಾರ್ಯಕ್ರಮದಲ್ಲಿ ದರ್ಗಾಜೋಗಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್, ಸಮಾಜ ಸೇವೆಕರಾದ ಲಕ್ಷ್ಮಿ, ಸೆಲ್ವಂ ಕನ್ನಡ ಸಾಹಿತ್ಯ ಪರಿಷತ್ ಸುರೇಶ್ .ಜಿ.ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ , ಮುಖಂಡರಾದ ಡಾ. ಸುಬ್ರಹ್ಮಣ್ಯ , ಜ್ಯೂನಿಯರ್ ರಾಜ್ ಕುಮಾರ್, ಕನ್ನಡ ಪರ ಹೋರಾಟಗಾರ ಸುರೇಶ್ ಸಿಂಗಂ, ಬಿ.ಟಿ.ತಿಮ್ಮಯ್ಯ, ವೆಂಕಟರಾಜು ಗಿರಿಜಾ, ರಘು, ನಾಗರಾಜು,ಜಯಂತ್, ವಾಸುದೇವ್,ದರ್ಶನ್, ಪುಷ್ಪ ಚಂದ್ರಮೋಹನ್,ಸ್ನೇಹ, ರಘು, ಸಾಗರ್ ಸೇರಿದಂತೆ ಹಲವರು ಹಾಜರಿದ್ದರು.




