
ದೊಡ್ಡಬಳ್ಳಾಪುರ : ದಲಿತ ಮುಖಂಡನ ಕಾರಿಗೆ ಡಿಕ್ಕಿ ಹೊಡೆದ ಮತ್ತೊಂದು ಕಾರಿನ ಚಾಲಕ, ಕಾರಿನ ಮೇಲಿನ ಅಂಬೇಡ್ಕರ್ ಸಹಿ ಗುರುತು ನೋಡಿ ಅಸಹನೆಗೊಂಡಿದ್ದಾನೆ, ಇಷ್ಟಕ್ಕೆ ಸುಮ್ಮನಾಗದ ಆತ ಅಂಬೇಡ್ಕರ್ ಕುರಿತು ಏಕವಚನದಲ್ಲಿ ನಿಂದನೆ ಮಾಡಿ, ದಲಿತ ಸಮುದಾಯದವರನ್ನ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ಭೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷರಾದ ವೈಟ್ ಫಿಲ್ಡ್ ಮುರುಗೇಶ್ ಆರೋಪಿಸಿದ್ದಾರೆ.
ಸೆಪ್ಟೆಂಬರ್ 8 ರ ರಾತ್ರಿ 8 ಗಂಟೆ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಗೀತಾಂ ವಿಶ್ವವಿದ್ಯಾಲಯ ಬಳಿಯ ಎಸ್ ಟಿ ಆರ್ ಆರ್ ರಸ್ತೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ ಬೆಂಗಳೂರಿನ ವೈಟ್ ಫಿಲ್ಡ್ ಮೂಲದ ಭೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷರಾದ ವೈಟ್ ಫಿಲ್ಡ್ ಮುರುಗೇಶ್ ರಾಜ್ಯ ಉಪಾಧ್ಯಕ್ಷರಾದ ಅನೇಕಲ್ ಮುನಿರಾಜು ಹೋರಾಟ ಸಂಬಂಧ ದೇವನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದರು, ಇವರ ಪಕ್ಕದಲ್ಲಿಯೇ ಬರುತ್ತಿದ್ದ ಮತ್ತೊಂದು ಕಾರು ಹಂಪ್ಸ್ ಬಳಿ ಮುರುಗೇಶ್ ರವರ ಕಾರಿಗೆ ಡಿಕ್ಕಿ (ಟಚ್) ಮಾಡಿದೆ.
ಕಾರಿಗೆ ಟಚ್ ಮಾಡಿದ ವ್ಯಕ್ತಿಯೇ ಮುರುಗೇಶ್ ವಿರುದ್ಧ ತೆಲುಗು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ, ಕಾರಿನ ಮೇಲಿದ್ದ ಅಂಬಂಡ್ಕರ್ ಸಹಿ ಮತ್ತು ಸಂಘಟನೆಯ ಬೋರ್ಡ್ ನೋಡಿ ಮತ್ತಷ್ಟು ಅಸಹನೆಗೊಂಡ ಆತ, ಯಾವನೋ ಕಿತ್ತೋದ ಮಗ ನಿಮಗೆ ಸಂವಿಧಾನ ಕೊಟ್ಟಿದ್ದಾನೆ, ನೀವು ಅದನ್ನು ಇಟ್ಕೊಂಡು ವ್ಯಾಪಾರ ಮಾಡ್ತೀರಾ, ಕೀಳು ಜಾತಿಯ ಮಕ್ಕಳ ಎಂದು ಬೈದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾಧ್ಯಮದೊಂದಿಗೆ ಮಾತನಾಡಿದ ದೂರುದಾರರಾದ ಮುರುಗೇಶ್, ಅಂಬೇಡ್ಕರ್ ಮತ್ತು ದಲಿತ ಸಮುದಾಯವನ್ನ ನಿಂದನೆ ಮಾಡಿದ ಗೋಕುಲ್ ಕೃಷ್ಣ ಫಾಕ್ಸ್ ಕಾನ್ ಕಂಪನಿಯ ಉದ್ಯೋಗಿ, ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಗೌರವ ನೀಡಿದ್ದಾರೆ, ಅಂತಹ ವ್ಯಕ್ತಿಯನ್ನ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆತನನ್ನು ಫಾಕ್ಸ್ ಕಾನ್ ಕಂಪನಿಯಿಂದ ವಜಾ ಮಾಡಬೇಕು, ಕ್ಷಮಾಪಣೆ ಕೇಳಬೇಕು ಮತ್ತು ಗಡಿಪಾರು ಮಾಡಬೇಕು, ಇಲ್ಲದಿದ್ದಾರೆ ಹೋರಾಟ ಮುಂದುವರೆಸುವುದ್ದಾಗಿ ಹೇಳಿದರು.
ಈ ಸಂದರ್ಭದಲ್ಲಿ ಭೀಮಾ ಸೇನೆಗಳ ಮಹಾ ಒಕ್ಕೂಟದ ಮುಖಂಡರಾದ ಕೆ.ಮರಿಯಪ್ಪ, ಸಮತಾ ಸೈನಿಕಾ ದಳದ ಯುವ ಘಟಕದ ರಾಜ್ಯಾಧ್ಯಕ್ಷರಾದ ಚಳವಳಿ ನಾಗೇಶ್, ಭೀಮ್ ಪ್ರಜಾ ಸಂಘದ ರಾಜ್ಯಾ ಉಪಾಧ್ಯಕ್ಷರಾದ ಮುನಿರಾಜು, ದಲಿತ ಮುಖಂಡರಾದ ಯಲಹಂಕ ಮಂಜು, ಮರುಘನ್, ಚಂದ್ರಶೇಖರ್, ರಾಜು, ಉಮಾ ಇದ್ದರು.




