
ದೊಡ್ಡಬಳ್ಳಾಪುರ : ಸೂಕ್ತ ದಾಖಲೆ ಪರಿಶೀಲನೆ ನಡೆಸದೆ 10.50 ಕೋಟಿ ರೂ.ಸಾಲ ಮಂಜೂರಾತಿ ಮಾಡಿ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಮೋಸ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕುರಿತು ಬ್ಯಾಂಕ್ನ ಆಡಳಿತ ಮಂಡಳಿ ಸದಸ್ಯ ಸತ್ತಪ್ಪ ಹೂಗಾರ್ ನೀಡಿರುವ ದೂರಿನ ಅನ್ವಯ ಬ್ಯಾಂಕ್ನ ಅಧ್ಯಕ್ಷ ಪಿ. ಮಂಜಪ್ಪ,ಖಾಸಗಿ ಡೆವಲಪ್ಮೆಂಟ್ ಕಂಪೆನಿ ವಿರುದ್ಧ ಸರ್ಜಾಪುರ ಠಾಣೆಯಲ್ಲಿಎಫ್ಐಆರ್ ದಾಖಲಾಗಿದೆ.
ಬ್ಯಾಂಕ್ನಲ್ಲಿ2018ರಿಂದ 2025ರ ನಡುವಣ ಅವಧಿಯಲ್ಲಿನಡೆದ 10.50 ಕೋಟಿ ರೂ.ಗಳ ವಂಚನೆ ಆರೋಪವಿದೆ.ಹೀಗಾಗಿ ಅರೋಪಿತರ ವಿರುದ್ಧ ಒಳಸಂಚು,ವಂಚನೆ ಇನ್ನಿತರೆ ಆರೋಪಗಳ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಬ್ಯಾಂಕ್ನಲ್ಲಿಸಹಸ್ರಾರು ಮಂದಿ ಹಣವನ್ನು ಕೋಟ್ಯಾಂತರ ರೂ.ಗಳನ್ನು ಠೇವಣಿ ಇಟ್ಟಿದ್ದಾರೆ.ಈ ಪೈಕಿ ಖಾಸಗಿ ಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ ಕಂಪೆನಿಗೆ 7.50 ಕೋಟಿ ರೂ.ಸಾಲ ಮಂಜೂರು ಮಾಡಲಾಗಿತ್ತು.ಆದರೆ,ಸಾಲ ನೀಡಿಕೆಯಲ್ಲಿ ಯಾವುದೆ ನಿಯಮಗಳನ್ನು ಪಾಲಿಸಿಲ್ಲ.ಜತೆಗೆ, ಕಂಪೆನಿಯು ನೀಡಿದ್ದ ಶ್ಯೂರಿಟಿಗೆ ಪಡೆದಿದ್ದ ಜಮೀನು ದಾಖಲೆಗಳು ಅಧಿಕೃತವಾಲ್ಲದಿದ್ದರೂ ಸಾಲ ಮಂಜೂರು ಮಾಡಿ ಅಧ್ಯಕ್ಷರಾದ ಪಿ.ಮಂಜಪ್ಪ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ಸಾಲದ ಮೊತ್ತ 2025ರ ವೇಳೆ 10.50 ಕೋಟಿ ರೂ.ಗಳಾಗಿದ್ದು ಬ್ಯಾಂಕ್ಗೆ ಆರ್ಥಿಕ ನಷ್ಟ ಉಂಟಾಗಿದೆ. ಈ ನಿಟ್ಟಿನಲ್ಲಿ ಅಕ್ರಮದಲ್ಲಿಶಾಮೀಲಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸದಸ್ಯರು ಆರೋಪಿಸಿದ್ದಾರೆ
ನೆಲಮಂಗಲದಲ್ಲೂ ಕೇಸ್:
ಅಕ್ರಮವಾಗಿ 10.56 ಕೋಟಿ ರೂ. ಸಾಲ ಮಂಜೂರು ಮಾಡಿ ಬ್ಯಾಂಕ್ಗೆ ನಷ್ಟ ಉಂಟು ಮಾಡಲಾಗಿದೆ ಎಂದು ನೆಲಮಂಗಲ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಬ್ಯಾಂಕ್ನ ಮತ್ತೊಬ್ಬ ಸದಸ್ಯ ನಿತಿನ್ ನೀಡಿರುವ ದೂರಿನ ಅನ್ವಯ ಪಿ.ಮಂಜಪ್ಪ ಹಾಗೂ ಮಂಜುನಾಥ್ ವಿರುದ್ಧ ಕೇಸ್ ದಾಖಲಾಗಿದೆ. ಈ ಎರಡೂ ಪ್ರಕರಣಗಳ ತನಿಖೆಗೆ ವಿಶೇಷ ತಂಡ ರಚಿಸುವ ಪ್ರಸ್ತಾವ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.




