
ನವೆಂಬರ್ 9ರಂದು ಉರ್ದು ದಿನದ ಅಂಗವಾಗಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ ಈ ನಿಲುವಿಗೆ ಕನ್ನಡಿಗರ ವಿರೋಧವಿದೆ ಕನ್ನಡ ನಾಡಿನಲ್ಲಿ ಉರ್ದು ಭಾಷೆಗೆ ವಿಶೇಷ ಹಬ್ಬ ಆಚರಣೆ ಸರಿಯಲ್ಲ ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣ ಗೌಡರ ವೇದಿಕೆ )ಒಪ್ಪುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ತಿಳಿಸಿದ್ದಾರೆ
ಉರ್ದು ದಿನಾಚರಣೆ ಪ್ರಯುಕ್ತ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಆಶ್ರಯದಲ್ಲಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲು ಸಿದ್ಧತೆ ನಡೆದಿದೆ ಈ ಕುರಿತು ಮಾತನಾಡಿರುವ ಅವರು ರಾಜ್ಯದ ಏಳೂವರೆ ಕೋಟಿ ಕನ್ನಡಿಗರ ಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜ್ಯ ಸರ್ಕಾರ ಈ ಕುರಿತು ಮೌನ ವಹಿಸುವುದು ತರವಲ್ಲ, ಕನ್ನಡಿಗರ ಧ್ವನಿಯಾಗಿ ಶ್ರಮಿಸಬೇಕಿರುವ ಸಚಿವರು ಕೇವಲ ಒಂದು ಭಾಷೆ ಸೀಮಿತವಾಗಿ ಹಬ್ಬ ಆಚರಣೆ ತೊಡಗುವುದು ಸರಿಯಲ್ಲ, ಉರ್ದು ಆಚರಣೆಗೆ ಮುಂದಾಗಿ ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಬೇಡಿ ಕನ್ನಡ ಜನತೆ ತಮಗೆ ನೀಡಿರುವ ಘನತೆ ಗೌರವವನ್ನು ಉಳಿಸಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉರ್ದು ಹಬ್ಬ ಆಚರಣೆ ಈ ಕೂಡಲೇ ಕೈಬಿಡಬೇಕು ಸಚಿವರು ತಮ್ಮ ಆಸಕ್ತಿಯನ್ನು ಮುಂದಿನ ದಿನಗಳಲ್ಲಿ ಬರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತೋರಲಿ, ಕನ್ನಡಿಗರ ಬೆಂಬಲದಿಂದ ಅಧಿಕಾರ ಹಿಡಿದಿದ್ದಾರೆ ಕನ್ನಡಿಗರ ಪರ, ಕನ್ನಡ ಭಾಷೆಯ ಪರ ಶ್ರಮಿಸಲಿ ಇಲ್ಲವೇ ಮುಂದಿನ ದಿನಗಳಲ್ಲಿ ಕನ್ನಡಪರ ಹೋರಾಟಗಾರರು ಸಚಿವರ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.




