
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ರವರ ಜನ್ಮದಿನಾಚರಣೆ ಕಾರ್ಯಕ್ರಮ.
ಲಾವಣ್ಯ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಬಾರತದ ಎರಡನೇ ಪ್ರದಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜನ್ಮದಿನವನ್ನು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು
ಮುಖ್ಯ ಅತಿಥಿಗಳಾಗಿ ಬಾಗವಹಿಸಿ ಬಿಇಡಿ ಕಾಲೇಜು ಪ್ರಾಂಶುಪಾಲರಾದ ಪ್ರೋ ಜಿ ಕೃಷ್ಣಮೂರ್ತಿ ಮಾತನಾಡಿದರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹನೀಯರು ಬಾಗವಹಿಸಿದ್ದರು ಅವರಲ್ಲಿ ಪ್ರಮುಖ ಪಾತ್ರ ವಹಿಸಿದರು “ಮಹಾತ್ಮ ಗಾಂಧಿಜಿವರು ಅವರು ನಮಗೆ ಅಹಿಂಸಾ ಮಾರ್ಗ ಸತ್ಯವಾದ ಸಂದೇಶ ಸಾರಿದ್ದಾರೆ.ಹಾಗೆಯೇ ಬಾರತದ ಎರಡನೇ ಪ್ರದಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಯವರು “ಜೈ ಜವಾನ್ ಜೈ ಕಿಸಾನ್ ” ಎಂಬ ಘೋಷವಾಕ್ಯವನ್ನು ನಮಗೆ ಸಾರಿದ್ದಾರೆ ಅವರು ದೇಶಕ್ಕೆ ರೖತರು ಎಷ್ಟು ಮುಖ್ಯವೋ ದೇಶಕಾಯಲು ಸೖನಿಕರು ಅಷ್ಟೇ ಮುಖ್ಯ ಎಂದು ಹೇಳಿದ್ದರು ಎಂದರು.
ಲಾವಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಪ್ರಾಂಶುಪಾಲರಾದ ಎಂ ಸಿ ಮಂಜುನಾಥ್ ಮಾತನಾಡಿ ನಾವುಗಳು ನಮ್ಮ ಮುಂದಿನ ಜನಾಂಗಕ್ಕೆ ಮಹಾತ್ಮ ಗಾಂಧೀಜಿವರ ಸತ್ಯ ದರ್ಮ ನಿಷ್ಟೇ ಸಮಯ ಪ್ರಜ್ಞೆ ಅಹಿಂಸಾ ತತ್ವಗಳನ್ನು ಹೇಳಬೇಕಾಗಿದೆ
ಹಾಗೆಯೇ ದೇಶ ಕಂಡ ಅತ್ಯಂತ ಪ್ರಮಾಣಿಕ ಪ್ರದಾನ ಮಂತ್ರಿ ಎಂದರೆ ಲಾಲ್ ಬಹಾದ್ದೂರ್ ಶಾಸ್ತ್ರೀಜಿವರು ಇವರು ರೖಲ್ವೇ ಮಂತ್ರಿಗಳಾಗಿದ್ದಾಗ ರೖಲು ಅಪಘಾತವಾಗಿ ಹಲವಾರು ಜನ ಪ್ರಾಣತೆತ್ತಾಗ ಅದರ ನೖತಿಕ ಹೊಣೆ ಹೊತ್ತು ರಾಜಿನಾಮೆ ನೀಡಿ ಪ್ರಮಾಣಿಕತೆ ಮೆರೆದಿದ್ದರು ಇಂತಹ ಇಬ್ಬರು ಮಹಾನ್ ನಾಯಕರ ಜನ್ಮದಿನಾಚರಣೆ ಆಚರಣೆ ಮಾಡುವುದು ನಮ್ಮ ಸೌಭಾಗ್ಯ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಲಾವಣ್ಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಹಿರಿಯ ಉಪನ್ಯಾಸಕರಾದ ಮಹಾದೇವ್. ಕಾರ್ತಿಕ್, ಎನ್ ರಶ್ಮಿ, ಗಂಗಮೂರ್ತಿ, ರಾಜು ಹಾಗೂ ಬಿಇಡಿ ಪ್ರತಿಕ್ಷಣಾರ್ತಿಗಳು ಪದವಿ ಕಾಲೇಜು ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಭೋದಕೇತರ ಸಿಬ್ಬಂದಿವರ್ಗದವರು ಬಾಗವಹಿಸಿದ್ದರು.




