
ದೇವನಹಳ್ಳಿ : ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ರವರು ಇಂದು ಎಂ ವಿ ಎಂ ಶಾಲೆಯ ಕ್ರೀಡಾಪಟುಗಳನ್ನು ಸನ್ಮಾನಿಸಿದರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆಲೂರು ದುದ್ದನಹಳ್ಳಿಯ ಎಂವಿಎಂ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಹರಿಯಾಣದ ಪಾನಿಪತ್ ನಲ್ಲಿ ನಡೆದ ಅಂತರಾಷ್ಟ್ರೀಯ ಶಾಲಾ ಮಕ್ಕಳ ಕ್ರೀಡಾಕೂಡದಲ್ಲಿ ಭಾಗವಹಿಸಿದ ವರ್ಷನ್,ಶಾನ್ವಿ,ಜಶನ್,ದೀಕ್ಷಾ ಎಂಬ ವಿದ್ಯಾರ್ಥಿಗಳು ಟೇಕ್ವಾಂಡೊ ಎಂಬ ಕ್ರೀಡೆಯಲ್ಲಿ ಸ್ಪರ್ಧೆಮಾಡುವ ಮೂಲಕ ಚಿನ್ನದ ಪದಕ ಗಳಿಸಿದ್ದು ಉಳಿದ ಹೃತಿಕ್, ಮನ್ವಿತ್ ಗೌಡ,ಹರ್ಷಿತ,ತುಷಾರ್ ಸಾಯಿ ಯಾದವ್,ಚಿನ್ಮಯಿ ಇವರು ಟೇಕ್ವಾಂಡೊ ಎಂಬ ಕ್ರೀಡೆಯಲ್ಲಿ ಕಂಚಿನ ಪದಕ ಪಡೆಯುವ ಹಿನ್ನಲೆ ಇಂದು ಸಚಿವರು ಕ್ರೀಡಾಪಟುಗಳನ್ನು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಅವರು ಕರ್ನಾಟಕಕ್ಕೆ ಮೊದಲಿಗೆ ಪದಕ ಗಳಿಸಿರುವ ಎಂ ವಿ ಎಂ ಶಾಲೆ ಮಕ್ಕಳು 90 ವರ್ಷಗಳಲ್ಲಿ ಐತಿಹಾಸಿಕ ಸಾಧನೆ ಮಾಡುವುದರೊಂದಿಗೆ ರಾಜ್ಯಕ್ಕೆ ಮೊದಲಿಗೆ ಪದಕ ಪಡೆಯುವಲ್ಲಿ ನಮ್ಮ ಕರ್ನಾಟಕದ ಪ್ರತಿಭೆಗಳು ಯಶಸ್ವಿಯಾಗಿದ್ದಾರೆ. ಚಿನ್ನದ ಪದಕ ಪಡೆದಿರುವ ಮಕ್ಕಳು ಮುಂದೆ ನಡೆಯುವ ಖೇಲೋ ಇಂಡಿಯ ಯುವ ಕ್ರೀಡಾ ಕೂಟ ಹಾಗೂ 70 ನೇ ರಾಷ್ಟ್ರೀಯ ಕ್ರೀಡಾಕೂಟ 2026 ರಲ್ಲಿ ಭಾಗವಹಿಸಲಿದ್ದಾರೆ (SGFI) ಎಂದರು.
ಶಾಲೆಯ ಮುಖ್ಯಸ್ಥ ಗೌರವ್ ಮಾತನಾಡಿ ದೊಡ್ಡಬಳ್ಳಾಪುರದ ಎಂ.ವಿ.ಎಂ. (MVM) ಶಾಲೆ ವಿದ್ಯಾರ್ಥಿಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ ರಾಷ್ಟ್ರಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ 4 ಚಿನ್ನ, 5 ಕಂಚಿನ ಪದಕಗಳೊಂದಿಗೆ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ ನಮ್ಮ ಎಂ.ವಿ.ಎಂ. (MVM) ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸುವ ಮೂಲಕ ಕರ್ನಾಟಕ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಅಷ್ಟೇ ಅಲ್ಲದೆ, ರಾಷ್ಟ್ರಮಟ್ಟದಲ್ಲಿ ತೃತೀಯ (3ನೇ) ಸ್ಥಾನವನ್ನು ಅಲಂಕರಿಸುವ ಮೂಲಕ ದೊಡ್ಡಬಳ್ಳಾಪುರ ಭಾಗದ ಶಿಕ್ಷಣ ಮತ್ತು ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ ಎಂದರು.
ಈ ಸಂದರ್ಭದಲ್ಲಿ ಟೇಕ್ವಾಂಡೋ ತರಬೇತುದಾರರಾದ ಶಂಕರ್ ಹಾಗೂ ಎಂವಿಎಂ ಶಾಲೆಯ ಅಧ್ಯಕ್ಷರಾದ ಗೌರವ್ ಸ್ಥಳೀಯ ಮುಖಂಡರು ಪ್ರಮುಖರು ಹಾಜರಿದ್ದರು.




