
ದೊಡ್ಡಬಳ್ಳಾಪುರ : ನಗರಕ್ಕೆ ಅಂಟಿಕೊಂಡಿರುವ ಬಾಷೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ವಜ್ಞ ನಗರದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ಹೊರ ರಾಜ್ಯದ ಕೂಲಿಕಾರ್ಮಿಕರು ಬಯಲು ಮತ್ತು ರಸ್ತೆ, ಕಟ್ಟಡಗಳ ಬದಿಯಲ್ಲಿ ಮಲವಿಸರ್ಜನೆ ಮಾಡುತ್ತಿದ್ದಾರೆ ಇದರಿಂದ ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದ್ದು ಕೂಡಲೇ ಹೊರರಾಜ್ಯದ ಕಾರ್ಮಿಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಎಂದು ಕರುನಾಡು ರಾಷ್ಟ್ರೀಯ ಸೇನೆ ರಾಜ್ಯಾಧ್ಯಕ್ಷ ಬಿ ಶಿವಶಂಕರ್ ತಿಳಿಸಿದರು

ಈ ಕುರಿತು ಮಾತನಾಡಿದ ಅವರು ಸ್ಥಳೀಯವಾಗಿ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ಹೊರರಾಜ್ಯದಿಂದ ಕೆಲ ಮೇಸ್ತ್ರಿಗಳು ಕಾರ್ಮಿಕರನ್ನು ಕರೆತಂದಿದ್ದಾರೆ ಆದರೆ ಅವರನ್ನು ಪ್ರಾಣಿಗಳಂತೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಮನೆಗಳನ್ನು ನೀಡಿದ್ದಾರೆ ಈ ಮನೆಗಳಲ್ಲಿ ವಾಸಿಸುವ ಕಾರ್ಮಿಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸದೆ ಪ್ರತಿನಿತ್ಯ ಕಾರ್ಮಿಕರು ಶೌಚಕ್ಕೆ ಬಯಲು ಅಥವಾ ಇತರೆ ಸ್ಥಳಗಳನ್ನು ಅವಲಂಬಿಸುವಂತಾಗಿದೆ ಇದರಿಂದ ಸ್ಥಳೀಯ ನಿವಾಸಿಗಳಿಗೆ ತುಂಬಾ ತೊಂದರೆ ಉಂಟಾಗಿದ್ದು ಈ ಕುರಿತು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಎಷ್ಟು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಸ್ಥಳೀಯ ನಿವಾಸಿಗಳಾದ ಕೆಂಪರಾಜು ಹಾಗೂ ಪ್ರಕಾಶಾಚಾರ್ ಮಾತನಾಡಿ ಪ್ರತಿನಿತ್ಯ ದುರ್ವಾಸನೆಯ ರಸ್ತೆಯಲ್ಲಿ ಸಂಚರಿಸುವಂತಾಗಿದೆ ಈ ಕುರಿತು ಬಾಷೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ ಆದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಸ್ಥಳೀಯ ಪ್ರತಿನಿಧಿಗಳು ಈ ಕುರಿತು ಗಮನ ಹರಿಸಿಲ್ಲ, ಈ ಸಮಸ್ಯೆ ಬರ ಬರುತ್ತಾ ಹೆಚ್ಚಾಗುತ್ತಿದ್ದು ಕಾರ್ಮಿಕರು ಎಲ್ಲಂದರಲ್ಲಿ ಮೂತ್ರ ವಿಸರ್ಜನೆ ಮಲ ವಿಸರ್ಜನೆ ಮಾಡುವ ಮೂಲಕ ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ಕಾರ್ಮಿಕರಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಿ ನಮ್ಮನ್ನು ಈ ದುರ್ವಾಸನೆಯಿಂದ ಕಾಪಾಡಿ ಎಂದು ಈ ಮೂಲಕ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದರು.
ಈ ವೇಳೆ ಸ್ಥಳೀಯ ಮುಖಂಡರು, ನಿವಾಸಿಗಳು, ಕರುನಾಡ ರಾಷ್ಟ್ರೀಯ ಸೇನೆಯ ಪದಾಧಿಕಾರಿಗಳು ಹಾಜರಿದ್ದರು.




