
ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಕನಸವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿನ ಕ್ರೀಡಾ ಪಟುಗಳು ಭಾಗವಹಿಸಿದ್ದರು.
ಶ್ರೀವಾಣಿ ಕಾಲೇಜಿನ ವಿದ್ಯಾರ್ಥಿನಿ ಹಿತೈಷಿ ಜೆ ನವೀನ್ ಎಲ್ಲಾ ಕ್ರೀಡಾ ಪಟುಗಳಿಗೆ “ಕ್ರೀಡಾ ಪ್ರತಿಜ್ಞಾ ವಿಧಿ ” ಬೋದಿಸಿದರು.
ನಂತರ ಕ್ರೀಡಾ ಕೂಟವನ್ನು ಉದ್ಗಾಟಿಸಿದ ಆರ್ ಎಲ್ ಜೆ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ:ಜಿ.ಮುರಳಿ ಮಾತನಾಡಿದರು ವಿದ್ಯಾರ್ಥಿಗಳು ಪಠ್ಯದ ಜೊತೆ ಜೊತೆಯಲ್ಲಿ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ನಿಮ್ಮ ಮಾನಸಿಕ ಸದೃಢತೆಯ ಜೊತೆಯಲ್ಲಿ ದೖಹಿಕ ಸಭಲತೆಯು ಹೆಚ್ಚಾಗುತ್ತದೆ ಕ್ರೀಡಾ ಪಟುಗಳು ವಿವಿಧ ಕ್ರೀಡೆಗಳಲ್ಲಿ ಬಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರೆ ಮುಂದಿನ ಉನ್ನತ ಶಿಕ್ಷಣದಲ್ಲಿ ನಿಮಗೆ ಶುಲ್ಕ ವಿನಾಯಿತಿ ದೊರೆಯುತ್ತದೆ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾ ಪಟುಗಳಿಗೆ ಹೆಚ್ಚಿನ ಆದ್ಯತೆಯ ಜೊತೆಗೆ ಮೀಸಲಾತಿಯು ಸಹ ದೊರೆಯುತ್ತದೆ ಅದುದರಿಂದ ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆಯಬಹುದು ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ “ಗದಿಗೆಪ್ಪ ಬಿ ಹೊಸಮನಿ ” ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಕ್ರೀಡಾ ಪಟುಗಳು ಇಲ್ಲಿ ಬಾಗವಹಿಸಿದ್ದಿರಿ ಬಹುಮಾನ ಮುಖ್ಯವಲ್ಲ ಬಾಗವಹಿಸುವುದು ಮುಖ್ಯ ಅದುದರಿಂದ ಎಲ್ಲಾ ಕ್ರೀಡಾ ಪಟುಗಳು ಸೊಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಹಾಗೂ ತೀರ್ಪುಗಾರರು ಯಾವುದೇ ಒತ್ತಡಗಳಿಗೆ ಒಳಗಾಗದೆ ತೀರ್ಪುಗಳನ್ನು ಪ್ರಕಟಿಸ ಬೇಕು ಎಂದು ವಿದ್ಯಾರ್ಥಿಗಳಿಗೆ ಮತ್ತು ತೀರ್ಪುಗಾರರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಾಲೇಜು ಪ್ರಾಂಶುಪಾಲರಾದ ಡಿ ಎಸ್ ಸುನೀತಾ ಶ್ರೀ ಕೊಂಗಾಡಿಯಪ್ಪ ಕಾಲೇಜು ಪ್ರಾಂಶುಪಾಲರಾದ ಎನ್ ಶ್ರೀನಿವಾಸ್ ಶ್ರೀವಾಣಿ ಕಾಲೇಜು ಪ್ರಾಂಶುಪಾಲ ಬಿ. ಆರ್. ವೇಣುಗೋಪಾಲ್ ಲಾವಣ್ಯ ಕಾಲೇಜು ಪ್ರಾಂಶುಪಾಲ ಎಂ. ಸಿ. ಮಂಜುನಾಥ್ ಬಾಶೆಟ್ಟಿಹಳ್ಳಿ ಸರ್ಕಾರಿ ಕಾಲೇಜು ಪ್ರಾಂಶುಪಾಲ ಟಿ. ಆರ್. ಶ್ರೀರಾಮೇಗೌಡ ವಿದ್ಯಾನಿಧಿ ಕಾಲೇಜು ಪ್ರಾಂಶುಪಾಲ ಟಿ ಕೆ ಬಾಲಕೃಷ್ಣ ಸೂರ್ಯ ಕಾಲೇಜು ಪ್ರಾಂಶುಪಾಲ ಶಶಾಂಕ್ ಚೆನ್ನವೀರನಹಳ್ಳಿ ಸರ್ಕಾರಿ ಕಾಲೇಜು ಪ್ರಾಂಶುಪಾಲ ಕೇಶವಮೂರ್ತಿ ಜಾಲಿಗೆ ಕಾಲೇಜು ಪ್ರಾಂಶುಪಾಲ ಮುನಿರಾಜು ದೇವರಾಜ್ ಅರಸು ಕಾಲೇಜು ಪ್ರಾಂಶುಪಾಲ ಉಮೇಶ್ ಬಾವಿಕಟ್ಟಿ ಅಮೋಘ ವರ್ಷ ಕಾಲೇಜು ಪ್ರಾಂಶುಪಾಲ ಶ್ರೀದರ್ ಬೆಳವಂಗಲ ಕಾಲೇಜು ಪ್ರಾಂಶುಪಾಲ ರಾಮಯ್ಯ ಕ್ರೀಡಾ ಕೂಟದ ಉಸ್ತುವಾರಿ ಉಪೇಂದ್ರ ರಾವ್ ದೖಹಿಕಶಿಕ್ಷಣ ನಿರ್ದೇಶಕರಾದ ದಾದಾಫೀರ್.ಶ್ರೀಕಾಂತ್, ವಿವಿಧ ತಾಲ್ಲೂಕುಗಳ ಪ್ರಾಂಶುಪಾಲರುಗಳು ಉಪನ್ಯಾಸಕರುಗಳು ಹಾಗೂ ಕ್ರೀಡಾ ಪಟುಗಳು ಬಾಗವಹಿಸಿದ್ದರು.




