
ದೊಡ್ಡಬಳ್ಳಾಪುರ : ತಾಲ್ಲೂಕಿನ ಕೋಳೂರು ಗ್ರಾಮದ ಸರ್ವೆ ನಂ.158 ವಿಸ್ತೀರ್ಣ 4-03 ಗುಂಟೆ ಜಮೀನು ಸರ್ಕಾರಿ ಖರಾಬು ಜಮೀನನ್ನು ಕೆಲ ಪ್ರಭಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವುಗೊಳಿಸಿ ಅಧಿಕಾರಿಗಳು ಅವರ ವಿರುದ್ದ ಕಾನೂನುಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಯ ಸಂಸ್ಥಾಪಕ ಅಧ್ಯಕ್ಷ ಎ.ನಂಜಪ್ಪ ಅಗ್ರಹಿಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ರಾಜ್ಯ ವಿ- ಕರವೇ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು ಕೋಳೂರು ಗ್ರಾಮದ ಸರ್ವೆ ನಂ.158 ವಿಸ್ತೀರ್ಣ ನಾಲ್ಕು ಎಕರೆ ಮೂರು ಗುಂಟೆ (4-03) ಸರ್ಕಾರಿ ಖರಾಬು ಜಾಗಕ್ಕೆ ಕೆಲ ಪ್ರಭಾವಿಗಳು ಅತೀಕ್ರಮ ಪ್ರವೇಶ ಮಾಡಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಖಾಸಗಿ ಕಂಪನಿಯನ್ನು ನಿರ್ಮಿಸಿಕೊಂಡು ಸರ್ಕಾರಕ್ಕೆ ಬಾರಿ ನಷ್ಟವನ್ನು ಉಂಟು ಮಾಡಿರುತ್ತಾರೆ. ಸದರಿ ಜಾಗವನ್ನು ತೆರವುಗೊಳಿಸಿ ಸಕಾರದ ವಶಕ್ಕೆ ಪಡೆದುಕೊಂಡು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕಾನೂನುಕ್ರಮ ಜರುಗಿಸಬೇಕೆಂದು ಈ ಮೂಲಕ ಒತ್ತಾಯಿಸುತೇವೆ ಎಂದರು.

ಯುವ ಘಟಕ ಅಧ್ಯಕ್ಷ ಮಂಜುನಾಥ್ ಮಾತನಾಡಿ ಕಳೆದ ಜೂನ್ ತಿಂಗಳಿನಲ್ಲೇ ನಮ್ಮ ಸಂಘಟನೆ ವತಿಯಿಂದ ಈ ವಿಚಾರವಾಗಿ ನಾವು ತಾಲ್ಲೂಕು ದಂಡಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸಿ ಒತ್ತುವರಿದಾರರಿಗೆ ಅಂತಿಮ ನೋಟಿಸ್ ನೀಡಿದ್ದಾರೆ ಆದರೆ ಅಧಿಕಾರಿಗಳು ಇಲ್ಲಿಯವೆರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಯಾವ ಕಾರಣಕ್ಕೆ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳ ಮೇಲೆ ಯಾರು ಒತ್ತಡ ಹೇರುತ್ತಿದ್ದಾರೆ,ಸಮಸ್ಯೆ ಏನು ಎಂಬುದು ಯಾರು ಹೇಳುತ್ತಿಲ್ಲ ಹಾಗಾಗಿ ನಾವು ಇಂದು ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದೇವೆ ಅಧಿಕಾರಿಗಳು ಒತ್ತುವರಿ ಸ್ಥಳವನ್ನು ತೆರವುಗೊಳಿಸಿ ವಶಕ್ಕೆ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲಿವುದಿಲ್ಲ ಎಂದರು.

ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಲಯನ್ ಎ.ನಂಜಪ್ಪ, ತಾಲೂಕು ಅಧ್ಯಕ್ಷ ಶಿವಕುಮಾರ್ (ವೈರ್), ತಾಲೂಕು ಉಪಾಧ್ಯಕ್ಷ ಜೆ.ಶಿವಕುಮಾರ್, ಪದಾಧಿಕಾರಿಗಳಾದ ಪ್ರಮೋದ್, ಮಂಜುನಾಥ್ , ಗೋಪಿ, ಅನಿಲ್, ನಗರಾಧ್ಯಕ್ಷ ಚಂದ್ರು, ನಗರ ಪ್ರಧಾನ ಕಾರ್ಯದರ್ಶಿ ವೆಂಕೋಬ ವೇಣು, ರಾಜು, ಮಹಿಳಾ ಜಿಲ್ಲಾ ಮುಖಂಡರಾದ ಕಂದಮಣಿ, ತಾಲೂಕು ಮುಖಂಡರಾದ ಪದ್ಮಾ,ನಾಗಮಣಿ,ಶಶಿಕಲಾ ಸೇರಿದಂತೆ ಹಲವರು ಹಾಜರಿದ್ದರು.




