
ದೊಡ್ಡಬಳ್ಳಾಪುರ : ಬಿಡಿಕೆರೆ ಗ್ರಾಮದ ಸರ್ಕಾರಿ ಗೋಮಾಳ / ಫಾರೆಸ್ಟ್ ನಲ್ಲಿರುವ ನೂರಾರು ನೀಲಗಿರಿ ಮತ್ತು ಸೆಟಲ್ ದೊರ ಮರಗಳನ್ನು ಅಕ್ರಮವಾಗಿ ಹರಾಜು ಮಾಡಿ ಕಡಿದು, ಸೋಪು ಮತ್ತು ಬೀಜಗಳನ್ನ ಮಾರಾಟ ಮಾಡಲಾಗುತ್ತಿದೆ ಮೆಳೇಕೋಟೆ ಗ್ರಾಮ ಪಂಚಾಯತಿ ಮತ್ತು ಗುತ್ತಿದಾರರ ವಿರುದ್ಧ ಕೂಡಲೇ ಎಫ್ ಐ ಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಬುದ್ಧ ಕರ್ನಾಟಕ ಭೀಮ ಸೇನೆ ( PRABHUDHA KARNATAKA BHEEMA SENE )ಸಂಸ್ಥಾಪಕ ರಾಜ್ಯಾಧ್ಯಕ್ಷ ಯು. ಮುನಿರಾಜು ಅಗ್ರಹಿಸಿದರು

ತಾಲ್ಲೂಕಿನ ಮೇಳೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಡಿಕೆರೆ ಗ್ರಾಮದ ಸರ್ಕಾರಿ ಗೋಮಾಳ / ಕಟ್ಟೆ / ಕರಾಬು / ಫಾರೆಸ್ಟ್ ನಲ್ಲಿ ನೂರಾರು ನೀಲಗಿರಿ/ಸೆಟಲ್ ದೊರ ಮರಗಳು ಮತ್ತು ಹುಣಸೆ ಮರಗಳಿದ್ದು . ಈ ಮರಗಳನ್ನು ಮೇಳೆಕೋಟೆ ಗ್ರಾಮ ಪಂಚಾಯಿತಿಯವರು ಅಕ್ರಮವಾಗಿ ಹರಾಜು ಮಾಡಿ, ಖಾಸಗಿ ವ್ಯಕ್ತಿಗೆ ಕಡಿಯಲು ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದರಿಂದ ನಾನು ಸ್ಥಳಕ್ಕೆ ಭೇಟಿ ನೀಡಿದ ಸಮಯ ಸ್ಥಳದಲ್ಲಿ ಸುಮಾರು 15 ಜನ ಕಾರ್ಮಿಕರು ನೀಲಗಿರಿ ಮರಗಳ ರೆಂಬೆ, ಕೊಂಬೆ ಮತ್ತು ಸೊಪ್ಪುಗಳನ್ನು ಕಡಿಯುತ್ತಿದ್ದರು. ಎಲ್ಲಾ ಮರಗಳನ್ನು ಬರೀ ಕಾಂಡ ಮಾತ್ರ ಉಳಿಯುವಂತೆ ಕಡಿದು ಹಾಳು ಮಾಡಲಾಗಿದೆ.
ಕಡಿದ ಸೊಪ್ಪನ್ನು ನೆಲದ ಮೇಲೆ ರಾಶಿ ಹಾಕಲಾಗಿತ್ತು ಮತ್ತು ನೀಲಗಿರಿ ಮರಗಳ ಬೀಜ /ಗುಂಡುಗಳನ್ನು ಬಿಳಿ ಚೀಲಗಳಲ್ಲಿ ತುಂಬಿ ಸಂಗ್ರಹಿಸಲಾಗಿತ್ತು. ಇದು ಸ್ವಚ್ಛತೆ ಕೆಲಸವಲ್ಲ, ಬೀಜ ಮತ್ತು ಸೊಪ್ಪಿನಿಂದ ಎಣ್ಣೆ ತೆಗೆದು ಮಾರಾಟ ಮಾಡುವ ವಾಣಿಜ್ಯ ಉದ್ದೇಶದ ಕೆಲಸ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.ಸ್ಥಳದಲ್ಲಿ ಕಡಿದ ಸೊಪ್ಪು ತುಂಬಲು ಕೆಂಪು ಟ್ರ್ಯಾಕ್ಟರ್ ಜೊತೆ ನೀಲಿ ಟ್ರಾಲಿ ಸಿದ್ಧವಾಗಿ ನಿಂತಿದ್ದು ಎತ್ತರದ ಮರಗಳ ರೆಂಬೆ ಕಡಿಯಲು 2 ಕ್ರೇನ್ ಗಳು ಸ್ಥಳದಲ್ಲಿ ಇದ್ದವು ಎಂದು ತಿಳಿಸಿದರು.

ಮೇಳೆಕೋಟೆ ಗ್ರಾಮ ಪಂಚಾಯಿತಿಯವರು ದಿನಾಂಕ 02-11-2026 ರಂದು “ಬಹಿರಂಗ ಹರಾಜು ಪ್ರಕಟಣೆ” ಹೊರಡಿಸಿ, ಬಿಡಿಕೆರೆ ಫಾರೆಸ್ಟ್ ನಲ್ಲಿರುವ ಸೆಟಲ್ ದೊರ ಸೊಪ್ಪು ಮತ್ತು ಹುಣಸೆ ಹಣ್ಣನ್ನು ಹರಾಜು ಮಾಡುವುದಾಗಿ ಪ್ರಕಟಿಸಿದ್ದಾರೆ. ಹರಾಜು ದಿನಾಂಕ 11-11-2026 ಬುಧವಾರ ಬೆಳಿಗ್ಗೆ 11 ಗಂಟೆಗೆ ಎಂದು ನಿಗದಿ ಮಾಡಿದ್ದರು ಎಂದು ತಿಳಿದುಬಂದಿದೆ ಈ ಹರಾಜಿನಲ್ಲಿ ಕೆಂಪಣ್ಣ ಎಂಬುವವರಿಂದ ಬಿಡಿಕೆರೆ ಗ್ರಾಮದ ಸೆಟಲ್ ದೊರ ಸೊಪ್ಪಿನ ಹರಾಜು ಶುಲ್ಕವಾಗಿ ರೂ. 30,000 ನಗದು ಪಡೆದು, ಮೇಳೆಕೋಟೆ ಗ್ರಾಮ ಪಂಚಾಯಿತಿಯವರು ರಸೀದಿ ಸಂಖ್ಯೆ 01266/ನೀಡಿದ್ದಾರೆ ಇದೆಲ್ಲವೂ ಕಾನೂನು ಬಾಹಿರ ಚಟುವಟಿಕೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದ್ದು ಅಧಿಕಾರಿಗಳು ಸೂಕ್ತ ತನಿಖೆ ನೆಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರಕಾರಿ ಗೋಮಾಳ / ಕರಾಬು / ಫಾರೆಸ್ಟ್ ಸರ್ಕಾರಿ ಜಮೀನು. ಅದರ ಮರಗಳನ್ನು ಕಡಿಯಲು ಅಥವಾ ಹರಾಜು ಮಾಡಲು ಗ್ರಾಮ ಪಂಚಾಯಿತಿಗೆ ಯಾವುದೇ ಅಧಿಕಾರ ಇಲ್ಲ.ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976 ರ ಪ್ರಕಾರ ಮರ ಕಡಿಯಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಈ ಹರಾಜು ಪ್ರಕಟಣೆಯಲ್ಲಿ ಅರಣ್ಯ ಇಲಾಖೆಯ ಅನುಮತಿ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ.ಸರ್ಕಾರಿ ಮರಗಳ ಸೊಪ್ಪು, ಬೀಜ ಮತ್ತು ಹುಣಸೆ ಹಣ್ಣನ್ನು ಖಾಸಗಿ ವ್ಯಕ್ತಿಗೆ ಹರಾಜು ಮಾಡಿ ರೂ. 30,000 ವಸೂಲಿ ಮಾಡಿರುವುದು ಸರ್ಕಾರಿ ಸ್ವತ್ತಿನ ದುರುಪಯೋಗ ಮತ್ತು ಕಳ್ಳತನವಾಗಿದೆ. ಈ ಹಣ ಸರ್ಕಾರದ ಖಜಾನೆಗೆ ಹೋಗಬೇಕೋ, ಪಂಚಾಯಿತಿ ಖಾತೆಗೆ ಹೋಗಿದೆಯೇ ಎಂಬುದರ ವಿಚಾರಣೆಯಾಗಬೇಕು ಎಂದು ಅಗ್ರಹಿಸಿದರು.
ಮೆಳೇಕೋಟೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾತನಾಡಿ ಸುಮಾರು 20 ವರ್ಷಗಳಿಂದ ಈ ರೀತಿ ನೀಲಗಿರಿ ಮರಗಳ ಸೊಪ್ಪು ಮತ್ತು ಹುಣಸೆ ಮರದ ಫಲವನ್ನು ಹರಾಜು ಹಾಕುವ ಪ್ರಕ್ರಿಯೆ ನಡೆದುಕೊಂಡು ಬರುತ್ತಿದೆ ಅಂತೆಯೇ ಈ ಬಾರಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಈ ವೇಳೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಯ ಮುಖಂಡರಾದ ಮೋಹನ್, ರವಿ, ಮಂಜುನಾಥ್, ನರಸಿಂಹ ಮೂರ್ತಿ, ಬಿಡಿಗೆರೆ ಗ್ರಾಮದ ಮಹಿಳಾ ಪ್ರಮುಖರು ಗ್ರಾಮಸ್ಥರು ಉಪಸ್ಥಿತರಿದ್ದರು.




