
ದೇವನಹಳ್ಳಿ : ತಾಲ್ಲೂಕಿನ ಅರದೇಶನಹಳ್ಳಿ ಗ್ರಾಮದ ಶ್ರೀ ಬಗಳಮುಖಿ ದೇವಾಲಯದಲ್ಲಿ ನವರಾತ್ರಿಯ ವಿಶೇಷ ಆಚರಣೆ ಮಾಡಲಾಗುತ್ತದೆ ಈ ವೇಳೆ ವಿಜಯದಶಮಿಯಂದು 48 ಮುತೈದೆಯರಿಗೆ ಬಾಗಿನ ನೀಡುವ ಮೂಲಕ ದೇವಿಯನ್ನು ಆರಾಧನೆ ಮಾಡಲಾಗುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣಿ ತಿಳಿಸಿದರು.

ವಿಜಯ ದಶಮಿ ಪ್ರಯುಕ್ತ ಚಾಮುಂಡೇಶ್ವರಿ, ಬಗಳಮುಖಿ ಹಾಗೂ ಯಲ್ಲಮ್ಮ ದೇವಿಯರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಸಲ್ಲಿಸಿ ಬೆಳಗಿನಿಂದಲ್ಲೇ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ಮೆರವಣಿಗೆ ಮಾಡುವ ಮೂಲಕ ತೆರಳಿ ಬನ್ನಿ ಕಡಿಯುವ ಮೂಲಕ ಇಂದಿನ ದಿನವನ್ನು ಭಕ್ತಿಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದು ತಿಳಿಸಿದರು.

ನಿರಂತರ 13 ವರ್ಷಗಳಿಂದ ಈ ಆಚರಣೆ ನಿರಂತರವಾಗಿ ನೆಡೆಯುತ್ತಿದ್ದು, ದೇವಿಯ ಸ್ವರೂಪರಾದ ಮಹಿಳೆಯರಿಗೆ ಅರಿಶಿನ ಕುಂಕುಮ ಸೀರೆ, ಕುಪ್ಪಸ, ಬಳೆ, ಹಣ್ಣು, ಎಲೆ ಅಡಿಕೆ ಉಡುಗೊರೆ ಸೇರಿದಂತೆ ಹಲವು ಪದಾರ್ಥಗಳನ್ನೊಳಗೊಂಡ ಬಾಗಿನವನ್ನು ಅರ್ಪಿಸಿ ದೇವಿ ಆರಾಧನೆ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ದೇವಾಲಯಕ್ಕೆ ಆಗಮಿಸಿದ ಭಕ್ತದಿಗಳಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.





