
ದೊಡ್ಡಬಳ್ಳಾಪುರ : ತಾಲ್ಲೂಕಿನ ವಿವಿಧ ಶಾಲೆಗಳ ಭೇಟಿ ಮತ್ತು ಶಿಕ್ಷಕರೊಂದಿಗೆ ಮುಕ್ತ ಚರ್ಚೆನಡೆಸುವ ಸಲುವಾಗಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ನವರು ಆಗಮಿಸುತ್ತಿದ್ದು ನಗರದ ಬಸವ ಭವನ ಕಲ್ಯಾಣ ಮಂಟಪದಲ್ಲಿ (ಆ. 29)ನಾಳೆ ಮಧ್ಯಾಹ್ನ 1.00 ಗಂಟೆಗೆ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಲೂಕಿನ ಶಿಕ್ಷಕರೊಂದಿಗೆ ಮುಖ್ಯ ಅತಿಥಿಗಳು ಮುಕ್ತ ಚರ್ಚೆ ಮಾಡುವ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಕುರಿತು ಮಾಹಿತಿ ಪಡೆಯಲಿದ್ದಾರೆ. ಕಾರ್ಯಕ್ರಮದ ಜೊತೆಗೆ ಶನಿವಾರದಂದು ತಾಲೂಕಿನ ಶ್ರೀ ವಾಣಿ ಪಿಯು ಕಾಲೇಜು, ಲಾವಣ್ಯ ವಿದ್ಯಾಸಂಸ್ಥೆ, ಕಾಮೇಲ್ ಜ್ಯೋತಿ, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ ), ಎಂ.ಎಸ್.ವಿ. ಪಬ್ಲಿಕ್ ಶಾಲೆ,ಜಾಲಪ್ಟ ವಿದ್ಯಾಸಂಸ್ಥೆ,ಶ್ರೀ ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಲೂಕಿನ ಎಲ್ಲಾ ಶಿಕ್ಷಕ ವರ್ಗದವರು ನಗರದ ಬಸವ ಭವನದಲ್ಲಿ ನಡೆಯುವ “ಶಿಕ್ಷಕರೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.




