
ದೊಡ್ಡಬಳ್ಳಾಪುರ : ಇಂದು ತಾಲ್ಲೂಕಿನ 76 ದೇವಸ್ಥಾನಗಳಲ್ಲಿ ಬೆಳಿಗ್ಗೆ ಅಭಿಷೇಕ ನಡೆಯಲಿದ್ದು, ಘಾಟಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷವಾಗಿ 76 ಲೀಟರ್ ಹಾಲಿನಲ್ಲಿ ಬೆಳಿಗ್ಗೆ 8.30 ರಿಂದ ಅಭಿಷೇಕ ನಡೆಯಲಿದೆ. ಸಂಜೆ 7.30 ಕ್ಕೆ ನಗರದ ಶ್ರೀ ನೆಲದ ಆಂಜನೇಯ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ಈ ಕುರಿತು ಮಾತನಾಡಿದ ಅವರು ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಜೀ ಅವರ 25 ವರ್ಷಗಳ ಸಾರ್ವಜನಿಕ ಸೇವೆಯ ಗೌರವಾರ್ಥ ಬಿಜೆಪಿ ವತಿಯಿಂದ ಸೇವಾ ಸಂಕಲ್ಪ ಅಭಿಯಾನವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರ ವರೆಗೆ ಹಮ್ಮಿಕೊಳ್ಳಲಾಗಿದೆ, ಈ ಅಭಿಯಾನದ ಮೊದಲ ಭಾಗವಾಗಿ ಸೆಪ್ಟೆಂಬರ್ 17 ರಂದು ಆಶೀರ್ವಾದದ ದೀಪ ಬೆಳಗುವ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಪ್ರತಿಯೊಬ್ಬರೂ ನಮ್ಮ ದೇವರ ಮನೆಗಳಲ್ಲಿ ಒಂದು ದೀಪವನ್ನು ಹಚ್ಚಿ, ಮೋದಿ ಜೀ ಅವರಿಗೆ ಆಯುರಾರೋಗ್ಯ ಕರುಣಿಸಿ, ಈ ದೇಶವನ್ನು ವಿಶ್ವ ಗುರು ಮಾಡುವಂತಹ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸೋಣ ಎಂದರು.
ಸೆಪ್ಟೆಂಬರ್ 17 ರಂದು ದೊಡ್ಡಬಳ್ಳಾಪುರದ 76 ದೇವಸ್ಥಾನಗಳಲ್ಲಿ ಬೆಳಿಗ್ಗೆ ಅಭಿಷೇಕ ನಡೆಯಲಿದ್ದು, ಘಾಟಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷವಾಗಿ 76 ಲೀಟರ್ ಹಾಲಿನಲ್ಲಿ ಬೆಳಿಗ್ಗೆ 8.30 ರಿಂದ ಅಭಿಷೇಕ ನಡೆಯಲಿದೆ. ಸಂಜೆ 7.30 ಕ್ಕೆ ನಗರದ ಶ್ರೀ ನೆಲದ ಆಂಜನೇಯ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ. ಕ್ಷೇತ್ರದ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇನೆ.




