
ದೊಡ್ಡಬಳ್ಳಾಪುರ : ಕನ್ನಡ ನಾಡು ಜಲ ನುಡಿ ವಿಚಾರವಾಗಿ ನಿರಂತರ ಕನ್ನಡಿಗರ ಧ್ವನಿಯಾಗಿ ಹಲವಾರು ಹೋರಾಟಗಳ ಮೂಲಕ ಪ್ರಸಿದ್ಧಿ ಪಡೆದಿರುವ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ನೂತನ ಉಪಾಧ್ಯಕ್ಷರನ್ನಾಗಿ ಜೆ. ಶಿವಕುಮಾರ್ ಅವರನ್ನು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಎ ನಂಜಪ್ಪ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಟೀ ಕುರಿತು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎ. ನಂಜಪ್ಪ ಮಾತನಾಡಿ ಸಂಘಟನೆಯಲ್ಲಿ ಯುವಕರಿಗೆ ಅವಕಾಶ ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶ, ಕನ್ನಡ ಭಾಷಾಭಿಮಾನ ನಾಡಿನ ಬಗ್ಗೆ ಗೌರವ ಹೋರಾಟ ಮೋನೋಭಾವ ಹೊಂದಿರುವ ಹೊಸಬರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನೂತನ ಸದಸ್ಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಸದಸ್ಯರ ಸರ್ವಾನುಮತದೊಂದಿಗೆ ತಾಲೂಕಿನ ಉಪಾಧ್ಯಕ್ಷರನ್ನಾಗಿ ಜೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಮುಂದೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ನಾಡು ಹಾಗೂ ಸಂಘಟನೆಗೆ ಗೌರವ ಕೀರ್ತಿ ಹೆಚ್ಚಿಸಲಿ ಶುಭ ಹಾರೈಸುತ್ತೇನೆ ಎಂದರು.

ನೂತನ ಉಪಾಧ್ಯಕ್ಷ ಜೆ ಶಿವಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಂಘಟನೆ ಎಂದರೆ ಕೇವಲ ಹೋರಾಟ ಮಾಡುವುದು ಎಂದು ಬಿಂಬಿಸಲಾಗಿದೆ ಈ ದೃಷ್ಟಿಕೋನವನ್ನು ಬದಲಾಯಿಸುವ ಅವಶ್ಯಕತೆ ಇದೆ ಕನ್ನಡಿಗರ ಹಿತ ಕಾಪಾಡುವುದೇ ಕನ್ನಡ ಪರ ಸಂಘಟನೆಗಳ ಮುಖ್ಯ ಉದ್ದೇಶವಾಗಿರಬೇಕು ಕನ್ನಡ ಭಾಷೆ ನೆಲ ಜಲ ವಿಚಾರವಾಗಿ ಸಮಸ್ಯೆ ಉಂಟಾದಲ್ಲಿ ಕನ್ನಡಿಗರ ಧ್ವನಿಯಾಗಿ ನಾವು ಹೋರಾಟ ಮಾಡುತ್ತೇವೆ ಅಂತೆಯೇ ಸಾರ್ವಜನಿಕರಿಗೆ ಆರೋಗ್ಯ ಅರಿವು ಸೇರಿದಂತೆ ಹಲವು ಕಾರ್ಯಗಳನ್ನು ರೂಪಿಸುವ ಮೂಲಕ ಸಂಘಟನೆಯನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಮಾಡುವ ಹಂಬಲವಿದೆ ರಾಜ್ಯಾಧ್ಯಕ್ಷರಾದ ಎ ನಂಜಪ್ಪ ಹಾಗೂ ಸಂಘಟನೆಯ ರಾಜ್ಯ ಪ್ರಮುಖರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಮುಂದೆ ಉತ್ತಮ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಈ ವೇಳೆ ರಾಜ್ಯ ವಿ – ಕರವೇ ರಾಜ್ಯ ಪ್ರಮುಖರು ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.




