
ದೊಡ್ಡಬಳ್ಳಾಪುರ : ತಾಲೂಕಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಕುರಿತು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್ ಎಂ ಹರೀಶ್ ಗೌಡ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಕುರಿತು ಮಾತನಾಡಿದ ಅವರು ತಾಲೂಕಿನ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಈ ಕಿತ್ತಾಟ ಕಳೆದ ಎರಡು ವೇದಿಕೆಗಳಿಂದ ಉಂಟಾಗುತ್ತಿದೆ ಇದನ್ನು ಕಂಡರೆ ಏನೋ ಅನುಮಾನ ಮೂಡುತ್ತಿದೆ. ತಾಲೂಕಿನ ಜನತೆ ಶಾಸಕ ಧೀರಜ್ ಮುನಿರಾಜು ಅವರಿಗೆ ಐದು ವರ್ಷಗಳ ಸಂಪೂರ್ಣ ಅಧಿಕಾರ ನೀಡಿದ್ದಾರೆ ಅವರು ಅವರ ಕಾರ್ಯವನ್ನು ಮಾಡಲಿ ಬಿಡಿ, ನೀವು 10 ವರ್ಷಗಳ ಅಧಿಕಾರ ಅನುಭವಿಸಿದ್ದೀರಿ ಸರ್ಕಾರಿ ರೀತಿ ನಿಯಮಗಳ ಬಗ್ಗೆ ನಿಮಗೂ ಮಾಹಿತಿ ಇದೆ ಅಲ್ಲವೇ ಅದನ್ನು ಅರಿತು ಮುಂದೆ ಸಾಗುವುದು ಉತ್ತಮ ಎಂದರು..
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕಳೆದ 3 ವರ್ಷಗಳಲ್ಲಿ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಮಾಜಿ ಶಾಸಕರು ಮುಂದಾಗಿಲ್ಲ ಆದರೆ ಈಗ ವೇದಿಕೆಯಲ್ಲಿ ಸ್ಥಾನಕ್ಕಾಗಿ ಗಲಾಟೆ ಮಾಡುತ್ತಿದ್ದಾರೆ ಇದು ಸರಿಯಲ್ಲ, ಇನ್ನಾದರೂ ಮಾಜಿ ಶಾಸಕರು ತಾಲೂಕಿನ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದರು.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಿಮ್ಮ ಶಕ್ತಿ ತೋರಿಸಿ -ಎಸ್ ಎಂ ಹರೀಶ್ ಗೌಡ
ವೇದಿಕೆಗಳಲ್ಲಿ ಸ್ಥಾನಕ್ಕಾಗಿ ಕಿತ್ತಾಡುವ ಮಾಜಿ ಶಾಸಕರು ಇನ್ನೇನು ಗ್ರಾಮ ಪಂಚಾಯತಿ ಚುನಾವಣೆಗಳು ಪ್ರಾರಂಭವಾಗಲಿವೆ. ತಮ್ಮ ಶಕ್ತಿ ಸಾಮರ್ಥ್ಯ ಪ್ರಭಾವವನ್ನು ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ತೋರಿಸಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸಲಿ ಎಂದರು.
ತಾಲ್ಲೂಕಿನ ಹೆಸರು ಬರಪೀಡಿತ ಪಟ್ಟಿಯಲ್ಲಿಲ್ಲ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಮಾಜಿ ಶಾಸಕರೇ….????
ರಾಜ್ಯ ಸರ್ಕಾರ ಹೊರಡಿಸಿರುವ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ನಮ್ಮ ತಾಲೂಕು ದೊಡ್ಡಬಳ್ಳಾಪುರ ಕಾಣೆಯಾಗಿದೆ ವೇದಿಕೆಯಲ್ಲಿ ಭಾಷಣ ಮಾಡಲು ಮೈಕ್ ಕೊಡಲಿಲ್ಲ ಎಂದು ಕಿತ್ತಾಡುವ ಮಾಜಿ ಶಾಸಕರು ಬರಪಿಡಿತ ಪಟ್ಟಿಯಲ್ಲಿ ತಾಲೂಕಿನ ಹೆಸರು ಇಲ್ಲ ಎಂಬುದರ ಬಗ್ಗೆ ಪ್ರತಿಭಟನೆ ಯಾಕೆ ಮಾಡಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲವೇ ತಾಲೂಕಿನ ಬಗ್ಗೆ ತಮಗಿರುವ ಪ್ರೀತಿ ಎಲ್ಲಿ ಹೋಯಿತು ಎಂದು ಪ್ರಶ್ನೆಸಿದ್ದಾರೆ. ತಾಲೂಕಿನ ಜನತೆ ಬಿಜೆಪಿಗೆ ನೀಡಿರುವ ಅವಕಾಶವನ್ನು ಸಂಪೂರ್ಣವಾಗಿ ಅನುಭವಿಸಲು ಬಿಡಿ ಮುಂದೆ ಚುನಾವಣೆ ಬರುತ್ತದೆ ಆಗ ತಮ್ಮ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಜನಗಳ ಮುಂಡಿದಿ. ಆಗ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಶಕ್ತಿ ತಿಳಿಯುತ್ತದೆ ಎಂದು ಹರೀಶ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




