
ದೊಡ್ಡಬಳ್ಳಾಪುರ : ಯಾವುದೇ ಅನುಮತಿ ಪಡೆಯದೆ ಗಣೇಶ ಕೂರಿಸಿ ಡಿಜೆ(ಡಿಸ್ಕ್ ಜಾಕಿ)ಯನ್ನು ಬಳಸಿ ಜೋರಾಗಿ ಶಬ್ದ ಮಾಡಿಕೊಂಡು ಗಣೇಶ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮ ಮಾಡುತ್ತಿದ್ದ ವಾಹನವನ್ನು ಗ್ರಾಮಾಂತರ ಪೊಲೀಸ್ ವಶಕ್ಕೆ ಪಡೆದಿದೆ.
ಸೆಪ್ಟೆಂಬರ್ 17ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಭೂಮೇನಹಳ್ಳಿ ಗ್ರಾಮದ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಗಣೇಶ ಕೂರಿಸಿ ವಾಹನದಲ್ಲಿ ಡಿಜೆ(ಡಿಸ್ಕ್ ಜಾಕಿ)ಯನ್ನು ಹಾಕಿಕೊಂಡು ಜೋರಾಗಿ ಶಬ್ದ ಮಾಡಿಕೊಂಡು ಗಣೇಶ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮ ಮಾಡುತ್ತಿದ್ದ ವಾಹನವನ್ನು ಗ್ರಾಮಾಂತರ ಪೊಲೀಸ್ ವಶಕ್ಕೆ ಪಡೆದಿದೆ. ಜಿಲ್ಲಾಧಿಕಾರಿಯವರ ಆದೇಶವನ್ನು ತಿಳಿಸಿ ಡಿಜೆ(ಡಿಸ್ಕ್ ಜಾಕಿ)ಬಳಸದಂತೆ ನೋಟಿಸ್ ಜಾರಿ ಮಾಡಿ ಮುನ್ನೆಚ್ಚರಿಕೆಯನ್ನು ನೀಡಿದ್ದರೂ ಸಹಾ ಭೂಮೇನಹಳ್ಳಿಯ ಆಯೋಜಕರು ಡಿಜೆ ಬಳಕೆ ಮಾಡಿ ನಿಯಮ ಉಲ್ಲಂಘನೆ ಮಾಡಿರುವ ಅಡಿಯಲ್ಲಿ ಹಲವರ ಮೇಲೆ ಎಫ್ ಐ ಆರ್ ದಾಖಲಾಗಿದೆ
ಜಿಲ್ಲಾಧಿಕಾರಿಗಳು ಬೆಂಗಳೂರು ಗ್ರಾಮಾತರ ಜಿಲ್ಲೆಯಾದ್ಯಂತ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮದಿಂದ ಹೊರಡಿಸಿದ್ದ ಆದೇಶ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.




