
ದೊಡ್ಡಬಳ್ಳಾಪುರ : ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಸರ್ಕಾರ ಮಧ್ಯೆ ಪ್ರವೇಶಿಸಿ ಸೀರೆ ಉತ್ಪಾದನ ವೆಚ್ಚಕ್ಕೆ ಅನುಗುಣವಾಗಿ ಸೀರೆ ಬೆಲೆ ಹೆಚ್ಚಿಸಬೇಕೆಂದು ನೇಕಾರ ಹೋರಾಟ ಸಮಿತಿ ಮುಖಂಡ ಹೇಮಂತ್ ರಾಜು ಅಗ್ರಹಿಸಿದರು.

ನೇಕಾರ ಹೋರಾಟ ಸಮಿತಿ (ತಾಲ್ಲೂಕು ಘಟಕದ) ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ಸೀರೆಗೆ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಏರಿಕೆ ವಿರುದ್ಧ ಮತ್ತು ಸೀರೆ ಉತ್ಪಾದನ ವೆಚ್ಚಕ್ಕೆ ಅನುಗುಣವಾಗಿ ಸೀರೆ ಬೆಲೆ ಹೆಚ್ಚಿಸಬೇಕೆಂದು ಅಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾವು ನೇಕಾರಿಕೆ ನಂಬಿ ಜೀವನ ಸಾಗಿಸುತ್ತಿದ್ದು ಇಲ್ಲಿಯವರೆಗೂ ಸೂಕ್ತ ಮಾರುಕಟ್ಟೆ ಇಲ್ಲ ಜೊತೆಗೆ ಬೆಲೆ ಏರಿಕೆ ಬಿಸಿ ಬೇರೆ, ನೇಕಾರರನ್ನು ಸರ್ಕಾರ ಪರಿಗಣಿಸುತ್ತಿಲ್ಲ ನಮ್ಮ ಕಷ್ಟ ಕೇಳುವವರಿಲ್ಲ, ನಮ್ಮಗೂ ಜೀವಿಸುವ ಹಕ್ಕಿದೆ ನೇಕಾರಿಕೆ ಮಾಡಲು ಒಳಸುವ ಕಚ್ಚ ಸಾಮಗ್ರಿಗಳ ಬೆಲೆ ಇಳಿಸಿ ನಮ್ಮ ಕಷ್ಟಕ್ಕೆ ಸೂಕ್ತ ಬೆಲೆ ನಿಗದಿ ಮಾಡಿ ನೇಕಾರರನ್ನು ಉಳಿಸಿ ಎಂದರು.
ಮಗ್ಗದ ಮಾಲೀಕರೆಲ್ಲ ಒಂದಾಗಿ
ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ ಇದೇ ಕಾರಣದಿಂದಾಗಿ ನಾವು ನೇಕಾರರ ಒಳಿತಿಗಾಗಿ ನಡೆಸುವ ಯಾವುದೇ ಹೊರಟಾಗಳು ಫಲ ನೀಡುತ್ತಿಲ್ಲ, 25ಕ್ಕೂ ಹೆಚ್ಚು ಮಗ್ಗಗಳನ್ನು ಓದಿರುವ ಎಲ್ಲಾ ಮಾಲೀಕರು ಒಟ್ಟಾಗಿ ಸೇರಿ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳಿ ಸ್ಥಳೀಯವಾಗಿ ನೇಕಾರ ಹೋರಾಟವನ್ನು ಬಲಿಷ್ಠಗೊಳಿಸಿದರೆ ನಮ್ಮ ಹೋರಾಟ ಜಯ ಸಾಧಿಸಲು ಮಾರ್ಗವಾಗುತ್ತದೆ ಎಂದರು.
ಇದು ಎಚ್ಚರಿಕೆ ಹೋರಾಟ
ತಾಲ್ಲೂಕಿನ ನೇಕಾರ ಬಂಧುಗಳಿಗೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಎಚ್ಚರಿಸುವ ಸಲುವಾಗಿ ಇಂದು ಸಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೇಕಾರರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಇಂದೇ ನಾವೆಲ್ಲರೂ ಎಚ್ಚೆದ್ದುಕೊಳ್ಳಬೇಕು ನೇಕಾರಿಕೆ ನಂಬಿ ಜೀವನ ಸಾಗಿಸುತ್ತಿರುವ ಪ್ರತಿ ಮಾಲೀಕ, ಕಾರ್ಮಿಕರು ಒನದಾಗಬೇಕು ಎಂದು ಮುಖಂಡ ಹೇಮಂತ್ ರಾಜು ತಿಳಿಸಿದರು.
ನೇಕಾರ ಮುಖಂಡ ವೆಂಕಟೇಶ್ ಮಾತನಾಡಿ ಇರಾನ್ ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗು ಪೆಟ್ರೋಲಿಯಂ ವಸ್ತುಗಳ ಬೆಲೆ ಗಗನಕ್ಕೆ ಏರಿಸಿರುವ ಕೇಂದ್ರ ಸರ್ಕಾರ ಮತ್ತು ಪಟ್ರೋಲಿಯಂ ಕಂಪನಿಗಳ ನಿಲುವು ದೇಶದ ಜವಳಿ ಉದ್ಯಮದ ಮೇಲೆ ಗಂಬೀರ ಪರಿಣಾಮ ಬೀರಿದೆ ನೇಕಾರಿಕೆ ಉದ್ಯಮದಲ್ಲಿ ತಯಾರಾಗುವ ಬಟ್ಟೆಗಳು ಮತ್ತು ಸೀರೆಗಳಿಗೆ ಪೆಟ್ರೋಲಿಯಂ ಉತ್ಪನ್ನಗಳಿಂದ(ದಾರ) ಎಳೆ ಉತ್ಪಾದನೆಯಾಗುತ್ತದೆ. ಜರಿ ಕೋನ್ ಎಲ್.ಟಿ ಕೋನ್ ವಾರ್ಪುಗಳಿಗೆ ಖಚ್ಚಾವಸ್ತುಗಳು ಇದರಿಂದಲೇ ತಯಾರಾಗುತ್ತದೆ.ಯುದ್ಧ ಪ್ರಾರಂಭದನಂತರ ಪಾಲಿಷ್ಟರ್ ಉತ್ಪನ್ನಗಳನ್ನು ತಯಾರು ಮಾಡುವ ಕಂಪನಿಗಳು ಮತ್ತು ಸಗಟು ಮಾರಾಟಗಾರರು ಕಳೆದ ಆರು ತಿಂಗಳಿಂದ ಕೃತಕ ಅಭಾವವನ್ನು ಸೃಷ್ಟಿಸಿ %30ರಿಂದ40 ಪರ್ಸೆಂಟ್ ಬೆಲೆ ಏರಿಸಿದ್ದಾರೆ ಈ ಬೆಲೆ ಏರಿಕೆಯಿಂದ ಸೀರೆಗಳ ಉತ್ಪಾದನಾ ವೆಚ್ಚ %40ರಷ್ಟು ಹೆಚ್ಚಾಗಿದೆ ಸೀರೆ ಮಾರುಕಟ್ಟೆಯಲ್ಲಿ ಈಗಾಗಲೆ ಗುಜರಾತ್ ನ ಆಧುನಿಕ ತಂತ್ರಜ್ಞಾನ ಮಗ್ಗಗಳಲ್ಲಿ ಉತ್ಪಾದಿಸಿದ ಸೀರೆಗಳ ಮುಂದೆ ಪೈಪೋಟಿ ಮಾಡಲಾಗದೆ ಆತಂಕ ಸ್ಥಿತಿಯಲ್ಲಿ ನೇಕಾರರಿಗೆ ಬೆಲೆ ಏರಿಕೆ ಬರಸಿಡಿಲಿನಂತಾಗಿದೆ ಸೀರೆ ಮಾರುಕಟ್ಟೆಯಲ್ಲಿ ಈಗಾಗಲೆ ಅಮಾನಿ ಇದೆ ಈ ಪರಿಸ್ಥಿತಿ ಸರಿಪಡಿಸಲು ಸರ್ಕಾರ ಮುಂದಾಗಬೇಕು ಎಂದರು.
ಪ್ರತಿಭಟನಾಕಾರರು ಈ ವೇಳೆ ನೇಕಾರರ ಸಮಸ್ಯೆಯನ್ನು ಬಗೆಹರಿಸುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು

ಮುಖಂಡ ಪಿ ಎ ವೆಂಕಟೇಶ್ ಮಾತನಾಡಿ ಸೀರೆಗಳಿಗೆ ಬೆಲೆ ಇಲ್ಲದೆ ನಷ್ಟದ ಅಂಚಿನಲ್ಲಿ ಉದ್ಯಮ ನಡೆಯುತ್ತಿದೆ ಖಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಒಂದು ಸೀರೆ ಉತ್ಪಾದನಾ ವೆಚ್ಚದಲ್ಲಿ 100ರಿಂದ 150ರುಗಳು ಹೆಚ್ಚಾಗಿದೆ ನೇಕಾರರು ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲಾಗದೆ ಕಂಗಾಲಾಗಿದ್ದು ಉದ್ಯಮ ನಡೆಸುವುದೇ ದುಸ್ತರವಾಗಿದೆ. ಇದಷ್ಟೆ ಅಲ್ಲದೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೆ ಏರಿದ್ದು ಬಡವರು ಮದ್ಯಮ ವರ್ಗದವರು ಹಾಗು ನೇಕಾರರಿಗೆ ಬೆಲೆ ಏರಿಕೆಯಿಂದ ಜೀವನ ವೆಚ್ಚ ದುಭಾರಿಯಾಗಿದ್ದು ಅಪಾರ ತೊಂದರೆಗೆ ಸಿಲುಕಿದ್ದಾರೆ. ಪೆಟ್ರೋಲಿಯಂ ಬೆಲೆಗಳನ್ನು ಇಳಿಸಲು ಕೃತಕ ಅಭಾವ ಸೃಷ್ಟಿಸಿರುವ ಸಗಟು ಮಾರಾಟಗಾರರನ್ನು ನಿಯಂತ್ರಿಸಿ ನೇಕಾರರನ್ನು ಉಳಿಸಲು ಸರ್ಕಾರ ಮದ್ಯೆ ಪ್ರವೇಶ ಮಾಡಿ ಸಮಸ್ಯೆಯನ್ನು ಬಗೆ ಹರಿಸಲು ಒತ್ತಾಯಿಸುತ್ತೇವೆ ಎಂದರು.

ಈ ವೇಳೆ ಬೆಂಗಳೂರು ಟೆಕ್ಸಟೈಲ್ ಬ್ಯಾಂಕ್ ಅಧ್ಯಕ್ಷ ವೆಂಕಟರಮಣಯ್ಯ, ನೇಕಾರ ಮಹಾಮಂಡಳಿ ಅಧ್ಯಕ್ಷ ಪಿ. ಸಿ.ವೆಂಕಟೇಶ, ಜಂಟಿ ಕಾರ್ಯದರ್ಶಿ ಅಮರ್ನಾಥ್ ,ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ವೆಂಕಟೇಶ, ದೊಡ್ಡಬಳ್ಳಾಪುರ ವೀವರ್ಸ್ ಅಸೋಸಿಯೇಷನ್ ಅಧ್ಯಕ್ಷ ನರಸಿಂಹಮೂರ್ತಿ, ಹೋರಾಟ ಸಮಿತಿಯ ಮಲ್ಲೇಶ್, ಸಿಪಿಐ( ಎಂ ) ಮುಖಂಡ ಪಿ ಎ ವೆಂಕಟೇಶ್, ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.




